ಬೆಂಗಳೂರು, ಮೇ. 15 : ಆಗೆಲ್ಲಾ ಸಾಲ ಪಡೆಯುವುದೆಂದರೆ ದೊಡ್ಡ ತಲೆ ನೋವಾಗಿತ್ತು. ಕೈ ಸಾಲಗಳು ಬಡ್ಡಿ ಜಾಸ್ತಿ , ಬ್ಯಾಂಕ್ ಸಾಲ ಬೇಕೆಂದರೆ, ಹತ್ತಾರು ಬಾರಿ ಬ್ಯಾಂಕಿಗೂ ಮನೆಗೂ ಅಲೆದಾಡಬೇಕಿತ್ತು. ಆದರೆ ಈಗ ಹಾಗಿಲ್ಲ. ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ನಿಂದ ಲೋನ್ ಪಡೆಯಬಹುದು. ಹಲವು ಬ್ಯಾಂಕ್ ಗಳು ಸಾಲ ಕೊಡಲು ಸಿದ್ಧರಿದ್ದಾರೆ. ಸುಲಭವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳಬಹುದು. ಅದರಲ್ಲೂ ಈಗ ಬ್ಯಾಂಕ್ ಗೆ ಹೋಗಿಯೇ ಸಾಲ ಪಡೆಯಬೇಕು ಎಂಬ ತಲೆನೋವಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೇ ಸಾಲವನ್ನು ಪಡೆಯಬಹುದು.
ವ್ಯಕ್ತಿಯ ಕ್ರೆಡಿಟ್ ಸ್ಕೋರ್, ಸಂಬಳ, ವಹಿವಾಟನ್ನು ಗಮನಿಸುವ ಬ್ಯಾಂಕ್ ಗಳು, ಆ ವ್ಯಕ್ತಿ ಸಾಲ ಪಡೆದರೆ, ಅದನ್ನು ಮರುಪಾವತಿಯನ್ನು ತಪ್ಪದೇ ಮಾಡುತ್ತಾರಾ ಎಂಬ ಸಾಮರ್ಥ್ಯವನ್ನು ನೋಡಿ ಸಾಲ ಕೊಡಲು ಮುಂದೆ ಬರುತ್ತವೆ. ಕಾರು ಸಾಲ ಹಾಗೂ ಗೃಹ ಸಾಲಗಳು ಹಾಗೂ ವಯಕ್ತಿಕ ಸಾಲಕ್ಕಿಂತಲೂ ಸುಲಭವಾಗಿ ಸಿಗುತ್ತದೆ. ಇನ್ನು ನಿಮ್ಮ ಸಂಬಳದ ಆಧಾರದ ಮೇಲೆ ಸಾಲವನ್ನು ಪಡೆಯಬಹುದು. ಇದಕ್ಕಾಗಿ ಬ್ಯಾಂಕ್ ಗಳು ನಿಮ್ಮ ಸಂಬಳ, ಹಣ ವಹಿವಾಟು, ಕ್ರೆಡಿಟ್ ಸ್ಕೋರ್ ಗಳ ಮೇಲೆ ಗಮನ ಹರಿಸುತ್ತವೆ. ನಿಮ್ಮ ಸಂಬಳ ಎಷ್ಟು ಬರುತ್ತಿದೆ ಎಂದು ತಿಳಿಯುವ ಬ್ಯಾಂಕ್ ಗಳು ಎಷ್ಟು ಇಎಂಐ ಪಾವತಿಸಬೇಕು ಎಂಬುದನ್ನು ನಿರ್ಧರಿಸುತ್ತದೆ.
ಬ್ಯಾಂಕ್ ಗಳು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದೆಯಾ ಎಂದು ಚೆಕ್ ಮಾಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 750 ರಿಂದ 900 ವರೆಗೂ ಇದ್ದರೆ, ಸಾಲ ಸುಲಭವಾಗಿ ಸಿಗುತ್ತದೆ. ಇದರಿಂದ ಸಾಲವನ್ನು ಹಿಂದಿರುಗಿಸುವ ಸಾಮರ್ಥ್ಯದ ಬಗ್ಗೆ ಪರಿಶೀಲಿಸುತ್ತದೆ. ನೀವು ಸಾಲ ಪಡೆದರೆ, ಇಎಂಐನ ಶೇ.60 ರಷ್ಟು ತಿಂಗಳ ಆದಾಯವಿದೆಯಾ ಎಂದು ಬ್ಯಾಂಕ್ ಚೆಕ್ ಮಾಡುತ್ತದೆ. ಇಲ್ಲವಾದರೆ, ಸಾಲ ಕೊಡುವುದು ಕಷ್ಟವಾಗುತ್ತೆ. ಇನ್ನು ಬ್ಯಾಂಕ್ ಗಳು ಗ್ರಾಹಕನ ಕ್ರೆಡಿಟ್ ಸ್ಕೋರ್, ಆದಾಯ, ಸಾಲ ಹಿಂತಿರುಗಿಸುವ ಸಾಮರ್ಥ್ಯದ ಬಗ್ಗೆ ಮಾಹಿತಿಯನ್ನು ಹೊಂದಿರುತ್ತಾರೆ.