23.1 C
Bengaluru
Monday, October 7, 2024

ವಲಗೇರಹಳ್ಳಿಯಲ್ಲಿ ಶೀಘ್ರದಲ್ಲೇ 200 ಹೊಸ ವಸತಿ ಯೋಜನೆ ನಿರ್ಮಾಣ

#Construction # 200 new housing #projects # Valagerahalli #soon

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೆಂಗೇರಿ ಸಮೀಪದ ವಳಗೇರಹಳ್ಳಿಯಲ್ಲಿ 200 ಫ್ಲ್ಯಾಟ್‌ಗಳನ್ನು ಒಳಗೊಂಡಿರುವ ಹೊಸ ವಸತಿ ಯೋಜನೆಗೆ (H0using scheeme ) ಮುಂದಾಗಿದೆ.ಆಯಕಟ್ಟಿನ ಸ್ಥಳದಲ್ಲಿರುವ ಈ ಯೋಜನೆಯು ಪಟ್ಟಣಗೆರೆ(Pattanagere) ಮೆಟ್ರೋ ನಿಲ್ದಾಣದ ಸಮೀಪದಲ್ಲಿದೆ.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ತನ್ನ ಬಹುಬೇಡಿಕೆಯ ವಲಗೇರಹಳ್ಳಿ (Gnanabharati) ವಸತಿ, ಬಡಾವಣೆಯಲ್ಲಿ 200 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಮುಂದಾಗಿದೆ.ಮೈಸೂರು ರಸ್ತೆಯಲ್ಲಿ ಆರ್. ವಿ. ಕಾಲೇಜು ಹಾಗೂ ಕೆಂಗೇರಿ,ಮಧ್ಯಭಾಗದಲ್ಲಿರುವ ಜ್ಞಾನಭಾರತಿ ವಸತಿ ಬಡಾವಣೆಯಲ್ಲಿ ೩ ಈಗಾಗಲೇ ಆರು ಹಂತದಲ್ಲಿ 2, 700ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಪ್ರದೇಶದಲ್ಲಿ ಇನ್ನಷ್ಟು ಫ್ಲ್ಯಾಟ್‌ಗಳಿಗೆ ಬೇಡಿಕೆ ಇದೆ.ನಾವು ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಯೋಜಿಸಿದ್ದೇವೆ. 100 ಫ್ಲಾಟ್‌(Flat)ಗಳು 2BHK ಆಗಿದ್ದರೆ, ಉಳಿದವು ಸ್ವಲ್ಪ ದೊಡ್ಡದಾಗಿರುತ್ತವೆ. ಮೂರುಇದರ ಕಾರ್ಪೆಟ್‌ ಏರಿಯಾ 70 ಚದರ ಮೀಟರ್‌. ಎರಡನೇ ಬ್ಲಾಕ್‌ನಲ್ಲಿ 58 ಚದರ ಮೀಟರ್‌ ಕಾರ್ಪೆಟ್‌ ಏರಿಯಾದ(Carpet area) 2 ಬಿಎಚ್‌ಕೆಯ 100 ಫ್ಲ್ಯಾಟ್‌ಗಳಿರುತ್ತವೆ.‌2018ರಲ್ಲಿ 2ಬಿಎಚ್‌ಕೆ ಫ್ಲ್ಯಾಟ್‌ಗಳನ್ನು ₹44 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಈ ಬಾರಿ ನಿರ್ಮಾಣ ವೆಚ್ಚ (SRದರ) ಹೆಚ್ಚಾಗಿರುವುದರಿಂದ ಸುಮಾರು ₹60 ಲಕ್ಷ ದರದಲ್ಲಿ ಮಾರಾಟ ಮಾಡುವ ಯೋಜನೆ ಹೊಂದಲಾಗಿದೆ ಎಂದರು. ಪ್ರಾಧಿಕಾರವು ಹಂಚಿಕೆಗಳನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಅವರು ಹೇಳಿದರು,‘ಲಂಪ್‌ ಸಮ್‌ ಟರ್ನ್‌ ಕೀ’(Lump sum turn key) ಆಧಾರದಲ್ಲಿ ಏಳನೇ ಹಂತದಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಗುತ್ತಿಗೆದಾರರು ನಿಗದಿಪಡಿಸಲಾಗಿರುವ ₹81 ಕೋಟಿಗೆ ಎರಡು ವರ್ಷಗಳಲ್ಲಿ ಯೋಜನೆಯನ್ನು ಮುಗಿಸಬೇಕು. ಫೆಬ್ರುವರಿ 5ರಂದು ತಾಂತ್ರಿಕ ಬಿಡ್‌ ತೆರೆಯಲಾಗುತ್ತದೆ. ಅದಾದ ನಂತರ ಪರಿಶೀಲನೆ, ಟೆಂಡರ್‌ ಸಮ್ಮತಿ ಸೇರಿದಂತೆ ಕಾರ್ಯಾದೇಶ ನೀಡಲು ಒಂದು ತಿಂಗಳಾಗುತ್ತದೆ. ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಲು ಯೋಜಿಸಲಾಗಿದೆ ಎಂದು ಬಿಡಿಎ(BDA) ಅಧಿಕಾರಿಗಳು ತಿಳಿಸಿದರು

Related News

spot_img

Revenue Alerts

spot_img

News

spot_img