ನಂದಿ ಬೆಟ್ಟಕ್ಕೆ ತೆರಳಲಿರುವ ಪ್ರವಾಸಿಗರಿಗೆ ಇನ್ಮುಂದೆ ಡಿಸೆಂಬರ್ 11 ರಿಂದ ಎಲೆಕ್ಟ್ರಿಕ್ ಸಂಚಾರ ಆರಂಭವಾಗಲಿದೆ. ಇನ್ಮುಂದೆ ರೈಲು ಹತ್ತುವ ಮೂಲಕ ಸಿಲಿಕಾನ್ ಸಿಟಿ ನಿವಾಸಿಗಳು ನಗರದಿಂದ 65 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟಕ್ಕೆ ಮನ ಬಂದ ಸಮಯದಲ್ಲಿ ಪ್ರಯಾಣ ಮಾಡಬಹುದಾಗಿದೆ.
ನೈಋತ್ಯ ರೈಲ್ವೆ ಇಲಾಖೆಯಿಂದ ಮಾಹಿತಿ
ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ನಡುವೆ ಸಂಚರಿಸಲಾಗುವ ಮೆಮು (MAIN LINE ELECTRIC MULTIPLE UNIT) ರೈಲುಗಳನ್ನು ವಿಮಾನ ನಿಲ್ದಾಣ ಮಾರ್ಗದಲ್ಲಿ ವಿಸ್ತರಿಸುವುದಾಗಿ ನೈಋತ್ಯ ರೈಲ್ವೆ ಇಲಾಖೆ ಪ್ರಕಟಿಸಿದೆ.
ಯಾವಾಗಿಂದ ಕಾರ್ಯಾಚರಣೆ
ಇನ್ನು 06531, 06532 ಎಲೆಕ್ಟ್ರಿಕ್ ರೈಲುಗಳು ಡಿಸೆಂಬರ್ 1 ರಿಂದ ನಂದಿ ಬೆಟ್ಟಕ್ಕೆ ಪ್ರಯಾಣ ಆರಂಭಿಸಲಿವೆ..
ಯಾವ್ಯಾವ ರೈಲುಗಳು ನಂದಿ ರೈಲು ನಿಲ್ದಾಣದಲ್ಲಿ ನಿಲ್ಲಲಿವೆ.?
06387, 06388 ಕೆಎಸ್‌ಆರ್ ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯೂನಿಟ್ (ಡೆಮು) ಮತ್ತು 16549, 16550 ಕೆಎಸ್‌ಆರ್ ಬೆಂಗಳೂರು-ಕೋಲಾರ-ಕೆಎಸ್‌ಆರ್ ಬೆಂಗಳೂರು ಡೆಮು ರೈಲುಗಳು ನಂದಿ ನಿಲ್ದಾಣದಲ್ಲಿ ನಿಲ್ಲುತ್ತವೆ.
ಬೇಗ ನಂದಿಬೆಟ್ಟ ತಲುಪಲು ಎಲೆಕ್ಟ್ರಿಕ್ ರೈಲು ಹೆಲ್ಫ್ ಆಗಲಿದೆ
ಚಿಕ್ಕಬಳ್ಳಾಪುರದ ನಂದಿ ಬೆಟ್ಟದಂಚಿನಲ್ಲಿರುವ ನಂದಿ ನಿಲ್ದಾಣ ಮತ್ತು ಭೋಗನಂದೀಶ್ವರ ದೇವಾಲಯದ ನಡುವಿನ ಅಂತರ ಸುಮಾರು 1.5 ಕಿಲೋಮೀಟರನ್ನು ಮುಟ್ಟಲು, ಪ್ರವಾಸಿಗರು ಹೆಚ್ಚುವರಿ 15-18 ಕಿ.ಮೀ ಕ್ರಮಿಸಬೇಕಾಗುತ್ತದೆ.ಇನ್ನು ಆದಷ್ಟು ಬೇಗ ಎಲೆಕ್ಟ್ರಿಕ್ ರೈಲು ಬಂದಲ್ಲಿ ಪ್ರವಾಸಿಗರಿಗೆ ಬಹು ಮಟ್ಟಿಗೆ ಸಹಕಾರಿಯಾಗಲಿದೆ..
ಎಲೆಕ್ಟ್ರಿಕ್ ರೈಲು ಬರೋಷ್ಟರೊಳಗೆ ಸೂರ್ಯೋದಯ ಆಗೋಗುತ್ತೆ- ಬೇಸರದಲ್ಲಿ ಪ್ರವಾಸಿಗರು
ನೈಋತ್ಯ ರೈಲ್ವೆ ಪ್ರಯಾಣದ ಸಮಯವನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು ಏಕೆಂದರೆ ನೈಋತ್ಯ ರೈಲ್ವೆಯ ರೈಲು ಬೆಳಿಗ್ಗೆ 6:37 ಕ್ಕೆ ನಂದಿ ನಿಲ್ದಾಣವನ್ನ ತಲುಪಲಿದೆ. ಹೀಗಾಗಿ ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ಇದು ತುಂಬಾ ತಡವಾಗುತ್ತೆ ಎಂದು ಪ್ರಯಾಣ ಪ್ರಿಯರು ಅಭಿಪ್ರಾಯಪಡುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಈಶಾ ಫೌಂಡೇಶನ್ ವತಿಯಿಂದ ನಿರ್ಮಿಸಿರುವ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಗೆ ಭೇಟಿ ನೀಡುವವರಿಗೂ ಈ ರೈಲು ಅನುಕೂಲವಾಗಲಿದೆ. ಇನ್ನು ಈ ಎಲೆಕ್ಟ್ರಿಕ್ ರೈಲು ಬೆಟ್ಟಹಲಸೂರು, ದೊಡ್ಡಜಾಲ ಮತ್ತು ಚನ್ನಸಂದ್ರದಂತಹ ನಿಲ್ದಾಣಗಳಲ್ಲಿ ನಿಲುಗಡೆ ಇರೋದಿಲ್ಲ. ಹೀಗಾಗಿ ಎಲೆಕ್ಟ್ರಿಕ್ ರೈಲಿನ ಸಮಯವನ್ನ ಬದಲು ಮಾಡಬೇಕೆನ್ನುವುದು ಬಹುತೇಕ ಪ್ರವಾಸಿಗರ ಅಭಿಪ್ರಯಾವಾಗಿದೆ..
ಅಭಿಜಿತ್, ರೆವಿನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು