ಬೆಂಗಳೂರು, ಆ. 21: ಸರ್ಕಾರಿ ನೌಕರರ ಪ್ರಭಾರ ಭತ್ಯೆ ಪಡೆಯುವ ಸಂಬಂಧ ಇರುವ ಗೊಂದಲಗಳಿಗೆ ಆರ್ಥಿಕ ಇಲಾಖೆ ತೆರೆ ಎಳೆದಿದೆ. ಸರ್ಕಾರಿ ಅಧಿಕಾರಿಗಳು ಕೆಲವೊಮ್ಮೆ ಅಧಿಸೂಚಿತ ಹುದ್ದೆಗಳ ಜತೆಗೆ ಹೆಚ್ಚುವರಿಯಾಗಿ ಸ್ವತಂತ್ರ ಪ್ರಭಾರ ಹುದ್ದೆಗಳಲ್ಲಿ ಮುಂದುವರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಮೂಲ ಸೂಚಿತ ಹುದ್ದೆಯ ಜತೆಗೆ ಪ್ರಭಾರ ಸ್ವತಂತ್ರ್ಯ ಹುದ್ದೆಗೆ ಸಂಬಂಧಿಸಿದಂತೆ ಪ್ರಭಾರ ಭತ್ಯೆ ಪಡೆಯಬಹುದೇ ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳು ಹುಟ್ಟಿಕೊಂಡಿದ್ದವು. ಈ ಗೊಂದಲಗಳಿಗೆ ಸ್ಪಷ್ಟೀಕರಣ ನೀಡುವ ಮೂಲಕ ಅರ್ಥಿಕ ಇಲಾಖೆ ತೆರೆ ಎಳೆದಿದೆ.
Finance Department Guidelines:
ಈ ಕುರಿತು ಆರ್ಥಿಕ ಇಲಾಖೆಯ ಸ್ಪಷ್ಟೀಕರಣ ನೀಡಿದ್ದು, ಕರ್ನಾಟಕ ನಾಗರಿಕ ಸೇವಾ ನಿಯಮ 32 ಮತ್ತು 68 ರ ಅಡಿಯಲ್ಲಿ ಸರ್ಕಾರಿ ನೌಕರರನ್ನು ಮತ್ತೊಂದು ಹುದ್ದೆಯ ಸ್ವತಂತ್ರ್ಯ ಪ್ರಭಾರದಲ್ಲಿ ಇರಿಸಿದರೆ, ನಿಯಮ 68 ರ ಲ್ಲಿ ತಿಳಿಸಿದಂತೆ ಪ್ರಭಾರ ಭತ್ಯೆಯನ್ನು ಪಡೆಯಬಹುದಾಗಿದೆ. ಇದಕ್ಕೆ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪ್ರಭಾರ ಭತ್ಯೆಯು ಪ್ರಭಾರದಲ್ಲಿರಿಸಲ್ಪಟ್ಟ ಅಧಿಕಾರಿ ಸೆಳೆಯುತ್ತಿರುವ ಮೂಲ ವೇತನದ ಮೇಲೆ ನಿರ್ಧಾರವಾಗುತ್ತದೆ. ಇದು ಅದೇ ನಿಯಮ 32 ರ ಅಡಿ ಸ್ವತಂತ್ರ್ಯ ಪ್ರಭಾರ ವ್ಯಯವಸ್ಥೆ ಮತ್ತು ನಿಯಮ 68 ರ ಟಿಪ್ಪಣಿ – ೧ ರ ಅಡಿ ಮಾಡಲಾದ ಹೆಚ್ಚುವರಿ ಪ್ರಭಾರ ವ್ಯವಸ್ಥೆಯು ಅನ್ವಯವಾಗುತ್ತದೆ.
ಪ್ರಭಾರ ಭತ್ಯೆಯು ತಾತ್ಕಾಲಿಕ ಭತ್ಯೆಯಾಗಿದ್ದು, ಪ್ರಭಾರ ಹೊಂದಿದ ಅಧಿಕಾರಿಯ ಆ ಸೇವಾ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಇದು ಕರ್ನಾಟಕ ಅರ್ಥಿಕ ಸಂಹಿತೆ ಕಂಡಿಕೆ 99 ರ ಉದ್ದೆಶಿತ ಸ್ಥಿರ ಭತ್ಯೆಯಾಗಿರುವ ಕಾರಣ ಮಹಾ ಲೇಖಪಾಲರು ಪ್ರಾಧಿಕಾರಿಸು ಅಗತ್ಯ ಇರುವುದಿಲ್ಲ.
ದಿನಾಂಕ 31/8/2022 ರ ವರೆಗಿನ ಪ್ರಭಾರ ಅವಧಿಗೆ ದಿನಾಂಕ 30-04-2019 ರ ಸರ್ಕಾರಿ ಅದೇಶ ಹಾಗೂ ಸುತ್ತೋಲೆ ಪ್ರಕಾರ 01-09-202 ರ ಮಾರ್ಗಸೂಚಿ ಅನ್ವಯವಾಗಲಿದೆ. ಹೀಗಾಗಿ ಈಗಾಗಲೇ ಇತ್ಯರ್ಥ ಪಡಿಸಿರುವ ಪ್ರಕರಣಗಳಲ್ಲಿ ದಿನಾಂಕ `-09-2022 ರ ನಂತರದ ಅವಧಿಯಲ್ಲಿ ಪ್ರಭಾರ ನಿರ್ವಹಿಸಿದ ಪ್ರಕರಣಗಳಲ್ಲಿ ಶೇ. 7. 5 ರಷ್ಟು ದರದಲ್ಲಿ ಪ್ರಭಾರ ಭತ್ಯೆಯನ್ನು ಪಾವತಿಸಿರುವ ಪ್ರಕರಣಗಳಲ್ಲಿ ವ್ಯತ್ಯಾಸ ಪಾವತಿಸಬಹುದು.
Additional Pay for Additional charge
ಒಂದು ವೇಳೆ ಹೆಚ್ಚುವರಿಯಾಗಿ ಪ್ರಭಾರ ಭತ್ಯೆ ಪಾವತಿಯಾಗಿದ್ದಲ್ಲಿ ಅದನ್ನು ಹಿಂಭರಿಸಿಕೊಳ್ಳುವ ಹಕ್ಕನ್ನು ಸರ್ಕಾರ ಕಾಯ್ದುಕೊಂಡಿರುತ್ತತದೆ. ಈ ಷರತ್ತಿನ ಅನ್ವಯ ಪ್ರಭಾರ ಭತ್ಯೆಯನ್ನು ಮಂಜೂರು ಮಾಡುವ ಅದೇಶದಲ್ಲಿ ಸಾರ್ವನಿಕ ನೌಕರರ ಕಡ್ಡಾಯವಾಗಿ ನಮೂದಿಸಬೇಕು.
ನಿಯಮ 68 ರ ಅಡಿ ಪ್ರಭಾರ ವ್ಯವಸ್ಥೆ ಸಂದರ್ಭದಲ್ಲಿ ಸಾಧ್ಯವಾದಷ್ಟು ಸಂಬಂಧಿತ ನೌಕರರು ಪ್ರಭಾರ ಭತ್ಯೆಯಯನ್ನು ಕ್ಲೇಮ್ ಮಾಡಿದ ತಿಂಗಳ ವೇತನ ಬಿಲ್ ನೊಂದಿಗೆ ಕ್ಲೇಮ್ ಇತ್ಯರ್ಥ ಪಡಿಸಿ ಪ್ರಭಾರ ಭತ್ಯೆ ಪಾವತಿಸುವುದು.
ಉಳಿದಂತೆ ಪ್ರಭಾರ ವ್ಯವಸ್ಥೆ ಮಾಡುವ ಸಕ್ಷಮ ಪ್ರಾಧಿಕಾರಿಗಳು ಹಾಗೂ ಅವರ ಅಧಿಕಾರ ವ್ಯಾಪ್ತಿಯಲ್ಲಿ ನಿಯಮ68 ರ ಟಿಪಪಣಿ -8 ರಲ್ಲಿ ತಿಳಿಸಿರುವಂತೆ ಬದಲಾವಣೆ ಇರುವುದಿಲ್ಲ ಎಂದು ಆರ್ಥಿಕ ಇಲಾಖೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.