28.2 C
Bengaluru
Friday, September 20, 2024

ಚಿಕ್ಕವರಿದ್ದಾಗಲೇ ವೀಡಿಯೋ ಗೇಮ್‌ ಗಳನ್ನು ತಯಾರಿಸಿ ಮಾರಾಟ ಮಾಡಿದ್ದ ಎಲಾನ್‌ ಮಸ್ಕ್ ಅವರ ಬಗ್ಗೆ ನಿಮಗೆಷ್ಟು ಗೊತ್ತು..?

ಬೆಂಗಳೂರು, ಜೂ. 01 : ಇತ್ತೀಚೆನ ದಿನಗಳಲ್ಲಿ ನೀವೆಲ್ಲಾ ಖ್ಯಾತ ಉದ್ಯಮಿ ಎಲಾನ್ ಮಸ್ಕ್‌ ಅವರ ಬಗ್ಗೆ ಸಾಕಷ್ಟು ಬಾರಿ ಕೇಳಿರುತ್ತೀರಿ. ಕೆಲ ಸಂದರ್ಭಗಳಲ್ಲಿ ಅವರ ವಿಚಿತ್ರ ನಿರ್ಧಾರಗಳಿಂದಲೂ ಸುದ್ದಿಯಲ್ಲಿರುತ್ತಾರೆ. ಕಳೆದ ವರ್ಷ ಟ್ವಿಟರ್‌ ನ ಶೇರ್‌ ಪಡೆದ ಎಲಾನ್‌ ಮಸ್ಕ್‌ ಅವರು ಇದ್ದಕ್ಕಿದ್ದ ಹಾಗೆಯೇ ದೊಡ್ಡ ಉದ್ದೆಯಲ್ಲಿದ್ದವರನ್ನು ಕೆಲಸದಿಂದ ವಜಾಗೊಳಿಸಿ ಸುದ್ದಿಯಾಗಿದ್ದರು. ಈಗ ಎಲಾನ್‌ ಮಸ್ಕ್‌ ಅವರು ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗಾದರೆ ಬನ್ನಿ.. ಅವರ ಬಾಲ್ಯ ಹಾಗೂ ಬದುಕಿನ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಪಡೆಯೋಣ.

ಎಲಾನ್‌ ಮಸ್ಕ್‌ ಅವರ ಪೂರ್ತಿ ಹೆಸರು ಎಲಾನ್ ರೀವ್ ಮಸ್ಕ್ ಎಂದು. ಇವರ ತಾಯಿ ಕೆನಡಾ ಮೂಲದವರಾಗಿದ್ದು, ತಂದೆ ದಕ್ಷಣ ಆಫ್ರಿಕಾದವರು, ದಕ್ಷಿಣಾ ಆಫ್ರಿಕಾದಲ್ಲಿ ಹುಟ್ಟಿ ಬೆಳೆದರು. ಇವರ ತಂದೆಹೆಸರು ಎರೋಲ್‌ ಮಸ್ಕ್‌ ಹಾಗೂ ತಾಯಿ ಮೇ ಮಸ್ಕ್.‌ ಎಲಾನ್‌ ಮಸ್ಕ್‌ ಅವರಿಗೆ ಒಬ್ಬ ತಮ್ಮ ಕಿಂಬಲ್‌ ಹಾಗೂ ಒಬ್ಬ ತಂಗಿ ಟೀಸ್ಕಾ ಇದ್ದಾಳೆ. ಕಾರಣಾಂತರಗಳಿಂದ ಎಲಾನ್‌ ಅವರ ತಂದೆ ತಾಯಿ ದೂರ ಆಗುತ್ತಾರೆ. ಆಗ ತಂದೆ ಜೊತೆಗೆ ಹೋದ ಎಲಾನ್‌ ಅವರಿಗೆ ಕೆಲಸವೇ ಸಮಯದಲ್ಲಿ ಅವರ ತಂದೆಯ ಜೊತೆಗೆ ಇರುವುದು ತಪ್ಪು ಎನಿಸುತ್ತದೆ.

ಯಾಕೆಂದರೆ, ಎಲಾನ್‌ ಅವರ ತಂದೆ ಭಯಾನಕ ವ್ಯಕ್ತಿಯಾಗಿದ್ದು, ಅವರು ರಾಕ್ಷಸೀಯ ಗುಣ ಉಳ್ಳವರು ಎಂದು ಹೇಳಲಾಗಿದೆ. ಸಾಮಾನ್ಯ ಕುಟುಂಬದಲ್ಲಿ ಬೆಳದ ಎಲಾನ್‌ ಅವರು ಕಷ್ಟದ ಜೀವನವನ್ನು ನೋಡಿದವರು. ಎಲಾನ್‌ ಅವರು ಕೈಗೆ ಸಿಗುವ ಪುಸ್ತಕಗಳನ್ನೆಲ್ಲಾ ಓದುತ್ತಿದ್ದರಂತೆ. ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಎಲಾನ್‌ ಅವರು ಕಂಪ್ಯೂಟರ್ ಪ್ರೋಗ್ರಾಮಿಂಗ್ ಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಅವರಿಗೆ ಹನ್ನೆರಡನೇ ವಯಸ್ಸಿನಲ್ಲಿ ಬ್ಲಾಸ್ಟರ್ ಟು ಪಿಸಿ ಮತ್ತು ಆಫೀಸ್ ಟೆಕ್ನಾಲಜಿ ಮ್ಯಾಗಜಿನ್ ಎಂಬ ವಿಡಿಯೋ ಗೇಮ್ ಗಳನ್ನು ತಯಾರಿಸಿದ್ದರು. ಇದನ್ನು ಅಂದಾಜು 500 ಅಮೆರಿಕನ್ ಡಾಲರ್ ಗೆ ಮಾರಾಟ ಮಾಡಿದ್ದರು.

1995 ರಲ್ಲಿ ವೆಬ್ ಸಾಫ್ಟ್‌ವೇರ್ ಕಂಪನಿ Zip2 ಕಂಪನಿಯನ್ನು ಸ್ಥಾಪಿಸಿದರು. ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದರು. 1999 ರಲ್ಲಿ $307 ಮಿಲಿಯನ್ ಗೆ Zip2 ಅನ್ನು ಮಾರಾಟ ಮಾಡಲಾಯ್ತು. ಈಗ ಎಲಾನ್‌ ಮಸ್ಕ್‌ ಅವರು ಖಾಸಗಿ ಬಾಹ್ಯಾಕಾಶ ನೌಕೆ ಸ್ಪೇಸ್‌ ಎಕ್ಸ್‌ ನ ಸಂಸ್ಥಾಪಕರಾಗಿದ್ದಾರೆ. ಇದರಲ್ಲಿ ಕಾರ್ಯ ನಿರ್ವಾಹಕ ಅಧ್ಯಕ್ಷ ಹಾಗೂ ಮುಖ್ಯ ವಿನ್ಯಾಸಗಾರ ಕೂಡ ಆಗಿದ್ದಾರೆ. ಟೆಸ್ಲಾ ಕಾರು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹೂಡಿಕೆದಾರ ಮತ್ತು ವಿನ್ಯಾಸಗಾರರಾಗಿದ್ದಾರೆ. ಇಷ್ಟೇ ಅಲ್ಲದೇ, ದಿ ಬೋರಿಂಗ್‌ ಕಂಪನಿ, ನ್ಯೂರೋಲಿಂಕ್‌, ಓಪನ್ ಎಐ ಕಂಪನಿಗಳ ಪ್ರಮುಖ ಸ್ಥಾಪಕರಲ್ಲೊಬ್ಬರಾಗಿದ್ದಾರೆ.

Related News

spot_img

Revenue Alerts

spot_img

News

spot_img