21.4 C
Bengaluru
Saturday, July 27, 2024

Check bounce;ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಶಿಕ್ಷೆ, ಕೋರ್ಟ್ ಆದೇಶ

ಬೆಂಗಳೂರು: ಚೆಕ್ ಬೌನ್ಸ್(Check bounce) ಪ್ರಕರಣಕ್ಕೆ ಸಂಬಂಧಿಸಿ ದಂತೆ ಚೆಕ್‌ಬೌನ್ಸ್‌(Checkbounce) ಪ್ರಕರಣಕ್ಕೆ ಸಂಬಂಧಿಸಿ ಸಚಿವ ಮಧು ಬಂಗಾರಪ್ಪ ಅವರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ₹6 ಕೋಟಿ 96 ಲಕ್ಷ 70 ಸಾವಿರ ದಂಡ ವಿಧಿಸಿದೆ. ಇದನ್ನು ಪಾವತಿಸದಿದ್ದರೆ 6 ತಿಂಗಳು ಸೆರೆವಾಸ ಅನುಭವಿಸಲು ಆದೇಶ ನೀಡಿದೆ. ಈ ಹಿಂದೆ ವಿಚಾರಣೆ ನಡೆದಾಗ, ಮಧು ಬಂಗಾರಪ್ಪ ಮುಚ್ಚಳಿಕೆ ಬರೆದುಕೊಟ್ಟು ಬಚಾವ್ ಆಗಿದ್ದರು. ಕೇಸ್‌ಗೆ ಸಂಬಂಧಿಸಿ ಜಾಮೀನು(Bail) ಕೂಡ ಪಡೆದುಕೊಂಡಿದ್ದರು. ಆದರೆ ಬಾಕಿ ಹಣವನ್ನು ಪಾವತಿಸಿರಲಿಲ್ಲ.ಆಕಾಶ್ ಆಡಿಯೋ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ ಅವರು ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಗೆ(Rajesh Export Company) 6.60 ಕೋಟಿ ರು. ಬಾಕಿ ಪಾವತಿಗೆ(Payment of dues) ಚೆಕ್ ನೀಡಿದ್ದರು. ಆದರೆ, 2011ರಲ್ಲಿ ಮಧು ಬಂಗಾರಪ್ಪ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಜೇಶ್ ಎಕ್ಸ್‌ ಪೋರ್ಟ್ ಸಂಸ್ಥೆ ಮಧು ಬಂಗಾರಪ್ಪ ವಿರುದ್ಧ 6.60 ಕೋಟಿ ರು. ಚೆಕ್‌ ಬೌನ್ಸ್ ಪ್ರಕರಣ ದಾಖಲಿಸಿತ್ತು.ಕೋರ್ಟ್‌ ತೀರ್ಪಿನ ಪ್ರಕಾರ ಮಧು ಬಂಗಾರಪ್ಪ ಅವರು, ಜನವರಿ 30ರ ಒಳಗೆ 6,96,70,000 ರೂಪಾಯಿ ದಂಡವನ್ನು ಪಾವತಿಸಬೇಕು. ಈ ದಂಡದ ಹಣದಲ್ಲಿ 6,96,60,000 ರೂಪಾಯಿಯನ್ನು ಮಧು ಬಂಗಾರಪ್ಪ ಅವರು ದೂರುದಾರರಿಗೆ(complainant) ನೀಡಬೇಕು. ಉಳಿದ 10,000 ರೂಪಾಯಿಯನ್ನು ಸರ್ಕಾರಕ್ಕೆ ದಂಡವಾಗಿ ಪಾವತಿಸಬೇಕು.

Related News

spot_img

Revenue Alerts

spot_img

News

spot_img