22.4 C
Bengaluru
Saturday, June 15, 2024

ಯಡಿಯೂರಪ್ಪಗೆ Z ಕೆಟಗರಿ ಭದ್ರತೆ ಒದಗಿಸಿದ ಕೇಂದ್ರಸರ್ಕಾರ

ಬೆಂಗಳೂರು;ಬಿ.ಎಸ್‌.ಯಡಿಯೂರಪ್ಪಗೆ z ಕೆಟಗರಿ ಭದ್ರತೆ ಬಿಜೆಪಿ(BJP) ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಭದ್ರತೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಯಡಿಯೂರಪ್ಪ ಅವರಿಗೆ Z ಕೆಟಗರಿ CRPF ಭದ್ರತೆಯನ್ನು ಒದಗಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. Z ಕೆಟಗರಿಯ ಕರ್ನಾಟಕದಲ್ಲಿ ಮಾತ್ರ ಭದ್ರತೆ ಒದಗಿಸಲಾಗುವುದು. ಸಿಆರ್‌ಪಿಎಫ್ ಶೀಘ್ರದಲ್ಲೇ ಭದ್ರತೆಯ ಉಸ್ತುವಾರಿ ವಹಿಸಿಕೊಳ್ಳಲಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆ ಹಿನ್ನಲೆ ಬಿಎಸ್‌ವೈ ರಾಜ್ಯ ಪ್ರವಾಸ ಮಾಡಲಿರುವ ಕಾರಣ, ಭದ್ರತೆ ಹೆಚ್ಚಿಸಲಾಗಿದೆ.ಕೇಂದ್ರ ಗೃಹ ಇಲಾಖೆಯ ನಿರ್ದೇಶನದಂತೆ ಕೇಂದ್ರ ಮೀಸಲು ಪೊಲೀಸ್ ಪಡೆ ಕಮಾಂಡೋಗಳು ಶೀಘ್ರವೇ ಭದ್ರತಾ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಯಡಿಯೂರಪ್ಪ ಅವರ ಭದ್ರತೆಗೆ ಒಟ್ಟು 33 ಝಡ್ ಕೆಟಗರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡ್‌ಗಳನ್ನು ಅವರ ನಿವಾಸದಲ್ಲಿ ಇರಿಸಲಾಗುವುದು, ಆರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಹಗಲು-ರಾತ್ರಿ ದಿನದ 24 ಗಂಟೆ ಕಾಯುತ್ತಿರುತ್ತಾರೆ. ಸಂಭಾವ್ಯ ಬೆದರಿಕೆಗಳ ವಿರುದ್ಧ ನಿರಂತರ ಜಾಗ್ರತೆ ವಹಿಸಲು 12 ಸಶಸ್ತ್ರ ಬೆಂಗಾವಲು ಕಮಾಂಡೋಗಳನ್ನು ಮೂರು ಪಾಳಿಗಳಲ್ಲಿ ನಿಯೋಜಿಸಲಾಗುವುದು. ನಿರಂತರ ಕಣ್ಗಾವಲು ಕಾಯ್ದುಕೊಳ್ಳಲು ಇಬ್ಬರು ವೀಕ್ಷಕರನ್ನು ಶಿಫ್ಟ್‌ಗಳಲ್ಲಿ ನಿಯೋಜಿಸಲಾಗುತ್ತದೆ.

Related News

spot_img

Revenue Alerts

spot_img

News

spot_img