ಬೆಂಗಳೂರು, ಮೇ . 18 : ಹೆಣ್ಣು ಮಕ್ಕಳಿಗೆಂದೇ ಹತ್ತಾರು ಯೋಜನೆಗಳಿವೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ, ಮದುವೆಗೆ, ಆರೋಗ್ಯಕ್ಕೆ ಸೇರಿದಂತೆ ಪ್ರತಿಯೊಂದಕ್ಕೂ ಯೋಜನೆಗಳಿವೆ. ಎಲ್ ಐಸಿ ಕಂಪನಿಯಲ್ಲೂ ಸಾಕಷ್ಟು ಯೋಜನೆಗಳು ಇವೆ. ಅದರಲ್ಲಿ ಎಲ್ಐಸಿ ಕನ್ಯಾದಾನ್ ಪಾಲಿಸಿ, ಧನ್ಸು ಯೋಜನೆ, ಎಲ್ಐಸಿ ಚೈಲ್ಡ್ ಫ್ಯೂಚರ್ ಪ್ಲಾನ್, ಸ್ಥಭ್ ಲಾಭ್, ಎಲ್ಐಸಿ ಸಿಂಗಲ್ ಪ್ರೀಮಿಯಮ್ ಚೈಲ್ಡ್ ಪ್ಲಾನ್ ಯೋಜನೆಗಳಿವೆ. ಇನ್ನು ಎಲ್ಐಸಿ ಕನ್ಯಾದಾನ್ ಯೋಜನೆ ಬಹಳ ಆಕರ್ಷಣೀಯವಾಗಿದ್ದು, ಹೆಣ್ಣು ಮಕ್ಕಳ ಪಾಲಕರು ಈ ಪ್ಲಾನ್ ಅನ್ನು ಪ್ರಾರಂಭಿಸಬಹುದು.
ಕನ್ಯಾದಾನ್ ಪಾಲಿಸಿಯ ಅವಧಿ 13 ರಿಂದ 25 ವರ್ಷ ಇದೆ. ಅನಿವಾಸಿ ಭಾರತೀಯರೂ ಕೂಡ ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಬಹುದು. ಹೆಣ್ಣು ಮಗುವಿಗೆ ಕನಿಷ್ಠ 1 ವರ್ಷ ಆಗಿರಬೇಕು. ಪಾಲಕರ ವಯಸ್ಸು 18ರಿಂದ 50 ವರ್ಷವಿದ್ದು, ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಮ್ ಅನ್ನು ಕಟ್ಟಬಹುದು. ದಿನಕ್ಕೆ 75 ರೂಪಾಯಿಯಂತೆ 25 ವರ್ಷ ಹೂಡಿಕೆ ಮಾಡಿದರೆ, 14 ಲಕ್ಷ ರೂ ರಿಟರ್ನ್ ಸಿಗುತ್ತದೆ.
ಪಾಲಿಸಿ ಅವಧಿಯ 3 ವರ್ಷಗಳ ಮುನ್ನ ಪ್ರೀಮಿಯಮ್ ಮುಕ್ತಾಯಗೊಳ್ಳುತ್ತದೆ. ಪಾಲಿಸಿಯ ಫಲಾನುಭವಿ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬ ಸದಸ್ಯರಿಗೆ 10 ಲಕ್ಷ ರೂ ಪರಿಹಾರ ಸಿಗುತ್ತದೆ. ಫಲಾನುಭವಿಗೆ ಸಹಜ ಸಾವು ಸಂಭವಿಸಿದರೆ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಸಿಗುತ್ತದೆ. ಸತತ 3 ವರ್ಷ ನೀವು ಪ್ರೀಮಿಯಮ್ ಕಟ್ಟಿದ್ದರೆ ಪಾಲಿಸಿ ಮೇಲೆ ಸಾಲ ಪಡೆಯಬಹುದು. ಪಾಲಿಸಿ ಮೊತ್ತಕ್ಕೆ ತೆರಿಗೆ ಇರುವುದಿಲ್ಲ. ಪಾಲಿಸಿದಾರ ಸಾವನ್ನಪ್ಪಿದರೆ ಪ್ರೀಮಿಯಮ್ ಕಟ್ಟುವಂತಿಲ್ಲ. ಕುಟುಂಬಕ್ಕೆ ಪ್ರತೀ ವರ್ಷ 1 ಲಕ್ಷ ರೂ ಪರಿಹಾರ ಸಿಗುತ್ತದೆ.