28.2 C
Bengaluru
Friday, September 20, 2024

ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ವಾಟ್ಸಪ್ ಮೂಲಕವೇ ಪರಿಶೀಲಿಸಬಹುದು

ಬೆಂಗಳೂರು, ಜು. 28: ವಾಟ್ಸಪ್ ಮೂಲಕವೂ ಈಗ ಹಣ ವರ್ಗಾವಣೆ ಮಾಡಬುಹುದು. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಕೂಡ ಈಗ ವಾಟ್ಸಪ್ ಸೇವೆಯನ್ನು ಪ್ರಾರಂಭಿಸಿದೆ. ವಾಟ್ಸಪ್ ಮೂಲಕ ನಿಮ್ಮ ಅಕೌಂಟ್ ನಲ್ಲಿ ಎಷ್ಟು ಬ್ಯಾಲೆನ್ಸ್ ಇದೆ. ಹಾಗೂ ಮಿನಿ ಸ್ಟೇಟ್ ಮೆಂಟ್ ಅನ್ನು ಕೂಡ ಪಡೆಯಬಹುದಾಗಿದೆ. ಕೆಲ ತಿಂಗಳ ಹಿಂದಷ್ಟೇ ಎಸ್ʼಬಿಐ ಬ್ಯಾಂಕ್ ಈ ಸೇವೆಯನ್ನು ಆರಂಭಿಸಿದೆ. ಈ ಸೇವೆಯ ಮೂಲಕ ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಮೊದಲು ವಾಟ್ಸಪ್ ನಲ್ಲಿ ಎಸ್ʼಬಿಐ ಬ್ಯಾಂಕಿಂಗ್ ಸೇವೆಗೆ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ನೀವು ಒಂದು ಎಸ್ ಎಂಎಸ್ ಅನ್ನು ಮಾಡಬೇಕು. WAREG ಎಂದು ಟೈಪ್ ಮಾಡಿ ಸ್ಪೇಸ್ ಕೊಡಿ. ಬಳಿಕ ಅಲ್ಲಿ ನೀವು ನಿಮ್ಮ ಖಾತೆಯ ಸಂಖ್ಯೆಯನ್ನು ಟೈಪ್ ಮಾಡಿ. ನಂತರ ಇದನ್ನು 7208933148 ಸಂಖ್ಯೆಗೆ ಸೆಂಡ್ ಮಾಡಿ. ಅದು ಕೂಡ ನಿಮ್ಮ ಖಾತೆಗೆ ನೀಡಿರುವ ನಂಬರ್ ಮೂಲಕವೇ ಈ ಎಸ್ʼಎಂಎಸ್ ಮಾಡಬೇಕು. ಆಗ ನಿಮ್ಮ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ನಂತರ ಕೆಲವೇ ಸಮಯದಲ್ಲಿ ನಿಮ್ಮ ವಾಟ್ಸಪ್ ಗೆ ಸಂದೇಶವೊಂದು ಬರುತ್ತದೆ. 9022690226 ಸಂಖ್ಯೆಯಿಂದ ಮೆಸೇಜ್ ಬಂದಿರುತ್ತದೆ. ಇದನ್ನು ನೀವು ಸೇವ್ ಮಾಡಿಕೊಳ್ಳಬಹುದು. ಅಲ್ಲಿಗೆ ನಿಮ್ಮ ರಿಜಿಸ್ಟ್ರೇಷನ್ ಪ್ರಕ್ರಿಯೆ ಸಕ್ಸಸ್ ಆಗಿದೆ ಎಂದರ್ಥ. ಬಳಿಕ ನಿಮಗೆ ವಾಟ್ಸಪ್ ಬ್ಯಾಮಕಿಂಗ್ ಮಾಡಬೇಕಿದ್ದರೆ, Hi SBI ಎಂದು ಅದೇ ನಂಬರ್ ಗೆ ಮೆಸೇಜ್ ಕಳುಹಿಸಿ. ಆಗ ನಿಮಗೆ ಕೆಲ ಆಯ್ಕೆಗಳಿರುವ ಮೆಸೇಜ್ ಬರುತ್ತದೆ. ಂಎಸೇಜ್ ಅನ್ನು ಫಾಲೋ ಮಾಡಿ.

ಇದರಲ್ಲಿ ನಿಮಗೆ ಯಾವ ಸೇವೆ ಬೇಕೋ ಅದನ್ನೇ ನೀವು ಕಳಿಸಬೇಕಾಗುತ್ತದೆ. ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿಯಬೇಕೆಂದರೆ, 1 ಆಪ್ಷನ್ ಅನ್ನು ಕಳುಹಿಸಿ. ಇಲ್ಲವೇ ಮಿನಿ ಸ್ಟೇಟ್ ಮೆಂಟ್ ಬೇಕೆಂದರೆ 2 ಎಂದು ಟೈಪ್ ಮಾಡಿ. ಇಲ್ಲವೇ ರಿಜಿಸರ್ ಅನ್ನು ಮರು ಪಡೆಯಲು ನಂಬರ್ 3 ಅನ್ನು ಕಳುಸಹಿಸಿ. ನಿಮ್ಮ ಆಪ್ಷನ್ ಗೆ ರಿಪ್ಲೈ ಬರುತ್ತದೆ. ಇನ್ನು ಸೇವೆಯನ್ನು ಈಗಾಗಲೇ ಬ್ಯಾಂಕ್ ಆಫ್ ಬರೋಡಾ, ಐಡಿಎಫ್ʼಸಿ, ಐಸಿಐಸಿಐ ಬ್ಯಾಂಕ್ ಮತ್ತು ಐಡಿಎಫ್ʼಸಿ ಫಸ್ಟ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ನಲ್ಲೂ ಈ ಸೇವೆ ಲಭ್ಯವಿದೆ.

Related News

spot_img

Revenue Alerts

spot_img

News

spot_img