28.2 C
Bengaluru
Wednesday, July 3, 2024

ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ..

ಬೆಂಗಳೂರು, ಜೂ. 27 : ನಿಮ್ಮ ಮನೆಗೆ ಪರಿಪೂರ್ಣ ಅಲಂಕಾರವನ್ನು ಆರಿಸುವುದು ಹಾಗೂ ನಿಮ್ಮ ಕನಸಿನ ಮನೆಯನ್ನು ಖರೀದಿಸುವುದು ಮೈಲಿಗಲ್ಲೇ ಸರಿ. ಒಮ್ಮೆ ನೀವು ಮನೆಯನ್ನು ಖರೀದಿಸಿದ ಬಳಿಕ ನಿಮ್ಮ ಮುಂದಿನ ಹೆಜ್ಜೆಯೇ ಅದನ್ನು ಅಲಂಕರಿಸುವ ಮತ್ತು ಸಜ್ಜುಗೊಳಿಸಲು ಉತ್ತಮ ಒಳಾಂಗಣ ವಿನ್ಯಾಸಗಳನ್ನು ಆಯ್ಕೆ ಮಾಡುವು ಒಂದು ದೊಡ್ಡ ಸವಾಲೇ. ನಿಮ್ಮ ಮನೆಯನ್ನು ವಿನ್ಯಾಸಗೊಳಿಸಲು ನಿಮಗಾಗಿ ನಾವಿಲ್ಲಿ ಒಂದಷ್ಟು ಸಲಹೆಗಳನ್ನು ನೀಡುತ್ತಿದ್ದೇವೆ.

ಮನೆಯ ಕಿಟಕಿಗಳ ವಿನ್ಯಾಸ: ಮನೆಯ ಒಳಗೆ ಸೂರ್ಯನ ಬೆಳಕು ಬೀಳುವಂತೆ ಕಿಟಕಿಗಳನ್ನು ವಿನ್ಯಾಸಗೊಳಿಸಿ. ಕಿಟಕಿಗಳಿಗೆ ನಿಮ್ಮ ಮನೆಯ ಗೊಡೆ ಬಣ್ಣಕ್ಕೆ ಒಪ್ಪುವಂತಹ ಕರ್ಟನ್ ಗಳನ್ನು ಹಾಕಿ. ಇದರಿಂದ ಕಿಟಕಿಯಿಂದ ಬರುವ ಬೆಳಕು ಮತ್ತು ಮನೆಯೊಳಗಿನ ಬಣ್ಣಗಳು ಕೂಡಿ ಅಂದವನ್ನು ಹೆಚ್ಚಿಸುತ್ತದೆ. ಮೂರನೇಯ ಸಲಹೆ ಏನೆಂದರೆ ನಿಮ್ಮ ಮನೆಯನ್ನು ಹಸಿರು ಸಸ್ಯಗಳಿಂದ ಅಲಂಕರಿಸಿ. ಗಿಡಗಳನ್ನು ಮನೆಯಲ್ಲಿಟ್ಟು ಅಲಂಕರಿಸುವುದರಿಂದ ಪ್ರಕೃತಿ ಸೌಂದರ್ಯ ನಿಮ್ಮನ್ನು ಫ್ರೆಶ್ ಆಗಿಡು ಸಹಕಾರಿಯಾಗಿರುತ್ತದೆ. ನಿಮ್ಮ ಮನಸನ್ನು ಉಲ್ಲಾಸಗೊಳಿಸುತ್ತದೆ ಪ್ಲಾಸ್ಟಿಕ್ ವಸ್ತುಗಳಿಗಿಂತಲೂ ಸಸ್ಯಗಳು ಮನೆಯ ಹಾಗೂ ಮನಸ್ಸಿನ ಅಂದವನ್ನು ಹೆಚ್ಚಿಸುತ್ತದೆ.

ಮನೆಯ ದೀಪಗಳು : ಮನೆಯಲ್ಲಿನ ದೀಪಗಳು ಶಾಂತವಾದ ಬೆಳಕನ್ನು ಚೆಲ್ಲುವಂತಿರಲಿ. ಬಲ್ಬ್ ಗಳನ್ನು ಆಯ್ಕೆ ಮಾಡುವಾಗ ಎಚ್ಚರದಿಂದ ಆರಿಸಿ ನಿಮ್ಮ ಮನೆಯ ಸೌದರ್ಯದ ಜೊತೆಗೆ ಅದರ ಬೆಳಕು ಕೂಡ ನಿಮಗೆ ಖುಷಿ ಕೊಡುವಂತಿರಲಿ. ಇದರಿಂದ ಸಂಜೆ ಹೊತ್ತು ಕೆಲಸ ಮಾಡಿ ಸುಸ್ತಾಗಿ ಹಾಲ್ ನಲ್ಲಿ ಕೂತಾಕ ನಿಮ್ಮ ಮನೆಯ ಬೆಳಕು ಕೂಡ ನಿಮ್ಮಲ್ಲಿನ ಆಯಾಸವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿರುತ್ತದೆ. ಇದರಿಂದ ಕಣ್ಣಿಗೂ ಹಿತವಾಗಿರುತ್ತದೆ.

ಚಿತ್ರಕಲೆಗಳು : ಹಾಲ್ ನಲ್ಲಿ ಜನರಿಗೆ ಇಷ್ಟವಾಗುವಂತಹ ಚಿತ್ರಕಲೆಗಳನ್ನು ಅಳವಡಿಸಿ. ಹಾಲ್ ನಲ್ಲಿ ಇದು ಕೇಂದ್ರಬಿಂದುವಾಗಿರುತ್ತದೆ. ಇದರಿಂದ ಮನೆಗೆ ಬಂದವರಿಗೂ ಈ ವಿನ್ಯಾಸ ಮೆಚ್ಚುಗೆಯಾಗುತ್ತದೆ. ಇನ್ನು ಬಹುಮುಖ್ಯವಾಗಿ ಮನೆಯ ಬಾಗಿಲು. ಮನೆಗೆ ಬರುವ ಪ್ರತಿಯೊಬ್ಬರು ಬಾಗಿಲನ್ನು ಗಮನಿಸುತ್ತಾರೆ. ನಿಮ್ಮ ಮನೆಯ ಬಾಗಿಲನ್ನು ಇಲ್ಲಿ ಡೋರ್ ಬೆಲ್ ಗಳನ್ನು ನೋಡಿ, ಸ್ಪರ್ಶಿಸುತ್ತಾರೆ. ಇದಕ್ಕೆ ಸ್ವಲ್ಪ ತಲೆ ಉಪಯೋಗಿಸಿ ಆಕರ್ಷಣೀಯ ಡೋರ್ ಬೆಲ್ ಗಳನ್ನು ಅಳವಡಿಸಿ.

ಮನೆಯಲ್ಲಿ ಖಾಲಿ ಜಾಗ ಬಿಡಿ : ಮನೆಯಲ್ಲಿ ಆದಷ್ಟೂ ಖಾಲಿ ಜಾಗಗಳು ಇರುವಂತೆ ಗಮನಹರಿಸಿ. ಅದರಲ್ಲೂ ಈ ಖಾಲಿ ಜಾಗದ ಗೋಡೆಗಳಿಗೆ ಬಿಳಿ ಬಣ್ಣ ಹೊಡೆಯುವುದು ಉತ್ತಮ. ಇದು ಮನೆಯನ್ನು ಸಕರಾತ್ಮಕವಾಗಿಡುತ್ತದೆ. ಮನೆಯವರನ್ನು ಶಾಂತ ರೂಪದಲ್ಲಿಡಲು ಉಪಯುಕ್ತವಾಗುತ್ತದೆ. ನಿಮ್ಮ ಮನೆಯ ಅಲಂಕಾರ ಹೇಗಿದ್ದರೆ, ನಿಮ್ಮ ಮನೆಯ ಸದಸ್ಯರಿಗೆ ಸೂಕ್ತವೆನಿಸುತ್ತದೆ ಎಂಬುದನ್ನು ಗಮನದಲ್ಲಿಡಿ. ಆಗ ನಿಮ್ಮ ಮನೆ ನಿತ್ಯ ಹೊಸದರಂತೆ ಕಾಣುತ್ತದೆ.

Related News

spot_img

Revenue Alerts

spot_img

News

spot_img