ಬೆಂಗಳೂರು;ಖಾಸಗಿ ಆಸ್ಪತ್ರೆಗಳಲ್ಲಿ(Private hospital) ರೋಗಿಗಳಿಗೆ ಲಭ್ಯವಾಗುವ ಪ್ರತಿಯೊಂದು ಚಿಕಿತ್ಸೆಗೂ ಪ್ರತ್ಯೇಕವಾಗಿ ದರಗಳನ್ನು ನಿಗದಿಗೊಳಿಸಲು ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸಾವಿರಾರು ರೂಪಾಯಿ ಬಿಲ್ ಮಾಡಿ ಸುಲಿಗೆ ಮಾಡುತ್ತಿವೆ ಎಂಬ ಆರೋಪಗಳ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.ಖಾಸಗಿ ಆಸ್ಪತ್ರೆಗಳು ನೀಡುವ ಚಿಕಿತ್ಸೆ ವೆಚ್ಚದ ಬೋರ್ಡ್‌ಗಳನ್ನು ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಪ್ರದರ್ಶಿಸಬೇಕು. ಆ ಮೂಲಕ ನಡೆಯುತ್ತಿರುವ ಸುಲಿಗೆ ತಪ್ಪಿಸಬೇಕು ಅಂತ ಹೇಳಿದರು. ಇನ್ನೂ ಯಾವ-ಯಾವ ಸೇವೆಗಳಿಗೆ ಎಷ್ಟು ಹಣವನ್ನು ಪಡೆಯಲಾಗುತ್ತದೆ ಎನ್ನುವ ವಿವರಗಳನ್ನು ರೋಗಿ ಮತ್ತು ರೋಗಿಯ ಸಂಬಂಧಿಕರಿಗೆ ಮೊದಲು ತಿಳಿಸಬೇಕು ಅಂತ ಹೇಳಿದರು. ಆಸ್ಪತ್ರೆಗಳ ಹೊರಗೆ ದರಪಟ್ಟಿ(Price list) ಪ್ರಕಟಿಸುವುದು ಕಡ್ಡಾಯ, ತಪ್ಪಿದರೆ ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸುವುದಲ್ಲದೆ, ಸೀಜ್ ಮಾಡುವ ಬಗ್ಗೆಯೂ ಎಚ್ಚರಿಕೆ ಕೊಟ್ಟಿದ್ದಾರೆ. ಸ್ವಲ್ಪ ಪ್ರಮಾಣದ ಚಿಕಿತ್ಸೆಗೂ ದುಪ್ಪಟ್ಟು ದರ ವಿಧಿಸುತ್ತಿರುವುದರಿಂದ ಆಸ್ಪತ್ರೆಗಳಿಗೆ ಈ ವಾರ್ನಿಂಗ್ ನೀಡಿದ್ದಾರೆ. ಬಗ್ಗೆ ಸಿಎಂ, ಡಿಸಿಎಂಗೆ ದೂರುಗಳು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ
ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ‘ಚಿಕಿತ್ಸೆ ವೆಚ್ಚದ’ ಬೋರ್ಡ್ ಪ್ರದರ್ಶನ ಕಡ್ಡಾಯ: ಆರೋಗ್ಯ ಇಲಾಖೆ ಸೂಚನೆ
by RF Desk