#Commercial #LPG #Cylinder Price #Decrease
ನವದೆಹಲಿ ಸೆ 1: ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ದೇಶದ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಾಣಿಜ್ಯ ಸಿಲಿಂಡರ್ಗಳನ್ನು ಬಳಸುವವರಿಗೆ ಹೆಚ್ಚಿನ ಪರಿಹಾರವನ್ನು ನೀಡಿದೆ. ಇವತ್ತಿನಿಂದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 158 ರೂ ಕಡಿತ ಮಾಡಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿ (ಒಎಂಸಿ) ಹೊಸ ದರ ಘೋಷಣೆ ಮಾಡಿದೆ. 19 ಕೆ.ಜಿ ತೂಗುವ ವಾಣಿಜ್ಯ ಎಲ್‌ಪಿಜಿ ಗ್ಯಾಸ್(Commercial ) ಸಿಲಿಂಡರ್‌ಗಳ ಬೆಲೆಯನ್ನು 158 ರೂ.ಗಳಷ್ಟು ಕಡಿತಗೊಳಿಸಿ ಪ್ರಕಟಣೆ ಹೊರಡಿಸಿವೆ ಎಂದು ಮೂಲಗಳು ತಿಳಿಸಿವೆ.ದೆಹಲಿಯ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟದ ಬೆಲೆ 1,522ರೂ. ಆಗಿರುತ್ತದೆ.
ಈ ದರಗಳು ಇಂದಿನಿಂದ ಅಂದರೆ ಸೆಪ್ಟೆಂಬರ್ 1 ರಿಂದ ಅನ್ವಯವಾಗುತ್ತವೆ.ರಕ್ಷಾ ಬಂಧನದ ಮುನ್ನಾದಿನದಂದು, ದೇಶದ ಮಹಿಳೆಯರಿಗೆ ಉಡುಗೊರೆಯಾಗಿ ಕೇಂದ್ರ ಸರ್ಕಾರವು ದೇಶೀಯ ಎಲ್‌ಪಿಜಿ ಬೆಲೆಯನ್ನು 200 ರೂ. ಕಡಿಮೆ ಮಾಡಿ ಘೋಷಣೆ ಹೊರಡಿಸಿತ್ತು. ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳು ಮೊದಲ ತಾರೀಖಿನಂದು ದರ ಪರಿಷ್ಕರಣೆ ಮಾಡಲಾಗುತ್ತಿದೆ. ಅದರಂತೆ ಇಂದು ವಾಣಿಜ್ಯ ಬಳಕೆ ಸಿಲಿಂಡರ್‌ನ ಎಲ್‌ಪಿಜಿ ಬೆಲೆಯಲ್ಲಿ 158 ರೂ ಕಡಿತ ಮಾಡಿ ತೈಲ ಕಂಪನಿಗಳು ಘೋಷಣೆ ಮಾಡಿವೆ.ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳು ಮೊದಲ ತಾರೀಖಿನಂದು ದರ ಪರಿಷ್ಕರಣೆ ಮಾಡಲಾಗುತ್ತಿದೆ.ಈ ವರ್ಷದ ಮೇ ಮತ್ತು ಜೂನ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸತತ ಎರಡು ಬಾರಿ ಕಡಿತ ಮಾಡಲಾಗಿತ್ತು. ಕೋಲ್ಕತ್ತಾದಲ್ಲಿ ಇಂದಿನಿಂದ 1802.50 ರೂ.ಗಳ ಬದಲು 1636 ರೂ.ಗೆ ಲಭ್ಯವಿದೆ. ಅಂತೆಯೇ, ಈ ಹಿಂದೆ ಮುಂಬೈನಲ್ಲಿ ಅದರ ಬೆಲೆ 1640.50 ರೂ.ಗಳಿಂದ ಈಗ 1482 ರೂ.ಗೆ ಇಳಿದಿದೆ.