25.5 C
Bengaluru
Saturday, September 21, 2024

ಬೆಂಗಳೂರಿನಲ್ಲಿ 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ಆಫ್ರಿಕಾ ಮೂಲದ ಆರೋಪಿ ಬಂಧನ

ಬೆಂಗಳೂರು;ಬೆಂಗಳೂರು ನಗರದಲ್ಲಿ 21 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಿ ಆಫ್ರಿಕಾ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಲಿಯೋನಾರ್ಡ್ ಓಕ್ವುಡಿಲಿ ಬಂಧಿತ ಆರೋಪಿ.ಬಂಧಿತನಿಂದ ₹21 ಕೋಟಿ ಮೌಲ್ಯದ ಡ್ರಗ್ಸ್‌(Drugs) ಅನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. 16 ಕೆಜಿ ಎಂಡಿಎಂಎ, 500 ಗ್ರಾಂ ಕೊಕೆನ್ ಜಪ್ತಿ ಮಾಡಲಾಗಿದೆ.ಬ್ಯುಸಿನೆಸ್ ವೀಸಾ ಮೇಲೆ ಬೆಂಗಳೂರಿಗೆ ಬಂದು ರಾಮಮೂರ್ತಿನಗರದಲ್ಲಿ ನೆಲೆಸಿದ್ದ ಆಫ್ರಿಕಾ ಮೂಲದ ಲಿಯೋನಾರ್ಡ್ ಎಂಬ ಆರೋಪಿ ಹೊಸ ವರ್ಷಕ್ಕೆ ಮತ್ತೇರಿಸಲು ಅಪಾರ ಪ್ರಮಾಣದ ಡ್ರಗ್ಸ್​ ತಂದಿದ್ದ. ಸಿಸಿಬಿ(CCB) ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.ಆರೋಪಿಯು ಬೆಡ್ ​ಶೀಟ್​​ ಕವರ್​​, ಸೋಪ್​​ ಬಾಕ್ಸ್​​​ ಹಾಗೂ ಚಾಕೊಲೇಟ್​ ಬಾಕ್ಸ್ ​ನಲ್ಲಿ ಡ್ರಗ್ಸ್​ ಸಾಗಾಟ ಮಾಡುತ್ತಿದ್ದ. ಡಿ.31 ರಂದು ರಾತ್ರಿ ಹೊಸ ವರ್ಷಾಚರಣೆಗೆ ಹಲವೆಡೆ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಈ ವೇಳೆ, ಕೆಲ ಪಾರ್ಟಿಗಳಿಗೆ ಡ್ರಗ್ಸ್‌ ಪೂರೈಕೆ ಮಾಡಲು ಆರೋಪಿ ಸಜ್ಜಾಗಿದ್ದನು. ಬಂಧಿತ ಆರೋಪಿ ಪೆಡ್ಲರ್ ಆಗಿದ್ದಾನೆ. ಈತ ತನ್ನದೇ ಒಂದು ಗ್ಯಾಂಗ್ ಕಟ್ಟಿಕೊಂಡು ಬೆಡ್​ಶೀಟ್​​ ಕವರ್​​, ಸೋಪ್​​ ಬಾಕ್ಸ್​​​ ಹಾಗೂ ಚಾಕೊಲೇಟ್​ ಬಾಕ್ಸ್​ನಲ್ಲಿ ಡ್ರಗ್ಸ್​ ಸಾಗಾಟ ಮಾಡುತ್ತಿದ್ದನು.ಇದರ ಕುರಿತಂತೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related News

spot_img

Revenue Alerts

spot_img

News

spot_img