ಬೆಂಗಳೂರು, ಮೇ . 10 : ಭಾರತೀಯರ ಅನುಕೂಲಕ್ಕಾಗಿ ಸರ್ಕಾರದಲ್ಲಿ ಸಾಕಷ್ಟು ಯೋಜನೆಗಳಿವೆ. ಅದರಲ್ಲಿ ಕೇಂದ್ರ ಸರ್ಕಾರದ ಹಲವು ಯೋಜನೆಗಳು ಕಡಿಮೆ ವೆಚ್ಚದ್ದಾಗಿದ್ದು, ಬಡವರಿಗೆ ಹಲವು ಅನುಕೂಲಗಳನ್ನು ಮಾಡಿಕೊಡುತ್ತದೆ. ಇದರಲ್ಲಿ ಹೆಚ್ಚಿನ ಯೋಜನೆಗಳು ಪೋಸ್ಟ್ ಆಫೀಸಿನಲ್ಲೇ ಲಭ್ಯವಿದೆ. ಇದೀಗ ಕೇಂದ್ರ ಸರ್ಕಾರದ ಮೂರು ಯೋಜನೆಗಳು ಮುಂಚೂಣಿಯಲ್ಲಿವೆ. ಅವುಗಳ ಪ್ರಯೋಜನವನ್ನು ಕೋಟಿಗೂ ಅಧಿಕ ಭಾರತೀಯರು ಪಡೆಯುತ್ತಿದ್ದಾರೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯಿಂದಾಗಿ ರೈತರಿಗೆ ಘೊಷಣೆ ಮಾಡುವ ಮೂಲಕ ಆರ್ಥಿಕ ಭದ್ರತೆಯನ್ನು ಒದಗಿಸಿದಂತಾಗಿದೆ. ಈ ಯೋಜನೆಗಳಿಂದ ರೈತ ಕುಟುಂಬಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಯೋಜನೆ ಅಡಿಯಲ್ಲಿ ಪಾಲಿಸಿ ಮಾಡಿಸಿದ ನಾಗರಿಕರಿಗೆ ಭಾರತ ಸರ್ಕಾರ 2 ಲಕ್ಷ ರೂಪಾಯಿ ಅನ್ನು ನೀಡುತ್ತದೆ. ಇದು ಒಂದು ವರ್ಷದ ವಿಮಾ ಯೋಜನೆಯಾಗಿದೆ. ಇದು ಯಾವುದೇ ಕಾರಣದಿಂದ ಮರಣಕ್ಕೆ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ.
ಯೋಜನೆಯು ಜೀವ ವಿಮಾ ಕಂಪನಿಗಳ ಮೂಲಕ ನೀಡಲಾಗುವುದು. PMJJBY ಅನ್ನು 18 ರಿಂದ 50 ವರ್ಷ ವಯಸ್ಸಿನೊಳಗಿನವರು ಮತ್ತು ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಜನರು ಪಡೆಯಬಹುದು. ಸೇರಲು ಮತ್ತು ಸ್ವಯಂ-ಡೆಬಿಟ್ ಸಕ್ರಿಯಗೊಳಿಸಲು ತಮ್ಮ ಒಪ್ಪಿಗೆಯನ್ನು ನೀಡುವ ಆಸಕ್ತ ಜನರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಪ್ರಿಮಿಯಂ ಆಗಿ 330 ರೂಪಾಯಿ ಅನ್ನು ಪ್ರತೀ ವರ್ಷ ಕಟ್ಟ ಬೇಕಾಗುತ್ತದೆ. ಇದಕ್ಕೆ 16.2 ಕೋಟಿ ಗ್ರಾಹಕರು ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಇನ್ನು ಎರಡನೇಯ ಯೋಜನೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ. ಇದು ಅಪಘಾತ ವಿಮೆಯಾಗಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರು ಪ್ರಾರಂಭಿಸಬಹುದು. 18ರಿಂದ 70 ವರ್ಷ ವಯೋಮಾನದವರು ವರ್ಷಕ್ಕೆ ಕೇವಲ 20 ರೂ ಮಾತ್ರ ಪ್ರೀಮಿಯಮ್ ಕಟ್ಟಿ ಯೋಜನೆಯ ಫಲಾನುಭವಿಗಳಾಗಬಹುದು. ಅಪಘಾತದಿಂದ ಸಾವಾದರೆ ವಾರಸುದಾರರಿಗೆ 2 ಲಕ್ಷ ರೂಪಾಯಿ ಹಣವನ್ನು ನೀಡಲಿದೆ. ಅಪಘಾತದಿಂದ ಅಂಗ ಊನವಾದರೆ ಕೇಂದ್ರ ಸರ್ಕಾರ 1 ಲಕ್ಷ ರೂಪಾಯಿ ಅನ್ನು ನೀಡುತ್ತದೆ. ಈ ಯೋಜನೆಗೆ 34.2 ಕೋಟಿ ಗ್ರಾಹಕರು ಸ್ಕೀಮ್ ಅನ್ನು ಪಡೆದಿದ್ದಾರೆ.
ಇನ್ನು ಅಟಲ್ ಪಿಂಚಣಿ ಯೋಜನೆಯು ನಿವೃತ್ತಿ ಜೀವನಕ್ಕೆ ಒಂದು ಉತ್ತಮವಾದ ಹೂಡಿಕೆಯಾಗಿದೆ. ಇದೀಗ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. 5.2 ಕೋಟಿ ಗ್ರಾಹಕರು ಅಟಲ್ ಪೆನ್ಷನ್ ಯೋಜನೆಗೆ ಸೇರ್ಪಡೆಯಾಗಿದ್ದಾರೆ. ಚಂದಾದಾರರ ವಯಸ್ಸು 18 – 40 ವರ್ಷಗಳ ನಡುವೆ ಇರಬೇಕು. ಅಟಲ್ ಪಿಂಚಣಿ ಯೋಜನೆಯನ್ನು 20 ವರ್ಷಗಳ ಕಾಲ ಆಯಾ ವಯಸ್ಸಿಗೆ ನಿಗಧಿ ಪಡಿಸಿರುವ ಮೊತ್ತವನ್ನು ಪಾವತಿಸಿದರೆ, 60 ವರ್ಷದಿಂದ ಪಿಂಚಣಿಯನ್ನು ಪಡೆಯಬಹುದು.