21.4 C
Bengaluru
Saturday, July 27, 2024

ಪಹಣಿಯಲ್ಲಿನ 6 ರಿಂದ 12ನೇ ಕಾಲಂವರೆಗೂ ಏನೆಲ್ಲಾ ಬರುತ್ತದೆ ಗೊತ್ತೇ..?

ಬೆಂಗಳೂರು, ಮೇ. 22 : ಕಳೆದ ವಾರ ಪಹಣಿಯಲ್ಲಿ ಬರುವ ಒಟ್ಟು 16 ಕಾಲಂಗಳಲ್ಲಿ ಮೊದಲ 5 ಕಾಲಂಗಳಲ್ಲಿ ಏನಿರುತ್ತೆ.? ಪಹಣಿ ಎಂದರೆ ಏನು ಎಂಬ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. ಇಂದು ನಿಮಗೆ ಪಹಣಿಯಲ್ಲಿ ಬರುವ 6 ರಿಂದ 12ನೇ ಕಾಲಂವರೆಗೂ ಏನೆಲ್ಲಾ ಇರುತ್ತದೆ. ಇವನ್ನೆಲ್ಲಾ ಯಾಕೆ ತಿಳಿದಿರಬೇಕು ಎಂಬ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

ಪಹಣಿಯ 6ನೇ ಕಾಲಂ ಪಟ್ಟಾ ನಿನ ಮೂಲ ತೋರಿಸುವ ಕ್ರಮ ಪಟ್ಟಾ ಕಾಲಂನಲ್ಲಿ ಪಟ್ಟಾ, ಸರ್ಕಾರಿ, ಸರಕಾರ, ಇನಾಂ ಮತ್ತು ಖಾಸಗಿ.! ಈ ಕಾಲಂ ಜಮೀನಿನ ಮೇಲಿರುವ ಹಕ್ಕು ತಿಳಿಸುವ ಕಾಲಂ.! ಒಮ್ಮೆ ಪರಿಶೀಲಿಸಲು ಸೂಕ್ತ.! 7ನೇ ಕಾಲಂನಲ್ಲಿ ಜಮೀನಿನಲ್ಲಿರುವ ಮರಗಳ ಮಾಹಿತಿ ಈ ಒಂದು ಕಾಲಂ ನಲ್ಲಿ ನೋಡಬಹುದು.! ಸರ್ಕಾರದ ಮರಗಳು ಕಡಿಯಬಾರದು (ಇಚಲು ಮರ & ನಿಲಿಗಿರಿ ಮರ etc). ಇದನ್ನು ಕಡಿಯಲು ಸರ್ಕಾರದ ಪರ್ಮಿಷನ್ ತೆಗೆದುಕೊಳ್ಳಬೇಕಾಗುತ್ತದೆ.

ಪಹಣಿಯ 8ನೇ ಕಾಲಂ ಜಮೀನಿನ ನೀರಾವರಿ ಸೌಲಭ್ಯ ಕುರಿತು ವಿವರಗಳು ಇರುತ್ತವೆ. ನೀರಾವರಿ ಮೂಲ :- ಭಾವಿ, ಕೊಳೆವೆ ಭಾವಿ ಕೆರೆ ಮತ್ತು ನದಿ ತಿಳಿಸಲಾಗಿರುತ್ತದೆ. 8 ನೇ ಕಾಲಂ ನ ಮುಖ್ಯ ಅಂಶಗಳನ್ನು ಹೇಳಿರಲಾಗುತ್ತದೆ. ನೀರಾವರಿ ಸೌಲಭ್ಯ ಪಹಣಿಯಲ್ಲಿ ದಾಖಲಿಸುವುದು ಮುಖ್ಯವಾಗಿರುತ್ತದೆ. ನೀರಾವರಿ ಸೌಲಭ್ಯ ಸೇರಿಸಿದರೆ ಮಾರುಕಟ್ಟೆ ಬೆಲೆ ಜಾಸ್ತಿ ಇರುತ್ತದೆ. ಪಹಣಿಯ 9ನೇ ಕಾಲಂ ನಲ್ಲಿ ಕಚ್ಚೆದಾರರ ಹೆಸರು ಮತ್ತು ವಿಳಾಸ ನಮೂದಿಸಲಾಗುತ್ತೆ.

11ನೇ ಕಾಲಂ ಋಣಗಳು ಹಣದ ಸಾಲ / ಬೇರೆ ಸಹಾಯದ ಋಣಗಳು. ಬೇಳೆ ಸಾಲ / ದೀರ್ಘಾವಧಿ ಸಾಲ / ಮಾರ್ಟಗೇಜ ಸಾಲ 11 ನೇ ಕಾಲಂ ನ ಋಣಗಳಲ್ಲಿ ಕಾಣಬಹುದು. ಜಮೀನಿನ ಮಾಲೀಕ / ಹಕ್ಕುದಾರರ ಹೆಸರು 11 ನೇ ಕಾಲಂ ನಲ್ಲಿ ಸಂಸ್ಥೆ / ವ್ಯಕ್ತಿ / ಯಾವುದೇ ಹಕ್ಕು ಇರದೆ ಇರಬಹುದು. ಉದಾಹರಣೆಗೆ, ರಾಮಪ್ಪ ತನ್ನ ಜಮೀನು ಸಿದಯ್ಯನಿಗೆ ಅಡವಿಟ್ಟು, ಸಿದಯ್ಯ ನಿಂದ 7-5ಲಕ್ಷ ರಾಮಪ್ಪನ ತೆಗೆದುಕೊಂಡ್ರೆ, ಸಿದ್ದಯ್ಯನ ಹೆಸರು 11ನೇ ಕಾಲಂ ನಲ್ಲ ನಮೂದಿಸಲಾಗಿರುತ್ತದೆ. ತಾತ್ಕಾಲಿಕ ಹಕ್ಕು, ಖಾಯಂ ಹಕ್ಕು, ನಿರ್ದಿಷ್ಟ ಹಕ್ಕು, ಸರ್ಕಾರಿ ಹಕ್ಕು.!

12ನೇ ಕಾಲಂನಲ್ಲಿ ಸಾಗುವಳಿ ದಾರರ ಮಾಹಿತಿ ಇರುತ್ತದೆ. ಜಮೀನು ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ / ಗೇಣಿದಾರ. ಇವತ್ತಿನ ಕಾಲದಲ್ಲಿ ಜಮೀನು ಬಾಡಿಗೆ ಸಿಗದಿದ್ದ ಕಾರಣಕ್ಕಾಗಿ ಸ್ವಂತ ರೈತನೇಸಾಗುವಳಿದಾರ. ಕಾಯ್ದೆ ಪ್ರಕಾರ ಸತತ 12 ವರ್ಷಕ್ಕೂ ಹೆಚ್ಚು ಕಾಲಒಬ್ಬನೇ ರೈತ ಉಳುಮೆ ಮಾಡ್ತಾ ಇದ್ದರೆ ಅವಕಾಶವಿದೆ. ಸಾಗುವಳಿದಾರನಿಗೂ ಹಕ್ಕುಗಳು ಮತ್ತು ಸರಕಾರದ ಸೌಲಭ್ಯಗಳು ದೊರೆಯುತ್ತವೆ.

Related News

spot_img

Revenue Alerts

spot_img

News

spot_img