21.1 C
Bengaluru
Sunday, September 8, 2024

ವಾಣಿಜ್ಯ ಬಳಕೆ LPG ಸಿಲಿಂಡರ್ ಬೆಲೆ ಏರಿಕೆ

ನವದೆಹಲಿ:ನಿನ್ನೆ ಅಷ್ಟೇ ಐದು ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ(commarcial cylinder price) ಬೆಲೆಯಲ್ಲಿ ಏರಿಕೆಯಾಗಿದೆ.ಇತ್ತೀಚೆಗಷ್ಟೇ ಇಳಿಕೆ ಕಂಡಿದ್ದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಮತ್ತೆ ಹೆಚ್ಚಳವಾಗಿದೆ.ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಶಾಕ್ ನೀಡಿರುವ ತೈಲ ಕಂಪನಿಗಳು(Oil companies) ವಾಣಿಜ್ಯ ಸಿಲಿಂಡರ್ ಬೆಲೆಯನ್ನು 21 ರೂ.ಗಳಷ್ಟು ಹೆಚ್ಚಿಸಿವೆ, ಈ ಹೆಚ್ಚಳದ ನಂತರ 19 ಕೆಜಿ ಎಲ್‌ಪಿಜಿ ಸಿಲಿಂಡ‌ರ್ ದೆಹಲಿಯಲ್ಲಿ, 19 ಕೆಜಿ ಎಲ್ಪಿಜಿ ಸಿಲಿಂಡರ್ 1775.50 ರೂ.ಗಳ ಬದಲು 1796.50 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ, ಇದು 1885.50 ರ ಬದಲು 1908.00 ನಲ್ಲಿ ಲಭ್ಯವಿರುತ್ತದೆ. ಆದರೆ ಮುಂಬೈನಲ್ಲಿ 1728.00 ರ ಬದಲು 1749 ರೂ. ಚೆನ್ನೈನಲ್ಲಿ, ಇದು ಈಗ 1942.00 ರೂ.ಗಳ ಬದಲು 1968.50 ರೂ.ಗೆ ಏರಿದೆ. ನೆಮ್ಮದಿಯ ಸುದ್ದಿ ಎಂದರೆ ವಾಣಿಜ್ಯ ಸಿಲಿಂಡರ್ ದರ ಏರಿಕೆ ಮಾಡಿರುವ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ದೇಶಾದ್ಯಂತ 14.2 ಕೆಜಿ ಸಿಲಿಂಡರ್ ದರ ಸ್ಥಿರವಾಗಿದೆ. ಗಮನಾರ್ಹವಾಗಿ ಗೃಹಬಳಕೆ ಸಿಲಿಂಡರ್ ದರವನ್ನು ಕೊನೆಯದಾಗಿ ಆಗಸ್ಟ್ 30 ರಂದು ಕಡಿಮೆ ಮಾಡಲಾಗಿತ್ತು.

Related News

spot_img

Revenue Alerts

spot_img

News

spot_img