ಬೆಂಗಳೂರು, ಜೂ. 01 : ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಜುಲೈ 31ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಇನ್ನು ತೆರಿಗೆ ವಿನಾಯ್ತಿ ಪಡೆಯುವ ಬಗ್ಗೆ ಈಗಾಗಲೇ ಹಲವು ಮಾರ್ಗಗಳನ್ನು ತಿಳಿಸಿಕೊಡಲಾಗಿದೆ. ಈದೀಗ ನೀವು ಬಾಡಿಗೆ ಮನೆಯಲ್ಲಿದ್ದರೆ, ನಿಮ್ಮ ಬಾಡಿಗೆ ಹಣ ಮೇಲೂ ತೆರಿಗೆ ವಿನಾಯ್ತಿಯನ್ನು ಪಡೆಯಬಹುದು. ಬಾಡಿಗೆ ಕಟ್ಟುವ ಹಣಕ್ಕೆ ಹೇಗೆ ತೆರಿಗೆ ವಿನಾಯ್ತಿ ಸಿಗುತ್ತದೆ. ಬಾಡಿಗೆ ಹಣದ ಮೇಲೆ ಹೇಗೆ ತೆರಿಗೆ ವಿನಾಯ್ತಿ ಪಡೆಯುವುದು..? ಎಷ್ಟು ರಿಟರ್ನ್ಸ್ ಬರುತ್ತದೆ ಎಂಬುದನ್ನು ನೋಡೋಣ ಬನ್ನಿ..
ಹಳೆಯ ತೆರಿಗೆ ಪದ್ಧತಿಯಲ್ಲಿ ಬಾಡಿಗೆ ಕಟ್ಟುವ ಹಣದ ಮೇಲೂ ತೆರಿಗೆ ವಿನಾಯ್ತು ಪಡೆಯಬಹುದು. ನಿಮ್ಮ ಕಂಪನಿ CTC ಯ HRA ಭಾಗದ ಮೂಲಕ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದಕ್ಕೆ ನೀವು ಪ್ತಿ ತಿಂಗಳು ಬಾಡಿಗೆ ಕಟ್ಟುವ ಸ್ಲಿಪ್ ಅನ್ನು ಸಲ್ಲಿಸಬೇಕಾಗುತ್ತದೆ. ಜೊತೆಗೆ ಮನೆ ಮಾಲೀಕರ ಪ್ಯಾನ್ ಕಾರ್ಡ್ ಅನ್ನು ಕೂಡ ನೀಡಬೇಕಾಗುತ್ತದೆ. ಇದರ ಜೊತೆಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಏನೆಲ್ಲಾ ಷರತ್ತುಗಳು ಇವೆ ಎಂಬುದನ್ನು ತಿಳಿಯಿರಿ.
ಬಾಡಿಗೆಯ ಮೇಲಿನ ತೆರಿಗೆ ವಿನಾಯ್ತಿಯು ವೈಯಕ್ತಿಕ ಇಲ್ಲವೇ ಹಿಂದೂ ಅವಿಭಜಿತ ಕುಟುಂಬಕ್ಕೆ ಸಿಗುತ್ತದೆ. ಬಾಡಿಗೆ ಮೇಲೆ ತೆರಿಗೆ ವಿನಾಯ್ತಿ ಪಡೆಯಲು ಆತ ವಾಸವಿರುವ ನಗರದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು. ವ್ಯಕ್ತಿಯು ಪೋಷಕರ ಜೊತೆಗೆ ವಾಸವಿದ್ದರೆ, 80GG ತೆರಿಗೆ ವೊಇನಾಯ್ತಿಯನ್ನು ಪಡೆಯಬಹುದು. ಬಾಡಿಗೆ ಮೇಲಿನ ತೆರಿಗೆ ವಿನಾಯಿತಿ ಪಡೆಯಲು 10BA ಫಾರ್ಮ್ ಅನ್ನು ಸಲ್ಲಿಸಬೇಕು. ಪ್ಯಾನ್ ಕಾರ್ಡ್ ಮಾಹಿತಿಯನ್ನು ನೀಡಬೇಕು.
ಇನ್ನು ಬಾಡಿಗೆ ಮೊತ್ತದದ ಮೇಲೆ ಎಷ್ಟು ತೆರಿಗೆ ವಿನಾಯ್ತಿ ಲಭಿಸುತ್ತದೆ ಎಂದು ನೋಡುವುದಾದರೆ, ವಾರ್ಷಿಕವಾಗಿ 60 ಸಾವಿರ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರೆ, ಇದರ ಮೇಲೆ ಶೇ. 25 ರಷ್ಟು ತೆರಿಗೆ ವಿನಾಯ್ತಿಯನ್ನು ಪಡೆಯಬಹುದು. ಅಕಸ್ಮಾತ್ ನೀವು HRA ಮೇಲೆ ತೆರಿಗೆ ವಿನಾಯ್ತಿ ಪ್ರಯೋಜನವನ್ನು ಪಡೆದಿದ್ದರೆ, ಆಗ 80GG ಅಡಿಯಲ್ಲಿ ವಿನಾಯ್ತಿ ಸಿಗುವುದಿಲ್ಲ. 80GG ಅಡಿ ಅಥವಾ HRA ಮೇಲೆ ಎರಡರಲ್ಲಿ ಒಂದರ ಮೇಲೆ ಮಾತ್ರವೇ ತೆರಿಗೆ ಪ್ರಯೋಜನವನ್ನು ಪಡೆಯಲು ಅವಕಾಶವಿದೆ.