25.4 C
Bengaluru
Saturday, July 27, 2024

ರಾಮಭಕ್ತರ ಅನುಕೂಲಕ್ಕಾಗಿ ‘ದಿವ್ಯ ಅಯೋಧ್ಯೆ’ ಆಪ್ ಬಿಡುಗಡೆ

#Divya Ayodhya’ #app #launched # convenience # Ram devotees

ಬೆಂಗಳೂರು;ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ಶ್ರೀರಾಮ ಮಂದಿರ(Rammandir)ದ ಉದ್ಘಾಟನೆಗೂ ಮುನ್ನ ಇಲ್ಲಿಗೆ ಬರುವ ಪ್ರವಾಸಿಗರು, ವಿಶೇಷ ಅತಿಥಿಗಳು ಹಾಗೂ ವಿದೇಶಿ ಅತಿಥಿಗಳಿಗಾಗಿ ಸಿಎಂ ಯೋಗಿ ಆದಿತ್ಯನಾಥ್ ನೂತನ ಆಯಪ್(App) ಬಿಡುಗಡೆ ಮಾಡಿದ್ದಾರೆ. ಅಯೋಧ್ಯೆಯ ಹೆಸರಿನಲ್ಲಿ ಬಿಡುಗಡೆಯಾದ ಈ ಆಯಪ್‌ನಲ್ಲಿ ಒಂದೇ ಸ್ಥಳದಲ್ಲಿ ಹಲವು ಸೌಲಭ್ಯಗಳು ಲಭ್ಯವಾಗಲಿವೆ.ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ, ಶ್ರೀರಾಮನ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ‘ದಿವ್ಯ ಅಯೋಧ್ಯೆ(Divine Ayodhya)’ ಆಪ್ ಬಿಡುಗಡೆ ಮಾಡಿದ್ದಾರೆ. ಈ ಆಪ್ ಮೂಲಕ ನಗರದ ವಿವಿಧ ದೇವಾಲಯಗಳು ಮತ್ತು ಆಧ್ಯಾತ್ಮಿಕ ಸ್ಥಳಗಳ ಬಗ್ಗೆ ತಿಳಿದುಕೊಳ್ಳಬಹುದು. ಹೋಮ್‌ಸ್ಟೇ, ಹೋಟೆಲ್‌ಗಳು, ಟೆಂಟ್‌ಗಳು, ಗಾಲಿಕುರ್ಚಿ ಸಹಾಯಕರು, ಗಾಲ್ಫ್ ಕಾರ್ಟ್ ವಾಹನಗಳು, ಎಲೆಕ್ನಿಕ್ ಕಾರುಗಳು, ಬಸ್‌ಗಳು, ಪ್ರವಾಸಿ ಮಾರ್ಗದರ್ಶಿಗಳನ್ನು ಮೊದಲೇ ಬುಕ್ ಮಾಡಬಹುದು,ಆಯಪ್ ಅನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ವಿನ್ಯಾಸಗೊಳಿಸಿದೆ. ಈ ಅಪ್ಲಿಕೇಶನ್‌ನಲ್ಲಿ ನೀವು ಅಯೋಧ್ಯೆ ನಗರಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಪಡೆಯುತ್ತೀರಿ. ಈ ಆಯಪ್‌ನಲ್ಲಿ ಪ್ರವಾಸಿಗರು ಒಂದೇ ಸ್ಥಳದಲ್ಲಿ ಇ-ಕಾರ್, ಇ-ಬಸ್ ಮುಂತಾದ ಹಲವು ಸೌಲಭ್ಯಗಳನ್ನು ಬುಕ್ ಮಾಡಬಹುದಾದ್ದರಿಂದ ಇದನ್ನು ಸೂಪರ್ ಆಯಪ್ ಎಂದು ಕರೆಯಲಾಗುತ್ತಿದೆ. ಇದಲ್ಲದೇ, ಆಯಪ್ ಬಳಸಿಕೊಂಡು ಅಯೋಧ್ಯೆ ನಗರದ ಮಾರ್ಗಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದರಿಂದಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವಲ್ಲಿ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗುವುದಿಲ್ಲ.ಅಯೋಧ್ಯೆಗೆ ಬರುವ ಪ್ರವಾಸಿಗರಿಗೆ ಪ್ರವಾಸಿ ಮಾರ್ಗದರ್ಶಿಗಳು ಸಹ ಈ ಅಪ್ಲಿಕೇಶನ್‌ನಲ್ಲಿ(Application) ಲಭ್ಯವಿರುತ್ತವೆ. ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ Divya Ayodhya ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದುವರೆಗೆ 1 ಸಾವಿರಕ್ಕೂ ಹೆಚ್ಚು ಮಂದಿ ಈ ಆಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

Related News

spot_img

Revenue Alerts

spot_img

News

spot_img