26.4 C
Bengaluru
Wednesday, December 4, 2024

ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಡಿಡಿಪಿಐ

ಬೆಳಗಾವಿ;ಶಿಕ್ಷಣ ಸಂಸ್ಥೆ ಪರವಾನಿಗಿ ನವೀಕರಣ ಮಾಡಲು ಲಂಚ(Bribe)ಲೇ ಡಿಡಿಪಿಐ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.ಪರವಾನಗಿ ನವೀಕರಣ ಮಾಡಿಕೊಡಲು 40 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಬೆಳಗಾವಿ ಡಿಡಿಪಿಐ ಬಸವರಾಜ್​ ನಾಲತವಾಡ ಎಂಬುವವರು (Lokayukta)ಬಲೆಗೆ ಬಿದ್ದಿದ್ದಾರೆ.ಡಿಡಿಪಿಐ ಬಸವರಾಜ್​ ನಾಲತವಾಡ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತುರುಮುರಿ ಗ್ರಾಮದಲ್ಲಿರುವ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅನುಮತಿ(Licence) ನವೀಕರಣ ಮಾಡಿಕೊಡಲು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.ಡಿಡಿಪಿಐ ಬಸವರಾಜ್​ ನಾಲತವಾಡ ವಿರುದ್ಧ ಬಸವೇಶ್ವರ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಅರ್ಜುನ ಕುರಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಬಸವರಾಜ್​ ನಾಲತವಾಡ 40,000 ರೂಪಾಯಿ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಸವರಾಜ್ ಅವರನ್ನು ಹಣದ ಸಹಿತ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ

Related News

spot_img

Revenue Alerts

spot_img

News

spot_img