24.6 C
Bengaluru
Saturday, June 15, 2024

ದಾವಣಗೆರೆ: ಶಿರಸ್ತೇದಾರ್ ಲೋಕಾ ಬಲೆಗೆ

#Davangere #Shirastedar #Loka #Trap

ದಾವಣಗೆರೆ: 5 ಸಾವಿರ ಲಂಚ ಪಡೆಯುವಾಗ ಚನ್ನಗಿರಿ ತಾಲೂಕು ಕಚೇರಿಯ ಶಿರಸ್ತೇದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಪಟ್ಟಣದ ತಾಲ್ಲೂಕು ಕಚೇರಿಯ ಆರ್.ಆರ್.ಟಿ. ಶಾಖೆಯಲ್ಲಿ ಶಿರಸ್ತೇದಾರ್ ಸುಧೀರ್ ಎಂಬಾತ ಜಮೀನಿನ ದಾಖಲೆಗಳನ್ನು ನೀಡುವ ವಿಚಾರದಲ್ಲಿ ತಾಲ್ಲೂಕಿನ ಮರಡಿ ಗ್ರಾಮದ ಲೋಹಿತ್‌ ಕುಮಾರ್ ಅವರಿಂದ ಐದು ಸಾವಿರ ರೂ. ಲಂಚ(Bribe) ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿ ಪ್ರಕರಣ ಶುಕ್ರವಾರ ಮಧ್ಯಾಹ್ನ ನಡೆದಿದೆ.ಲೋಹಿತ್ ಕುಮಾರ್ ತನ್ನ ಅಕ್ಕನ ಮಗಳಾದ ಮೇಘನಾ ಎಂಬುವರಿಗೆ ಸೇರಿದ ಮರಡಿ ಗ್ರಾಮದಲ್ಲಿನ ಸರ್ವೇ ನಂಬರ್ 42/1ರಲ್ಲಿ 7 ಗುಂಟೆ ಜಮೀನಿನ ದಾಖಲಾತಿಗಾಗಿ ಜಮೀನಿನ ಪಹಣಿ, ಆಕಾರ್ ಬಂದ್ ತಾಳೆ ಸರಿಪಡಿಸಿಕೊಡಲು ಅರ್ಜಿ ಸಲ್ಲಿಸಿದ್ದರು. ಈ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಐದು ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ಅವರಿಂದ ಲಂಚದ ಹಣ ಪಡೆಯುವ ವೇಳೆ ಶಿರಸ್ತೇದಾರ್ ಸುಧೀರ್ ಲೋಕಾಯುಕ್ತ(Lokayukta) ಪೊಲೀಸರ ಬಿದ್ದಿದ್ದಾರೆ.

Related News

spot_img

Revenue Alerts

spot_img

News

spot_img