ಬೆಂಗಳೂರು, ಜೂ. 26 : ಭಾರತೀಯ ಜೀವ ವಿಮಾ ನಿಗಮ ಈ ವರ್ಷ ಈಗಾಗಲೇ ಮೂರಕ್ಕೂ ಅಧಿಕ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಮತ್ತೊಂದು ಹೊಸ ಯೋಜನೆಯನ್ನು ಪರಿಚಯಿಸಿದ್ದು, ಇದರಿಂದ ಉಳಿತಾಯ ಮಾಡಲು ಬಯಸುವವರಿಗೆ ಹೊಸ ಸ್ಕೀಮ್ ಲಭ್ಯವಿದೆ. ಎಲ್ಐಸಿ ಧನ್ ವೃದ್ಧಿ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ. ಇದು ಸಿಂಗಲ್ ಪ್ರೀಮಿಯಂ ನಾನ್ ಲಿಂಕ್ಡ್ ಪಾಲಿಸಿಯಾಗಿದೆ. ಈ ವಿಮಾ ಮೂಲಕ ಹೂಡಿಕೆ ಮಾಡುವವರಿಗೆ ರಕ್ಷಣೆಯ ಜೊತೆಗೆ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಇದರಿಂದ ಹೂಡಿಕೆದಾರರ ಆರ್ಥಿಕ ಭವಿಷ್ಯವನ್ನು ಕೂಡ ಪಾಲಿಸಿ ಭದ್ರಪಡಿಸುತ್ತದೆ. 2023ರ ಸೆಪ್ಟೆಂಬರ್ 30ರ ತನಕ ಈ ಪಾಲಿಸಿ ಖರೀದಿಗೆ ಲಭ್ಯವಿದ್ದು, ವ್ಯಕ್ತಿ ಮರಣ ಹೊಂದಿದರೆ, ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತದೆ. ಈ ಪಾಲಿಸಿಯ ಮೆಚ್ಯುರಿಟಿಯಲ್ಲಿ ದೊಡ್ಡ ಮೊತ್ತದ ಹಣವನ್ನು ನೀಡುತ್ತದೆ. ಆದರೆ, ಇದನ್ನು ತೆರೆಯಲು ಕೇವಲ 2023ರ ಸೆಪ್ಟೆಂಬರ್ 30ರ ತನಕ ಮಾತ್ರ ಅವಕಾಶವಿದೆ. ಎಲ್ಐಸಿ ಧನ್ ವೃದ್ಧಿ ಯೋಜನೆ ಪ್ರಾರಂಭದಲ್ಲಿ ಪಾಲಿಸಿದಾರರು ಒಂದೇ ಪ್ರೀಮಿಯಂನಲ್ಲಿ ಹೂಡಿಕೆ ಮಾಡಬೇಕು.
ರಿಟರ್ನ್ಸ್ ಮೆಚ್ಯುರಿಟಿ ವೇಳೆ ಸಿಗಲಿದ್ದು, ಪಾಲಿಸಿ ಸಿಂಗಲ್ ಪ್ರೀಮಿಯಂ, ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ವೈಯಕ್ತಿಕ ಉಳಿತಾಯ ಜೀವ ವಿಮೆ ಆಗಿದೆ. ಎಲ್ಐಸಿ ಧನ್ ವೃದ್ಧಿ ಪಾಲಿಸಿಐು 10, 15 ಹಾಗೂ 18 ವರ್ಷಗಳ ಅವಧಿಗೆ ಲಭ್ಯವಿದೆ. ಈ ಪಾಲಿಸಿ ಖರೀದಿಗೆ 32ರಿಂದ 60 ವರ್ಷಗಳ ತನಕ ಇರುತ್ತದೆ. ಈ ಪಾಲಿಸಿ ಅಡಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 1,25,000ರೂಪಾಯಿ ಆಗಿದೆ. ಇನ್ನು ಈ ಪಾಲಿಸಿ ಪಡೆದ ಮೂರು ತಿಂಗಳ ಬಳಿಕ ಸಾಲವನ್ನೂ ಪಡೆಯಬಹುದಾಗಿದೆ. ಇನ್ನು ಈ ಪಾಲಿಸಿಯನ್ನು ಖರೀದಿಸಲು ಏಜೆಂಟ್ ಗಳು, ಎಲ್ ಐಸಿ ಕಚೇರಿ ಇಲ್ಲವೇ ವೆಬ್ ಸೈಟ್ ಮೂಲಕವೂ ಪಡೆಯಬಹುದು.