24.8 C
Bengaluru
Monday, October 7, 2024

ಕೇಂದ್ರ ಬಜೆಟ್ ನಲ್ಲಿ ಒಟ್ಟಾರೆಯಾಗಿ ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆಯಾಗಿದೆ ಗೊತ್ತಾ?

#Do you know #how much grant # allocated # which department # total # central budget

ನವದೆಹಲಿ, ಫೆ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್(Unionbudget) 2024ರ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಇದು ಮೋದಿ ಸರ್ಕಾರದ ಎರಡನೇ ಅವಧಿಯ ಮಧ್ಯಂತರ ಬಜೆಟ್ ಆಗಿದೆ. ಹೀಗಾಗಿ ಈ ಬಜೆಟ್ ಮೇಲೆ ಜನ ಸಾಮಾನ್ಯರು ಸಾಕಷ್ಟು ನಿರೀಕ್ಷೆಯನ್ನಿಟ್ಟಿದ್ದರು.ಹಿಂದಿನ ವರ್ಷಗಳಲ್ಲಿ ಆಗಿರುವ ಸಾಧನೆ, ಮುಂದಿನ ದಶಕಗಳಲ್ಲಿ ಸರ್ಕಾರ ಇಟ್ಟಿರುವ ಅಭಿವೃದ್ಧಿ ಗುರಿ, ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ದೂರದೃಷ್ಟಿಯ ಯೋಜನೆ ಇತ್ಯಾದಿ ಕಡೆ ಬಜೆಟ್ (Union Budget 2024) ಗಮನ ಕೊಟ್ಟಿತ್ತು.ಬಜೆಟ್‌ನ ಶೇ.28ರಷ್ಟು ಭಾಗವನ್ನು ಭಾರತ ಸರ್ಕಾರವು ಸಾಲ ಮತ್ತು ಇತರ ಹೊಣೆಗಾರಿಕೆಗಳಿಂದ ತೆಗೆದುಕೊಳ್ಳುತ್ತದೆ. ಆದಾಯ ತೆರಿಗೆಯಿಂದ ಸರಕಾರಕ್ಕೆ ಶೇ.19ರಷ್ಟು ಹಣ ಸಿಗಲಿದೆ. 5 ರಷ್ಟು ಹಣ ಕೇಂದ್ರ ಅಬಕಾರಿ ಸುಂಕದಿಂದ ಬರುತ್ತದೆ. ಆದರೆ, ಜನಸಾಮಾನ್ಯರಿಗೆ ಹೆಚ್ಚು ಕುತೂಹಲ ಮೂಡಿಸುವುದು ಸರ್ಕಾರದ ಹಣ ಯಾವ್ಯಾವುದಕ್ಕೆ ವ್ಯಯವಾಗುತ್ತದೆ, ಸರ್ಕಾರಕ್ಕೆ ಬರುವ ಆದಾಯ ಎಷ್ಟು, ಅದು ಎಲ್ಲಿಗೆ ಹರಿದುಹೋಗುತ್ತದೆ ಎಂಬಿತ್ಯಾದಿ ವಿವರ ಇಲ್ಲಿದೆ.

 

ಮಧ್ಯಂತರ ಬಜೆಟ್‌: ಯಾವ ಇಲಾಖೆಗೆ ಎಷ್ಟು?

* ರಕ್ಷಣಾ ಸಚಿವಾಲಯ: 6.2 ಲಕ್ಷ ಕೋಟಿ ರೂ

*ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ: 2.78 ಲಕ್ಷ ಕೋಟಿ ರೂ

*ರೈಲ್ವೆ ಸಚಿವಾಲಯ: 2.55 ಲಕ್ಷ ಕೋಟಿ ರೂ

*ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ: 2.13 ಲಕ್ಷ ಕೋಟಿ ರೂ

*ಗೃಹ ವ್ಯವಹಾರಗಳ ಸಚಿವಾಲಯ: 2.03 ಲಕ್ಷ ಕೋಟಿ ರೂ

*ಗ್ರಾಮೀಣಾಭಿವೃದ್ಧಿ ಸಚಿವಾಲಯ: 1.77 ಲಕ್ಷ ಕೋಟಿ ರೂ

*ರಾಸಾಯನಿಕ ಮತ್ತು ರಸಗೊಬ್ಬರ: 1.68 ಲಕ್ಷ ಕೋಟಿ ರೂ

*ಸಂವಹನ ಸಚಿವಾಲಯ: 1.37 ಲಕ್ಷ ಕೋಟಿ ರೂ

*ಕೃಷಿ ಮತ್ತು ರೈತರ ಕಲ್ಯಾಣ: 1.27 ಲಕ್ಷ ಕೋಟಿ ರೂ ನೀಡಲಾಗಿದೆ.

ಯಾವ ಯೋಜನೆಗಳಿಗೆ ಎಷ್ಟು ಹಂಚಿಕೆ ಗೊತ್ತಾ?

* ಗ್ರಾಮೀಣ ಉದ್ಯೋಗ ಖಾತರಿ ಯೋಜನೆ- ₹86 ಸಾವಿರ ಕೋಟಿ

→ ಸೌರ ವಿದ್ಯುತ್ ಜಾಲ- ₹8,500 ಕೋಟಿ

→ ಆಯುಷ್ಮಾನ್ ಭಾರತ್- ₹7,500 ಕೋಟಿ Q

→ ಸೆಮಿ ಕಂಡಕ್ಟರ್ಸ್ ತಯಾರಿಕೆ- ₹6,903 ಕೋಟಿ

→ ಇಂಡಸ್ಟ್ರಿಯಲ್ ಇನ್ಸೆಂಟಿಪ್ಸ್- ₹6,903 ಕೋಟಿ

* ಗ್ರೀನ್ ಹೈಡೋಜನ್ ಮಿಷನ್- ₹600 ಕೋಟಿ

ಸರ್ಕಾರದಿಂದ ಹಣದ ವೆಚ್ಚ ಎಲ್ಲಿಗೆ?

ಬಡ್ಡಿ ಪಾವತಿ: ಶೇ. 20

ಕೇಂದ್ರದ ಪ್ರಾಯೋಜಿತ ಯೋಜನೆಗಳು: ಶೇ. 8

ಪಿಂಚಣಿ: ಶೇ. 4

ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆ: ಶೇ. 20

ಹಣಕಾಸು ಆಯೋಗ ಮತ್ತಿತರ ವರ್ಗಾವಣೆ: ಶೇ. 8

ಕೇಂದ್ರ ವಲಯ ಸ್ಕೀಮ್​ಗಳು: ಶೇ. 16

ಸಬ್ಸಿಡಿ: ಶೇ. 6

ರಕ್ಷಣಾ ವಲಯ: ಶೇ. 8

Related News

spot_img

Revenue Alerts

spot_img

News

spot_img