#Emergency panic button #installation #mandatory # public service #vehicles #Important order # Govt
ಬೆಂಗಳೂರು, ನ 28:ಪಬ್ಲಿಕ್ ಟ್ರಾನ್ಸ್‌ಪೋರ್ಟ್ ವೆಹಿಕಲ್‌ಗಳಿಗೆ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (VLT), ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಸಾಕಷ್ಟು ನಿಯಮಗಳು ಜಾರಿಯಾಗುತ್ತಿವೆ. ಇದೀಗ ಸಾರ್ವಜನಿಕ ಸೇವಾ ವಾಹನಗಳಿಗೆ ಡಿ. 1 ರಿಂದ ವೆಹಿಕಲ್ ಲೊಕೇಶನ್ ಟ್ರಾಕಿಂಗ್ ಡಿವೈಸ್ (Vehicle Location Tracking Device – VLT) ಅಳವಡಿಕೆ ಕಡ್ಡಾಯಗೊಳಿಸಿದೆ. ಈ ಬಗ್ಗೆ ಕೇಂದ್ರದಿಂದ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ. ಯೆಲ್ಲೋ ಬೋರ್ಡ್ ಟ್ಯಾಕ್ಸಿ, ಕ್ಯಾಬ್, ಖಾಸಗಿ ಬಸ್, ನ್ಯಾಷನಲ್ ಪರ್ಮಿಟ್ ಹೊಂದಿರುವ ವಾಹನಗಳು ಇದನ್ನು ಅಳವಡಿಸಿಕೊಳ್ಳಬೇಕಿದೆ. VLT ವಿಥ್ ಪ್ಯಾನಿಕ್ ಬಟನ್ ಬೆಲೆ (GST ಹೊರತು ಪಡಿಸಿ) ₹7599 ಆಗಿದೆ.ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಸಾರ್ವಜನಿಕ ಸೇವೆ ಇರುವ ಖಾಸಗಿ ವಾಹನಗಳಿಗೆ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕೆಲಸ ಶೀಘ್ರವಾಗಿ ಆಗಬೇಕಿರುವುದರಿಂದ ಆರ್ ಟಿಒಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳಿಗೆ ಮಾತ್ರ ಎಫ್.ಸಿ ನವೀಕರಣಕ್ಕೆ ಸೂಚನೆ ನೀಡಲಾಗಿದೆ.ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಸಾಕಷ್ಟು ನಿಯಮಗಳು ಜಾರಿಯಾಗುತ್ತಿವೆ.
Emergency panic button installation for public service vehicles
ಯೆಲ್ಲೋ ಬೋರ್ಡ್ನ ಟ್ಯಾಕ್ಸಿಗಳು, ಕ್ಯಾಬ್ಗಳು, ಖಾಸಗಿ ಬಸ್ಗಳು, ನ್ಯಾಷನಲ್ ಪರ್ವಿುಟ್ ಹೊಂದಿರುವ ಗೂಡ್ಸ್ ವಾಹನಗಳಿಗೆ ಅನ್ವಯ.ವಿಎಲ್(VLT)ಟಿ ಮತ್ತು ಪ್ಯಾನಿಕ್ ಬಟನ್ ಈಗಾಗಲೇ ಅಳವಡಿಕೆ ಮಾಡಿರುವ ವಾಹನಗಳಿಗೂ ಮತ್ತೆ ಅಳವಡಿಕೆ ಮಾಡುವಂತೆ ಸೂಚಿಸಿರುವುದು ಸರಿಯಲ್ಲ. ಒಂದೊಮ್ಮೆ ಸಾಧನಗಳನ್ನು ಅಳವಡಿಕೆ ಮಾಡಲೇಬೇಕಾದರೆ ಸರ್ಕಾರ ಆರ್ಥಿಕವಾಗಿ ಸಹಾಯ ಮಾಡಬೇಕು.ವಿಎಲ್ಟಿ ಮಾನಿಟರಿಂಗ್(VLT Monitoring) ನಕ್ಷೆಯಲ್ಲಿ ವಾಹನಗಳ ನೈಜ-ಸಮಯದ ಟ್ರಾ್ಯಕಿಂಗ್(Tracking) ಮಾಡಲಾಗುತ್ತದೆ. ವಾಹನ ಎಲ್ಲಿದೆ? ಯಾವ ಮಾರ್ಗದಲ್ಲಿ ಪ್ರಯಾಣಿಸುತ್ತಿದೆ. ಮಾರ್ಗ ಬದಲಾವಣೆ ಸೇರಿ ಎಲ್ಲ ಮಾಹಿತಿ ಲಭ್ಯವಾಗಲಿದೆ. ಅತಿವೇಗ, ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಎಚ್ಚರಿಕೆ ಕೊಡಲಿದೆ. ವಾಹನದಲ್ಲಿ ಪ್ರಯಾಣಿಸುವ ತುರ್ತು ಪರಿಸ್ಥಿತಿ ಎದುರಾದಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಕಮಾಂಡ್ ಸೆಂಟರ್ಗೆ(Command center) ಜಾಗರೂಕತೆ ಸಂದೇಶ(Warning message) ರವಾನೆಯಾಗುತ್ತದೆ. ಕಮಾಂಡ್ ಸೆಂಟರ್ ತಕ್ಷಣ ಪ್ರತಿಕ್ರಿಯೆಸಲಿದ್ದು, ಸ್ಥಳೀಯ ಪೊಲೀಸರಿಗೆ ತಿಳಿಸಿ, ನೆರವಿಗೆ ಬರುವಂತೆ ಸೂಚಿಸಬಹುದು.