22.8 C
Bengaluru
Thursday, June 20, 2024

Environment: 2050 ಕ್ಕೆ ಮಾನವ ಬಾಂಬ್ ಸ್ಫೋಟ…!!

#Environmental Law #world Population, #save Earth

ಬೆಂಗಳೂರು, ಅ. 16: 2050 ಕ್ಕೆ ಮಾನವ ಬಾಂಬ್ ಸ್ಫೋಟ…!! ನಾವು ಈವರೆಗೆ ಯುದ್ದಗಳಲ್ಲಿ ಬಳಸುವ ಅಟಮ್ ಬಾಂಬ್‌ ಗಳ ಸ್ಫೋಟದ ಬಗ್ಗೆ ಕೇಳಿದ್ದೇವೆ. ಆದ್ರೆ ಮಾನವ ಬಾಂಬ್ ಬಗ್ಗೆ ಕೇಳಿಲ್ಲ. ಈ ಬಾಂಬ್‌ ಸ್ಫೋಟಗೊಂಡರೆ ಇಡೀ ಮನುಕುಲವೇ ನಾಶವಾಗಬಹುದು! ಈ ದೇಶ, ಅ ದೇಶ ಅಂತ ಯಾವುದು ಇಲ್ಲ. ಇಡೀ ವಿಶ್ವ ಸಮುದಾಯಕ್ಕೆ ಇಂತಹ ಅಪಾಯದ ಮುನ್ಸೂಚನೆ ಇದೆ!

Human Bomb Blast ( 2050 ಕ್ಕೆ ಮಾನವ ಬಾಂಬ್ ಸ್ಫೋಟ)

ಏನಿದು ಮಾನವ ಬಾಂಬ್ ಅಂತೀರಾ. ಹೆಚ್ಚುತ್ತಿರುವ ಜನ ಸಂಖ್ಯೆಯೇ ಮಾನವ ಬಾಂಬ್. ಮನುಷನಿಗೆ ಇರುವ ಶಕ್ತಿಯಂತೆ ಭೂಮಿಗೂ ತನ್ನ ಒಡಲಲ್ಲಿ ಇಂತಿಷ್ಟು ಮಂದಿಯನ್ನು ಸಾಕುವ ಶಕ್ತಿಯಿದೆ. ಆ ಶಕ್ತಿ ಮೀರಿದರೆ ಭೂಮಿ ಕೂಡ ಅಸಹಾಯಕವಾಗಬಹುದು!. ಆ ಅಸಹಾಯಕತೆ ಎದುರಾದ ದಿನ ಇಡೀ ಮನುಕುಲವೇ ನಾಶವಾಗಬಹುದು. ಅಂತಹ ಅಪಾಯದ ಸಮೀಪ ವಿಶ್ವ ಹೆಜ್ಜೆ ಇಡುತ್ತಿದೆ.

Earth Capacity and world Population 

ಜನ ಸಂಖ್ಯೆ ಬಳೆಯುತ್ತಿರುವಂತೆ ಭೂಮಿ ಬೆಳೆಯಲಾಗದು. ಭೂಮಿಯ ವ್ಯಾಪ್ತಿ, ಸಂಪನ್ಮೂಲಗಳು ಸ್ಥಿರವಾದುದು. ಆದರೆ ಜನ ಸಂಖ್ಯೆ ಅಗಲ್ಲ. ಒಂದು ದಿನಕ್ಕೆ ವಿಶ್ವದಲ್ಲಿ 2 ಲಕ್ಷ ಮಂದಿ ಜನಿಸುತ್ತಿದ್ದಾರೆ. ಪ್ರತಿ ತಿಂಗಳು 60 ಲಕ್ಷ. ಪ್ರತಿ ವರ್ಷ 7 ಕೋಟಿ. ಪ್ರತಿ ಹತ್ತು ವರ್ಷಕ್ಕೆ ಸರಾಸರಿ 10 ಕೋಟಿ ಮಂದಿ ವಿಶ್ವದಲ್ಲಿ ಜನಿಸುತ್ತಿದ್ದಾರೆ. ಪ್ರತಿ ಹತ್ತು ವರ್ಷಕ್ಕೆ ನೂರು ಕೋಟಿ ಮಂದಿ ಜನಿಸುತ್ತಿದ್ದಾರೆ. ಪ್ರತಿ ದಿನ ವಿಶ್ವದಲ್ಲಿ 1.50 ಲಕ್ಷ ಮಂದಿ ಸಾಯುತ್ತಿದ್ದರೂ ( ಅದು ಘಟನೆ ಆಧರಿಸಿ) ಜನ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ.

ಪ್ರಸ್ತುತ ವಿಶ್ವ 806 ಕೋಟಿ ತಲುಪಿದೆ. 2050 ರ ವೇಳೆಗೆ ಈ ಸಂಖ್ಯೆ 1000 ಸಾವಿರ ಕೋಟಿ ತಲುಪಲಿದೆ ಎಂದು ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಸಕಲ ಜಲಾಚರಗಳನ್ನು ಹೊಂದಿರುವ ಈ ಭೂಮಿಗೆ ಒಂದು ಸಾವಿರ ಕೋಟಿ ಜನರನ್ನು ಸಾಕುವ ಜೀವನಾಧಾರ ಶಕ್ತಿ ಹೊಂದಿದೆಯೇ ?

ಥಾಮಸ್‌ ವಾಲ್ತಸ್‌ ಹೇಳಿದ್ದೇನು ?

ಖಂಡಿತಾ ಇಲ್ಲ. ಇದನ್ನೇ ಮಾನವ ಬಾಂಬ್ ಸ್ಫೋಟ ಅಂತ ಕರೆಯುವುದು. 18 ನೇ ಶತಮಾನದಲ್ಲಿ ಇಂಗ್ಲೆಂಡ್‌ ಮೂಲದ ಅರ್ಥಶಾಸ್ತ್ರಜ್ಞ ಥಾಮಸ್ ರಾಬರ್ಟ್ ವಾಲ್ತಸ್ ಜನಸಂಖ್ಯೆ ಸ್ಫೋಟದಿಂದ ಅಗುವ ಭವಿಷ್ಯದ ಪರಿಣಾಮ ಬಗ್ಗೆ ತನ್ನ An ESSAY ON THE PRINICIPAL OF POPULATION ನಲ್ಲಿ ವಿವರಿಸಿದ್ದಾರೆ. ಇವರು ಹೇಳುವ ಪ್ರಕಾರ ಭೂಮಿಗೆ ಇರುವ ಜೀವನಾಧಾರ ಶಕ್ತಿ ( ಮನುಷ್ಯನ ಅಗತ್ಯತೆಗಳನ್ನು ಪೂರೈಸುವ ಶಕ್ತಿ) ಕೇವಲ 850 ಕೋಟಿ ಜನರಿಗೆ ಮಾತ್ರ. ಅದ್ರೆ 2050 ರ ವೇಳೆಗೆ ವಿಶ್ವದ ಜನ ಸಂಖ್ಯೆ 950 ಕೋ ಟಿ ರೂ. ದಾಟಲಿದೆ. ಆಗ ಭೂಮಿ ಮನುಷ್ಯನ ಜೀವನಾಧಾರಣ ಶಕ್ತಿಯನ್ನು ಕಳೆದುಕೊಳ್ಳಬಹುದು ಎಂದು ವ್ಯಾಖ್ಯಾನಿಸಿದ್ದಾರೆ. ಇವರ ಪ್ರಕಾರ ಅಷ್ಟು ಮಂದಿಗೆ ಅಗತ್ಯ ಗಾಳಿ, ನೀರು, ಸೌರ ಶಕ್ತಿಯನ್ನು ನೀಡುವ ಶಕ್ತಿ ಭೂಮಿ ಕಳೆದುಕೊಳ್ಳಲಿದೆ. ಇದರಿಂದ ಮನುಕುಲ ನಾನಾ ಸಂಕಷ್ಟಗಳನ್ನು ಎದುರಿಸಲಿದೆ. ಕುಡಿಯಲು ನೀರು ಇಲ್ಲದ ಪರಿಸ್ಥಿತಿ ಎದುರಾಗಬಹದು ಎಂದು ಎಚ್ಚರಿಸಿದ್ದಾರೆ.

2050 ಕ್ಕೆ ಭೂಮಿ ಏನಾಗಲಿದೆ ?

ಮಾನವನ ಜೀವನ ಕೇವಲ ಸಂಪತ್ತು ಒಂದರಿಂದಲೇ ಸಾಗದು. ಮನುಷ್ಯ ಜೀವಿಸಲು ಪರಿಶುದ್ಧ ಗಾಳಿ ಬೇಕು. ನೀರು ಬೇಕು. ಆಹಾರ ಬೇಕು. ಆದರೆ ಇದನ್ನು ಕೊಡುವುದು ಭೂಮಿ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಭೂಮಿಯಲ್ಲಿರುವ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಮನಸೋ ಇಚ್ಛೆ ಬಳಸಲಾಗುತ್ತಿದೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ಇದಕ್ಕೆ ನಿದರ್ಶನವೆಂದರೆ ಈಗಾಗಲೇ ಓಜೋನ್ ಪದರ ಅಪಾಯದಲ್ಲಿದೆ. ವಾಯು ಮಾಲಿನ್ಯ ಮಿತಿ ಮೀರಿದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಪ್ರತಿ ವ್ಯಕ್ತಿಗೆ ದಿನಕ್ಕೆ 2 ಲೀಟರ್‌ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಇನ್ನು ಆಹಾರದ ಬಗ್ಗೆ ಮಾತನಾಡುವ ಹಾಗಿಲ್ಲ. ಎಷ್ಟೋ ದೇಶಗಳಲ್ಲಿ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. ಇಂತಹ ಅಪಾಯದಲ್ಲಿ ನಾವಿದ್ದೇವೆ. ಇನ್ನು 2050 ರ ವೇಳೆಗೆ ಭೂಮಿಯ ಜೀವನಾಧಾರಕ ಶಕ್ತಿಗಿಂತಲೂ ಹೆಚ್ಚು ಜನಸಂಖ್ಯೆ ಸೃಷ್ಟಿಯಾಗಲಿದೆ. ಈಗಾಗಲೇ ಭೂಮಿಯ ಜೀವನಾಧಾರಕ ಶಕ್ತಿಯ ಜನಸಂಖ್ಯೆ ಮೀರಿದ್ದೇವೆ.

ಒಮ್ಮೆ ಜನಸಂಖ್ಯೆ ಭೂಮಿಯ ಕೆಪಾಸಿಟಿಗಿಂತಲೂ ಹೆಚ್ಚಾದಾಗ ನಿಸರ್ಗದತ್ತವಾಗಿ ಏನೆಲ್ಲಾ ಅವಘಡಗಳು ಸಂಭವಲಿವೆಯೋ ಗೊತ್ತಿಲ್ಲ. ಪರಿಸರ ಮಾಲಿನ್ಯದಿಂದ ಭೂಮಿಯ ತಾಪಮಾನ ಹೆಚ್ಚುತ್ತಿದೆ. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾಗತಿಕವಾಗಿ ಅನೇಕ ಸಮ್ಮೇಳನ ಸಮಾವೇಶ, ಒಪ್ಪಂದಗಳು ಏರ್ಪಟ್ಟರೂ ಉದ್ದೇಶಿತ ಗುರಿ ಸಾಧನೆ ಅಗುತ್ತಿಲ್ಲ. ಹೀಗಾಗಿ ವಿಶ್ವದಲ್ಲಿ ಹೀಗಾಗಲೇ ತಾಪಮಾನ ಜಾಸ್ತಿಯಾಗಿದೆ. ಅಸಹಜ ಪ್ರವಾಹ, ಬರಗಾಲ, ಹಿಮಗಡ್ಡೆಗಳ ಕರಗಿ ಸಮುದ್ರಗಳ ನೀರಿನ ಮಟ್ಟ ಜಾಸ್ತಿಯಾಗುತ್ತಿದೆ. ಪರಿಸರ ಸಂಬಂಧಿ ಅವಘಡಗಳು ಒಂದಲ್ಲಾ ಒಂದು ದೇಶದಲ್ಲಿ ಮರುಕಳಿಸುತ್ತಿವೆ. ಜನ ಸಂಖ್ಯೆ ಹೆಚ್ಚಳದ ಪ್ರಮಾಣ ಇಂತಹ ನೈಸರ್ಗಿಕ ವಿಕೋಪಗಳು ಘಟಿಸುತ್ತಿವೆ. ಇದನ್ನೇ “ಮಾನವ ಬಾಂಬ್‌ ಸ್ಫೋಟ” ಎಂದೇ ಪರಿಗಣಿಸಲಾಗುತ್ತಿದೆ.

ಭೂಮಿಯು ತನ್ನ ಶಕ್ತಿ ಮೀರಿ ಜನರನ್ನು ಪೋಷಣೆ ಮಾಡಲು ಅಸಾಧ್ಯ. ಜನ ಸಂಖ್ಯೆಗೆ ಅನುಗುಣವಾಗಿ ಆಹಾರ ಪದಾರ್ಥಗಳ ಉತ್ಪಾದನೆ ಅಸಾಧ್ಯ. ಪರಿಸರ ವಿಕೋಪಗಳನ್ನು ತಡೆಯಲು ಯಾವ ದೇಶದಿಂದಲೂ ಸಾಧ್ಯವಿಲ್ಲ. ಇಂತಹ ಅಪಾಯದ ಹಂತ ತಲುಪಿರುವ ಮಾನವ ಸಮುದಾಯ ಭೂಮಿಯನ್ನು ರಕ್ಷಿಸುವ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಪರಿಸರದ ಮೇಲಿನ ಮಾನವ ದಾಳಿ ನಿರಂತರ ಸಾಗಿದೆ. ಹೀಗಾಗಿ ವಿಶ್ವದ ಭವಿಷ್ಯ ಕರಾಳವಾಗಲಿದೆ ಎಂದೇ ವಿಜ್ಞಾನಿಗಳು ಭಾವಿಸಿದ್ದಾರೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು

ಭಾರತ – 143 ಕೋ ಟಿ

ಚೀನಾ – 142 ಕೋ ಟಿ

ಯುಎಸ್‌ಎ- 34 ಕೋಟಿ

ಇಂಡೋನೇಷಿಯಾ – 27 ಕೋಟಿ

ಪಾಕಿಸ್ತಾನ್ – 27 ಕೋಟಿ

ಪರಿಸರ ಸಂರಕ್ಷಣೆ ನಮ್ಮ ಹೊಣೆ:

ಭೂಮಿಯ ನೈಸರ್ಗಿಕ ಸಂಪತ್ತುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿಶ್ವ ಮುಂದಡಿ ಇಡಬೇಕು. ಮೊಟ್ಟ ಮೊದಲಿಗೆ ಜನ ಸಂಖ್ಯೆ ಸ್ಫೋಟಕ್ಕೆ ಕಡಿವಾಣ ಹಾಕಬೇಕು. ಬಹುಮುಖ್ಯವಾಗಿ ಈ ಭೂಮಿಯ ಅಸ್ಮಿತೆಯನ್ನು ಕಾಪಾಡಬೇಕು. ಪರಿಸರ ಸಂರಕ್ಷಣೆ ಇಲ್ಲದೇ ನಮ್ಮ ಉಳಿಗಾಲವಿಲ್ಲ ಎಂಬುದನ್ನು ಅರಿತು ಪ್ರತಿಯೊಬ್ಬರು ಸ್ವಯಂಪ್ರೇರಿತವಾಗಿ ಭೂಮಿಯನ್ನು ರಕ್ಷಿಸಬೇಕಿದೆ. ಜನ ಸಂಖ್ಯೆಯ ಮೇಲೂ ನಿಯಂತ್ರಣ ಹಾಕಬೇಕಿದೆ. ಚೈನಾ, ಭಾರತ ಸೇರಿದಂತೆ ಜನ ಸಂಖ್ಯೆ ಹೆಚ್ಚುತ್ತಿರುವ ದೇಶಗಳಲ್ಲಿ ಕಡ್ಡಾಯವಾಗಿ ಜನ ಸಂಖ್ಯೆ ನಿಯಂತ್ರಣ ಪಾಲಿಸಿಗಳನ್ನು ಅತಿ ಶಿಸ್ತು ಬದ್ಧವಾಗಿ ಜಾರಿಗೆ ತರಬೇಕಿದೆ. ಇಲ್ಲದಿದ್ದರೆ ನೈಸಗಿರ್ಕವಾಗಿ ಘಟಿಸುವ ವಿಪತ್ತುಗಳಿಗೆ ಬೆಲೆ ತತ್ತಲು ಎಲ್ಲರೂ ಸಿದ್ಧವಾಗಲೇಬೇಕು! ಇಲ್ಲದಿದ್ದರೆ ಭೂಮಿ ಕೊಡುವ ಉಡುಗೊರೆಗಳನ್ನು ವಿಶ್ವ ಸ್ವೀಕರಿಸಲೇಬೇಕು.

Related News

spot_img

Revenue Alerts

spot_img

News

spot_img