21.1 C
Bengaluru
Sunday, September 8, 2024

ಲೇಔಟ್‌ ಡೆವಲಪ್‌ ಮಾಡದೇ ಗ್ರಾಹಕರಿಗೆ ತೊಂದರೆ ಕೊಟ್ಟ ಕಂಪನಿಗೆ ದಂಡ ವಿಧಿಸಿದ ಆಯೋಗ

ಬೆಂಗಳೂರು, ಮೇ. 31 : ಒಂದು ಮನೆಯನ್ನು ಖರೀದಿಸಬೇಕು ಎಂದು ಹಲವರು ಸಾಲ ಮಾಡಿಯೋ ಅಥವಾ ಕೂಡಿಟ್ಟ ಹಣವನ್ನು ತೆಗೆದುಕೊಂಡು ಡೆವಲಪರ್ಸ್‌ ಗಳಿಗೆ ಕೊಟ್ಟು ಬಿಡುತ್ತಾರೆ. ಆದಷ್ಟು ಬೇಗನೇ ಕನಸಿನ ಮನೆಯನ್ನು ನೋಡಬೇಕು ಎಂದು ಆಸೆ ಇರುತ್ತದೆ. ಆದರೆ, ಕೆಲವೊಂದು ಎಡವಟ್ಟುಗಳಿಂದ ಇದು ಸಾಧ್ಯವೇ ಆಗುವುದಿಲ್ಲ. ಅದರಲ್ಲೂ ಡೆವಲಪರ್ಸ್‌ ಹಾಗೂ ಬಿಲ್ಡರ್ಸ್‌ ಗಳು ಗ್ರಾಹಕರ ಕನಸನ್ನು ಕೆಲವೊಮ್ಮೆ ನನಸು ಮಾಡುವಲ್ಲಿ ತಡವಾಗುತ್ತದೆ. ಸ್ವಲ್ಪ ತಡವಾದರೆ ಪರವಾಗಿಲ್ಲ. ಆದರೆ, ಕೆಲವರ ಕನಸು ನನಸಾದಷ್ಟು ಸಮಯವಾಗುತ್ತದೆ.

ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ. ಪ್ಲಾಟ್ ಖರೀದಿಸಿ 8 ವರ್ಷಗಳಾದರೂ ಮನೆ ಕಟ್ಟುವ ಕನಸು ನನಸಾಗಿಲ್ಲ. ಕಾರಣ ಕಳೆದ 8 ವರ್ಷಗಳಿಂದ ಧಾರವಾಡದ ಬಾಲಾಜಿ ಡೆವಲಪರ್ಸ್ ಮತ್ತು ಬಿಲ್ಡರ್ಸ್‌ ಎಂಬ ಕಂಪನಿ ಲೇಔಟ್ ಅಭಿವೃದ್ಧಿಗೊಳಿಸಿಲ್ಲ. ಇದರಿಂದ ಗ್ರಾಹಲರಿಗೆ ಅನ್ಯಾಯವಾಗಿದೆ ಈ ಸಂಬಂಧ ಧಾರವಾಡ ರಾಜನಗರದ ನಿವಾಸಿ ವಿಶ್ವನಾಥ ನರೇಂದ್ರ ಎಂಬುವರು ಗ್ರಾಹಲ ಆಯೋಗದ ಮೊರೆ ಹೋಗಿದ್ದು, ಪರಿಹಾರವನ್ನು ಪಡೆದುಕೊಂಡಿದ್ದಾರೆ.

ಬಾಲಾಜಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಧಾರವಾಡದ ಇಟ್ಟಿಗಟ್ಟಿ ಗ್ರಾಮದಲ್ಲಿ ಲೇಔಟ್‌ ನಿರ್ಮಾಣ ಮಾಡಲು ಮುಂದಾದಾಗ ವಿಶ್ವನಾಥ ನರೇಂದ್ರ ಅವರು ಸೈಟ್ ಖರೀದಿಸಲು ಮುಂದಾಗಿದ್ದರು. ಈ ವೇಳೆ ಲೇಔಟ್ನ್ ಪ್ಲಾಟ್ ನಂ.66 ನ್ನು 5,28,000 ರೂಪಾಯಿಗೆ ಖರೀದಿ ಮಾಡಿದ್ದರು. ಇದಕ್ಕಾಗಿ 1,70,000 ರೂಪಾಯಿ ಮುಂಗಡ ಹಣವನ್ನು ನೀಡಿ 08 ಜನವರಿ 2014 ರಂದು ಒಪ್ಪಂದವನ್ನೂ ಮಾಡಿಕೊಂಡಿದ್ದರು. ಬಾಕಿ ಮೊತ್ತವನ್ನು ಪ್ಲಾಟ್ ಅಭಿವೃದ್ಧಿಯಾದ 30 ದಿನಗಳ ಒಳಗೆ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಆದರೆ, 8 ವರ್ಷವಾದರೂ ಲೇಔಟ್‌ ಅಭಿವೃದ್ಧಿ ಆಗಿಲ್ಲ. ಸೈಟ್‌, ಹಣ ಎರಡೂ ಕೈ ಸೇರಿಲ್ಲ. ಹಾಗಾಗಿ ವಿಶ್ವನಾಥ ನರೇಂದ್ರ ಅವರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಮೊರೆ ಹೋಗಿದ್ದಾರೆ. ಇದರ ವಿಚಾರಣೆ ನಡೆಸಿದ ಆಯೋಗ, ವಿಶ್ವನಾಥ ಅವರಿಗೆ ಹಣವನ್ನು ವಾಪಸ್‌ ಮಾಡಬೇಕು. ಅದೂ ಕೂಡ 1,70,000 ಹಣದ ಜೊತೆಗೆ ಶೇ.9 ರಂತೆ ಬಡ್ಡಿ ಅನ್ನು ಲೆಕ್ಕ ಹಾಕಿ ನೀಡಬೇಕು ಎಂದು ಹೇಳಿದೆ.

ಜೊತೆಗೆ ದೂರುದಾರರಿಗೆ ಇದರಿಂದ ಆದ ಓಡಾಟದ ಕರ್ಚು ಸೇರಿದಂತೆ ಹಲವು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಒಟ್ಟು 50,000 ರೂಪಾಯಿ ಹಾಗೂ ಪ್ರಕರಣದ ಖರ್ಚು ಎಂದು 10,000 ರೂಪಾಯಿ ಅನ್ನು ಒಂದು ತಿಂಗಳ ಒಳಗೆ ನೀಡಬೇಕು ಎಂದು ತೀರ್ಪು ನೀಡಲಾಗಿದೆ.

Related News

spot_img

Revenue Alerts

spot_img

News

spot_img