ಹೊಸದಿಲ್ಲಿ;ಬ್ಯಾಂಕ್ ಲಾಕರ್ ಹೊಂದಿರುವ ಗ್ರಾಹಕರು ಅದಕ್ಕೆ ಸಂಬಂಧಿಸಿದಂತೆ ತಮ್ಮ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಬ್ಯಾಂಕ್‌ಗಳಿಗೆ ಆರ್‌ಬಿಐ (RBI) ಸೂಚಿಸಿದೆ. ಈ ಕೆಲಸವನ್ನು ನಿಗದಿತ ಸಮಯದೊಳಗೆ ಕಡ್ಡಾಯವಾಗಿ ಮಾಡಬೇಕು. ನೀವು SBI, BOB ಅಥವಾ ಇನ್ನು ಯಾವುದೇ ಬ್ಯಾಂಕ್‌ನಲ್ಲಿ ಲಾಕರ್ ಹೊಂದಿದ್ದರೆ, ನೀವು ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕಬೇಕು. ಸಹಿ ಮಾಡಲು, ಗ್ರಾಹಕರು ತಾವು ಲಾಕರ್ ಹೊಂದಿರುವ ಬ್ಯಾಂಕ್ ಶಾಖೆಗೆ ಹೋಗಬೇಕು ಎಂದು ಸೂಚಿಸಿದೆ.ಗ್ರಾಹಕರು ತಮ್ಮ ಬಳಿ ಇರುವ ಪ್ರಮುಖ ದಾಖಲೆ ಹಾಗೂ ಬೆಲೆಬಾಳುವ ಚಿನ್ನದ ಸುರಕ್ಷತೆಗಾಗಿ Bank Locker ಅನ್ನು ಬಳಸುತ್ತಾರೆ. ಇತ್ತೀಚಿಗೆ ಲಾಕರ್ ನಿಯಮವನ್ನು ಬದಲಾಯಿಸಿದೆ. ಗ್ರಾಹಕರಿಗೆ ಲಾಕರ್(Locker) ಒಪ್ಪಂದಕ್ಕೆ ಸಹಿ ಹಾಕುವಂತೆ ಆರ್ ಬಿಐ (RBI) ಸೂಚನೆ ನೀಡಿದೆ. ಹೊಸ ಬ್ಯಾಂಕ್ ಲಾಕರ್(Banklocker) ತೆಗೆದುಕೊಳ್ಳುವ ಪ್ರತಿ ಗ್ರಾಹಕರು ಕೂಡ ಒಪ್ಪಂದಕ್ಕೆ ಸಹಿ ಮಾಡುವುದು ಕಡ್ಡಾಯವಾಗಿದೆ. ನೀವು ನಿಗದಿತ ಸಮಯದೊಳಗೆ ಈ ಕೆಲಸ ಮಾಡದಿದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತದೆ.ಬ್ಯಾಂಕ್ ಲಾಕರ್ ಸೌಲಭ್ಯದ ಮೂಲಕ ಗ್ರಾಹಕರು ತಮ್ಮ ಬೆಲೆಬಾಳುವ ವಸ್ತುಗಳು, ಚಿನ್ನ, ಆಸ್ತಿ ಪತ್ರಗಳು ಅಥವಾ ಇತರ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ. ಇದಕ್ಕಾಗಿ ಬ್ಯಾಂಕ್ ಗ್ರಾಹಕರಿಂದ ನಿಗದಿತ ಬಾಡಿಗೆ ಮೊತ್ತವನ್ನು ವಿಧಿಸುತ್ತದೆ. ಇದು ಸ್ಥಳ, ಲಾಕರ್ ಗಾತ್ರ ಮತ್ತು ಬ್ಯಾಂಕ್ ಅನ್ನು ಅವಲಂಬಿಸಿ ಆಯಾ ಬ್ಯಾಂಕ್‌ಗೆ ಅನುಗುಣವಾಗಿ ಬದಲಾಗಬಹುದು.