23.1 C
Bengaluru
Monday, October 7, 2024

ರೆಸಾರ್ಟ್‌ನಿಂದ ವಿಧಾನಸೌಧದತ್ತ ಕಾಂಗ್ರೆಸ್‌ ಶಾಸಕರು;ಈವರೆಗೆ 39 ಶಾಸಕರಿಂದ ಮತದಾನ

ಬೆಂಗಳೂರು: ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಮತದಾನ(Voting) ಆರಂಭಗೊಂಡಿದೆ. ಮೊದಲ ಮತವನ್ನೇ ಬಿಜೆಪಿ(BJP) ಶಾಸಕ ಎಸ್.ಸುರೇಶ್ ಕುಮಾರ್ ಚಲಾಯಿಸಿದರು.ರಾಜ್ಯಸಭೆ ಚುನಾವಣೆ ಹಿನ್ನೆಲೆ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ. BJP ಅಭ್ಯರ್ಥಿ ನಾರಾಯಣಸಾ ಭಾಂಡಗೆ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಡ್ಡಮತದಾನದ ಭೀತಿ ಹಿನ್ನೆಲೆ ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಎರಡು – ಬಸ್‌ಗಳಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಜೆ 6ಕ್ಕೆ ಫಲಿತಾಂಶ ಪ್ರಕಟವಾಗಲಿದೆ.ರಾಜ್ಯಸಭಾ ಚುನಾವಣೆಯಲ್ಲಿ ಇದುವರೆಗೆ 39 ಶಾಸಕರು ಮತದಾನ ಮಾಡಿದ್ದಾರೆ. ಬಿಜೆಪಿಯ 30, ಜೆಡಿಎಸ್‌ನ 4 ಹಾಗೂ ಕಾಂಗ್ರೆಸ್‌ನ 5 ಶಾಸಕರು ಮತದಾನ ಮಾಡಿದ್ದಾರೆ. ಶಾಸಕರಾದ ಸುರೇಶ್ ಕುಮಾರ, ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ಜ್ಞಾನೇಂದ್ರ, ಪ್ರದೀಪ್ ಈಶ್ವರ್ ಅವರು ಮತ ಚಲಾಯಿಸಿದ್ದಾರೆ. ಇನ್ನೂ, ಕಾಂಗ್ರೆಸ್ ಎರಡನೇ ಬಸ್‌ ರೆಸಾರ್ಟ್‌ನಿಂದ ವಿಧಾನಸೌಧಕ್ಕೆ ಆಗಮಿಸಿದೆ.ಕಾಂಗ್ರೆಸ್ 134, ಬಿಜೆಪಿ 66, ಜೆಡಿಎಸ್ 19, ಇತರರು 4 ಶಾಸಕರನ್ನು ಹೊಂದಿದ್ದಾರೆ. ಉಳಿದ ನಾಲ್ವರಲ್ಲಿ ಇಬ್ಬರು ಪಕ್ಷೇತರರು ಮತ್ತು ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಅವರ ಬೆಂಬಲವಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ ಮತ್ತು ಮೂರು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ.

Related News

spot_img

Revenue Alerts

spot_img

News

spot_img