27.6 C
Bengaluru
Friday, October 11, 2024

ಖಾತೆ ಖಾಲಿ ಇದ್ದಾಗ ಬ್ಯಾಂಕ್ ನೀಡುವ ಮುಂಗಡ ಹಣದ ಇಲ್ಲಿದೆ ಮಾಹಿತಿ

ಬೆಂಗಳೂರು, ಮೇ. 27 : ಬ್ಯಾಂಕ್ ನಲ್ಲಿ ಕೆಲವರಿಗೆ 10 ಸಾವಿರ ಹಣವನ್ನು ಖಾತೆಯಲ್ಲಿ ಇಲ್ಲದಿದ್ದರೂ ಡ್ರಾ ಮಾಡಲು ಅವಕಾಶವಿರುತ್ತದೆ. ಇದು ಜನ್ಧನ್ ಯೋಜನೆಯಲ್ಲಿ ಖಾತೆ ಹೋಂದಿರುವವರಿಗೂ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಓವರ್ ಡ್ರಾಫ್ಟ್ ಅರ್ಥ ವರ್ಷಗಳಲ್ಲಿ ಬದಲಾಗಿದ್ದರೂ, ಮುಖ್ಯ ಸಾರವು ಇನ್ನೂ ಒಂದೇ ಆಗಿರುತ್ತದೆ. ಒಬ್ಬ ವ್ಯಕ್ತಿಯು ವ್ಯವಹಾರಕ್ಕಾಗಿ ಸಾಕಷ್ಟು ಹಣವನ್ನು ಹೊಂದಿಲ್ಲದಿದ್ದರೆ, ಆದರೆ ಹೇಗಾದರೂ ಮಾಡಲು ಬ್ಯಾಂಕ್ ಅವರಿಗೆ ಅವಕಾಶ ನೀಡಿದಾಗ ಅದನ್ನು ಓವರ್ಡ್ರಾಫ್ಟ್ ಎಂದು ಕರೆಯಲಾಗುತ್ತದೆ.

ಓವರ್ಡ್ರಾಫ್ಟ್ ವ್ಯಾಖ್ಯಾನವು ಬದಲಾಗಬಹುದು. ಸಾಮಾನ್ಯ ಓವರ್ಡ್ರಾಫ್ಟ್ ವ್ಯಾಖ್ಯಾನವೆಂದರೆ ಖಾತೆದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಶೂನ್ಯವಾಗಿದ್ದರೂ ವಹಿವಾಟು ಮಾಡಬಹುದು. ಓವರ್ಡ್ರಾಫ್ಟ್ ಅರ್ಥವನ್ನು ಅರ್ಥಮಾಡಿಕೊಳ್ಳಲು ತುಲನಾತ್ಮಕವಾಗಿ ಸುಲಭವಾಗಿದೆ. ಮೂಲಭೂತವಾಗಿ, ಓವರ್ಡ್ರಾಫ್ಟ್ ಎಂದರೆ ಬ್ಯಾಂಕ್ ಗ್ರಾಹಕರು ವಹಿವಾಟು ಮಾಡಲು ಅನುಮತಿಸುವ ಪರಿಸ್ಥಿತಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ನೀವು ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳುತ್ತೀರಿ.

ಬ್ಯಾಂಕ್ ಅದರ ಮೇಲೆ ಸ್ವಲ್ಪ ಬಡ್ಡಿಯನ್ನು ವಿಧಿಸುತ್ತದೆ. ಹೀಗೆ ಝೀರೋ ಬ್ಯಾನ್ಸ್ ಇರುವವರು ಮುಂಗಡವಾಗಿ ಹಣ ಪಡೆಯುವುದನ್ನು ಓವರ್ ಡ್ರಾಫ್ಟ್ ಎಂದು ಕರೆಯಲಾಗುತ್ತದೆ. ಇನ್ನು ಈ ಯೋಜನೆ ಯಾರಿಗೆ ದೊರೆಯುತ್ತದೆ ಎಂದರೆ, ಬ್ಯಾಂಕ್ ನಲ್ಲಿ ಹೆಚ್ಚು ವ್ಯವಹಾರ ಮಾಡುವವರಿಗೆ ಸಿಗುತ್ತದೆ. ಬ್ಯಾಂಕ್ ನಲ್ಲಿ ಒಂದೂ ನೆಗೆಟಿವ್ ಲೈನ್ ಪಡೆಯದೇ, ಉತ್ತಮವಾಗಿ ವಹಿವಾಟು ನಡೆಸಿದ ಗ್ರಾಹಕರಿಗೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತದೆ.

ಇನ್ನು ಇತ್ತೀಚೆಗಷ್ಟೇ ಬಡವರಿಗೂ ಸಹಾಯವಾಗಲಿ ಎಂದು ಜನ್ ಧನ್ ಖಾತೆ ಹೊಂದಿರುವ ಗ್ರಾಮೀಣ ಪ್ರದೇಶದ ಜನೆತೆಗೂ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹತ್ತು ಸಾವಿರ ರೂಪಾಯಿ ವರೆಗೂ ಓವರ್ ಡ್ರಾಫ್ಟ್ ಮಾಡಲು ಅವಕಾಶವಿರುತ್ತದೆ. ಆದರೆ, ಇದಕ್ಕೆ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು.

Related News

spot_img

Revenue Alerts

spot_img

News

spot_img