26.4 C
Bengaluru
Monday, December 23, 2024

ಆಸ್ತಿಗೆ ಸಂಬಂಧಿಸಿದ ಈ ಮಹತ್ವದ ದಾಖಲೆಗಳನ್ನು ಎಲ್ಲಿ ಹೇಗೆ ಪಡೆಯಬೇಕು ?

ಬೆಂಗಳೂರು:
ಆಸ್ತಿ ಖರೀದಿಸಬೇಕಾದರೂ, ಮಾರಬೇಕಾದರೂ ಹಲವು ಮಹತ್ವದ ದಾಖಲೆ ಪ್ರಮಾಣ ಪತ್ರಗಳನ್ನು ಪಡೆಯಬೇಕು. ಅಂತಹ ದಾಖಲೆಗಳು ಯಾವುವು? ಯಾವ ದಾಖಲೆಗಳು ಯಾವ ಸರ್ಕಾರಿ ಕಚೇರಿಯಲ್ಲಿ ಸಿಗುತ್ತವೆ. ಅವುಗಳ ಮಹತ್ವ ಏನು ? ಅವನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ರೆವಿನ್ಯೂ ಫ್ಯಾಕ್ಟ್ಸ್ ವಿವರಿಸಿದೆ. ಕೆಲ ಮಹತ್ವದ ದಾಖಲೆಗಳ ಮಹತ್ವ ಕೂಡ ಇಲ್ಲಿ ವಿವರಿಸಲಾಗಿದೆ.

ಋಣಭಾರ ಪ್ರಮಾಣ ಪತ್ರ (E.C Encumbrance Certificate) :
ಇದನ್ನು ಸಾಮಾನ್ಯವಾಗಿ ಕನ್ನಡದಲ್ಲಿ ಸಹ ಇ.ಸಿ (EC ) ಎಂದು ಕರೆಯುತ್ತಾರೆ. ಇದು ಉಪ ನೋಂದಣಾಧಿಕಾರಿಗಳ ( Sub Registrar ) ಕಚೇರಿಯಲ್ಲಿ ಸಿಗುತ್ತದೆ. ಯಾವುದೇ ಆಸ್ತಿ ಅಂದರೆ, ಜಮೀನು, ನಿವೇಶನ, ಕೈಗಾರಿಕೆ ನಿವೇಶನ, ವಾಣಿಜ್ಯ ನಿವೇಶನ, ಇತರೆ ಆಸ್ತಿಗಳ ಬಗ್ಗೆ ಏನು ವ್ಯವಹಾರ ನಡೆದಿದೆ ಎಂಬ ಬಗ್ಗೆ ತಿಳಿಸುವ ಒಂದು ಸರ್ಕಾರಿ ದಾಖಲೆ. ಆಸ್ತಿ ಬಗ್ಗೆ ಏನೇ ವ್ಯವಹಾರ ಮಾಡಬೇಕಾದರೂ ಇಸಿ ಬಗ್ಗೆ ನೋಡಲೇಬೇಕು. ತದನಂತರ ಸ್ವತ್ತು, ಯಾರ ಹೆಸರಿನಲ್ಲಿದೆ ಎಂಬುದರ ಬಗ್ಗೆ ಋಣಭಾರ ಪತ್ರ ಖಾತ್ರಿ ನೀಡುತ್ತದೆ.

ಪ್ರಮಾಣಿಕೃತ ಪ್ರತಿ ( Certified Copy ):
ಯಾವುದೇ ಆಸ್ತಿ ಬಗ್ಗೆ ನೋಂದಣಿಯಾದ ಮೂಲ ಪ್ರತಿಗಳು ಕಾಣೆಯಾದರೆ, ಅದರ ಪ್ರತಿಯನ್ನು ದೃಢೀಕರಿಸಿ ಪಡೆಯುವುದನ್ನು ಪ್ರಮಾಣೀಕೃತ ಪ್ರತಿ ಎಂದು ಕರೆಯುತ್ತೇವೆ. ಆಸ್ತಿಗೆ ಸಂಬಂಧಿಸಿದಂತೆ ಈ ದಾಖಲೆ ಪ್ರಮಾಣ ಪತ್ರವೂ ಸಹ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ನ್ಯಾಯಾಲಯಗಳು ಹಾಗೂ ಇನ್ನಿತರೆ ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯ ಏರ್ಪಟ್ಟರೆ, ಮೂಲ ಪ್ರತಿಗಳನ್ನು ನೀಡುವ ಬದಲಿಗೆ ಪ್ರಮಾಣೀಕೃತ ಪ್ರತಿಗಳನ್ನು ನೀಡಬಹುದು. ಇಸಿಯಲ್ಲಿ ಬರುವ ದಾಸ್ತವೇಜುಗಳನ್ನು ಪ್ರಮಾಣೀಕೃತ ಪ್ರತಿಯನ್ನಾಗಿ ಪಡೆಯಬಹುದು. ಕಂದಾಯ ಇಲಾಖೆಯ ಇತರೆ ದಾಖಲೆಗಳಾದ ಆರ್‌ಟಿಸಿ, ಮ್ಯುಟೇಷನ್, ಟಿಪ್ಪಣಿ, ಸರ್ವೆ ನಕಾಶೆ, ಇನ್ನಿತರೆ ದಾಖಲೆಗಳ ಪ್ರಮಾಣೀಕೃತ ಪ್ರತಿಗಳು ಸಂಬಂಧಪಟ್ಟ ತಾಲೂಕು ಕಚೇರಿ ( ತಹಶೀಲ್ದಾರ್, ನಾಡ ಕಚೇರಿ, ಸರ್ವೆ ಕಚೇರಿ)ಯಲ್ಲಿ ಪಡೆಯಬಹುದು.

ವಿವಾಹ ನೋಂದಣಿ ಪತ್ರ Marriage Certificate :
ಮದುವೆಯಲ್ಲಿ ಹಿಂದೂ ವಿವಾಹ, ವಿಶೇಷ ವಿವಾಹ, ವಿಶೇಷ ವಿವಾಹ(ಇತರೆ) ವಿವಾಹ, ಎಂಬ ಹಲವು ಬಗೆಯ ಮದುವೆಗಳಿವೆ. ಇದರಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಂಮರು, ಹೊಸದಾಗಿ ವಿವಾಹ ನೋಂದಣಾಧಿಕಾರಿಗಳೇ ನೋಂದಣಿ ಮಾಡಬೇಕಾದ ಹಿಂದೂ ಜನಾಂಗದ ವಿವಾಹ, ಅನ್ಯ ಧರ್ಮೀಯ ವಿವಾಹಗಳನ್ನು ವಿಶೇಷ ವಿವಾಹ ಅಡಿಯಲ್ಲಿ ನೋಂದಣಿ ಮಾಡಬೇಕು. ಈ ವಿವಾಹ ನೋಂದಣಿ ಪತ್ರ ವಿವಾಹ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು. ಉಪ ನೋಂದಣಾಧಿಕಾರಿಗಳನ್ನೇ ವಿವಾಹ ನೋಂದಣಿ ಅಧಿಕಾರಿಗಳು ಎಂದು ಕರೆಯುತ್ತೇವೆ. ವಿವಾಹ ನೋಂದಣಿ ಪ್ರಮಾಣ ಪತ್ರದ ಸರ್ಟಿಫೈಡ್ ಪ್ರತಿಯನ್ನು ಸಹ ಪಡೆಯಲು ಅವಕಾಶವಿದೆ. ಮದುವೆಯ ನೋಂದಣಿ ಪ್ರಮಾಣ ಪತ್ರ ಗಂಡ ಹೆಂಡತಿಯ ಮದುವೆಯ ಕಾನೂನು ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಎಲ್ಲಾ ರೀತಿಯ ಅಗ್ರಿಮೆಂಟ್ All types of Agreements) : ಆಸ್ತಿ ಮಾರಾಟ, ಬಾಡಿಗೆ, ಭೊಗ್ಯ ಹಾಗೂ ಇನ್ನಿತರೆ ಎಲ್ಲಾ ವ್ಯವಹಾರಗಳಿಗೆ ಇಬ್ಬರು ಪಾರ್ಟಿಗಳ ನಡುವೆ ನಡೆಯುವ ಮಾತುಕತೆ ಮತ್ತು ಹಣಕಾಸಿನ ವಹಿವಾಟಿನ ಬಗ್ಗೆ ನಮೂದಿಸಿರುವ ಒಂದು ಅಧಿಕೃತ ದಾಖಲೆ. ಇದರಲ್ಲಿ ಕೊಡುವರು, ಮಾರುವರ ಜತೆಗೆ ಇಬ್ಬರು ಸಾಕ್ಷಿದಾರರು ಇರುತ್ತಾರೆ. ಒಂದು ವೇಳೆ, ಪಾರ್ಟಿಗಳ ನಡುವೆ ಏರ್ಪಟ್ಟ ಒಡಂಬಡಿಕೆ ಉಲ್ಲಂಘನೆಯಾದರೆ, ಇದರ ಮೇಲೆ ನ್ಯಾಯಾಲಯಕ್ಕೆ ದಾವೆ ಹೂಡಿ ಒಡಂಬಡಿಕೆಯಲ್ಲಿನ ಅಂಶಗಳನ್ನು ನೆರವೇರಿಸಿಕೊಳ್ಳಬಹುದಾಗಿದೆ. ಹೀಗಾಗಿ ಯಾವುದೇ ವಹಿವಾಟು ನಡೆಯುವ ಮುನ್ನ ಜನ ಸಾಮಾನ್ಯರು ಓಡಂಬಡಿಕೆ ಮಾಡಿಕೊಳ್ಳುವುದು ಸೂಕ್ತ. ಈ ಒಡಂಬಪಡಿಕೆ ಪತ್ರವನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಬಹುದು. ಮಾಡದೇ ಇರಬಹುದು. ಇನ್ನೂ ಕೆಲವು ಒಡಂಬಡಿಕೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು. ಇನ್ನೂ ಕೆಲವನ್ನು ಕಡ್ಡಾಯ ನೋಂದಣಿ ಅವಶ್ಯಕತೆ ಇರುವುದಿಲ್ಲ.

ಎಲ್ಲಾ ರೀತಿಯ ನೋಂದಣಿಗಳು (All types of agreeements ) :
ಕ್ರಯ, ದಾನ ಪತ್ರ, ಹಕ್ಕು ಬಿಡುಗಡೆ, ವಿಭಾಗ ಪತ್ರ, ಟ್ರಸ್ಟ್‌ ಡೀಡ್, ಪಾಲುದಾರಿಕೆ ಪತ್ರ, ಜನರಲ್ ಪವರ್ ಆಫ್ ಅಟಾರ್ನಿ ( ಜಿಪಿಎ) ಸ್ಪೆಷಲ್ ಪವರ್ ಆಪ್ ಅಟಾರ್ನಿ ( ಎಸ್‌ಪಿಎ) ವಿಲ್, ದತ್ತು ಸ್ವೀಕಾರ ಪತ್ರ, ಸಂಘ ಸಂಸ್ಥೆಗಳು ಹಾಗೂ ಬೇರೆ ಯಾವುದೇ ರೀತಿಯ ದಾಖಲೆಗಳನ್ನು ತಯಾರು ಮಾಡಿ ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ಅಧಿಕೃತವಾಗಿ ನೋಂದಾಯಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸಮಾಲೋಚನೆ, ಸಲಹೆ, ನೋಂದಣಿ ಮಾಡಿಕೊಡಲಾಗುತ್ತದೆ.

Related News

spot_img

Revenue Alerts

spot_img

News

spot_img