23.1 C
Bengaluru
Monday, October 7, 2024

ಅತೀ ಹೆಚ್ಚು ಸಂಬಳ ವಾರ್ಷಿಕ ಸಂಬಳ ನೀಡುವ ನಗರ ಯಾವುದು ಗೊತ್ತಾ..?

ಬೆಂಗಳೂರು, ಜು. 11 : ಭಾರತದಲ್ಲಿ ಇಷ್ಟು ದಿನ ಒಂದೊಂದು ನಗರಗಳು ಒಂದೊಂದು ಕಾರಣಗಳಿಗೆ ನಂಬರ್ ಒನ್ ಆಗಿರುತ್ತಿತ್ತು. ಆದರೆ ಇತ್ತೀಚೆಗೆ ಬೆಂಗಳೂರು ಪ್ರತಿಯೊಂದು ವಿಚಾರದಲ್ಲೂ ನಂಬರ್ ಒನ್ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಬೆಂಗಳೂರು ತೀರಾ ಕಾಸ್ಟ್ಲಿ ನಗರವಾಗಿದೆ. ಅದಕ್ಕೆ ಸರಿಯಾಗುವಂತೆ ಬೆಂಗಳೂರಿನಲ್ಲಿ ಇಡೀ ದೇಶದ ಇತರೆ ನಗರಗಳಿಗಿಂತಲೂ ಹೆಚ್ಚು ಸಂಬಳವನ್ನು ನೀಡುವುದರಲ್ಲೂ ಟಾಪ್ 5 ಸ್ತಾನದಲ್ಲಿದೆ. ಈ ಬಗ್ಗೆ ಸರ್ವೆ ಕೂಡ ಆಗಿದ್ದು, ಇದರಲ್ಲಿ ಏನೆಲ್ಲಾ ಮಾಹಿತಿ ನೀಡಲಾಗಿದೆ ಎಂಬುದನ್ನು ನೋಡೋಣ ಬನ್ನಿ.

ಭಾರತದ ನಗರಗಳಲ್ಲಿ ಸರಾಸರಿ ವೇತನವನ್ನು ಉತ್ತಮವಾಗಿ ಪಡೆಯುವಂತಹ ನಗರಗಳ ಪೈಕಿ ಬೆಂಗಳೂರು ನಗರಕ್ಕೆ ಮೂರನೇ ಸ್ಥಾನ ಸಿಕ್ಕಿದೆ. ಇನ್ನು ಮೊದಲನೇ ಸ್ಥಾನವನ್ನು ಮಹಾರಾಷ್ಟ್ರದ ಸೊಲಾಪುರ್‌ ಪಡೆದಿದ್ದರೆ, ಎರಡನೇ ಸ್ಥಾನವನ್ನು ಮುಂಬೈ ಹೊಂದಿದೆ. ಭಾರತದ ಸರಾಸರಿ ವಾರ್ಷಿಕ ವೇತನ 18.9 ಲಕ್ಷ ರೂಪಾಯಿ ಆಗಿದೆ. ಮಹಾರಾಷ್ಟ್ರದ ಸೊಲಾಪುರ್ ನಲ್ಲಿ ವಾರ್ಷಿಕ ಆದಾಯ 28.1 ಲಕ್ಷ ರೂಪಾಯಿ ಇದ್ದರೆ, ಮುಂಬೈನಲ್ಲಿ 21.2 ಲಕ್ಷ ರೂಪಾಯಿ ವೇತನ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 21 ಲಕ್ಷ ರೂಪಾಯಿ ವಾರ್ಷಿಕ ವೇತನವಿದೆ.

ಇನ್ನು ನಂತರದ ಸ್ಥಾನಗಳಲ್ಲಿ ದೆಹಲಿ, ಭುವನೇಶ್ವರ, ಪುಣೆ, ಹೈದರಾಬಾದ್‌, ಚೆನ್ನೈ, ಕೋಲ್ಕತ್ತಾ, ಅಹಮಾದಬಾದ್ ಇದೆ. ಕ್ರಮವಾಗಿ 8ನೇ, 10ನೇ, 19ನೇ, 20ನೇ, 26ನೇ ಸ್ಥಾನವನ್ನು ಪಡೆದಿವೆ. 54 ನಗರಗಳಲ್ಲಿ ಸಮೀಕ್ಷೆಯನ್ನು ನಡೆಸಿದ್ದು, ಲಿಂಗ, ವಯಸ್ಸು, ಶಿಕ್ಷಣ, ಕೆಲಸ, ಅನುಭವ, ವೃತ್ತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ನ್ನು ವಾರ್ಷಿಕ ಸರಾಸರಿ ವೇತನದಲ್ಲಿ ಪುರುಷರಿಗಿಂತ ಮಹಿಳೆಯರು ಕಡಿಮೆ ವೇತನ ಪಡೆಯುತ್ತಿದ್ದಾರೆ. ಪುರುಷರ 19.5 ಲಕ್ಷ ರೂಪಾಯಿ ಹಾಗೂ ಮಹಿಳೆಯರು 15.1 ಲಕ್ಷ ರೂಪಾಯಿ ವೇತನವನ್ನು ವಾರ್ಷಿಕವಾಗಿ ಪಡೆಯುತ್ತಿದ್ದಾರೆ.

Related News

spot_img

Revenue Alerts

spot_img

News

spot_img