ಬೆಂಗಳೂರು, ಡಿ. 01:
ಅವರಿಗೇನಪ್ಪಾ, ಸುಂಕ ಕಟ್ಟಿದರೆ, ವಿಧಾನ ಸೌಧ ಕೂಡ ನೋಂದಣಿ ಮಾಡಿಕೊಟ್ಟು ಬಿಡುತ್ತಾರೆ ಎಂಬ ಮಾತು ಉಪ ನೋಂದಣಾಧಿಕಾರಿಗಳ ಬಗ್ಗೆ ಮಾತನಾಡುವುದು ಚಾಲ್ತಿಯಲ್ಲಿದೆ. ಹೌದು ಸರ್ಕಾರಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿದರೆ ಯಾವ ಜಾಗವನ್ನೂ ಬೇಕಾದರೂ ನೋಂದಣಿ ಮಾಡಿಕೊಡುತ್ತಾರೆ. ಹಾಗಂತ ಅದು ಅಪರಾಧವೇ ? ಅಪರಾಧ ಆಗಿದ್ದರೆ ಅವರಿಗೆ ಶಿಕ್ಷೆಯಾಗಿ ಜೈಲಿಗೆ ಹೋಗಬೇಕಲ್ಲವೇ ?ಸರ್ಕಾರಿ ಜಮೀನನ್ನು ಉಪ ನೋಂದಣಾಧಿಕಾರಿಗಳು ಅಕ್ರಮವಾಗಿ ನೋಂದಣಿ ಮಾಡಿದ್ದಾರೆ ಎಂಬ ಸಾಕಷ್ಟು ಅರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಲೇ ಇವೆ. ಸಾಮಾಜಿಕ ಜಾಲ ತಾಣ ಹಾಗೂ ನಿಯತ ಕಾಲಿಕೆಗಳಲ್ಲಿ ನೋಡಿರುತ್ತೇವೆ.
ಸರ್ಕಾರಿ ಜಮೀನು ಅಕ್ರಮ ನೋಂದಣಿ ಅರೋಪಕ್ಕೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ಹಾಕಿರುವುದನ್ನು ನೋಡಿದ್ದೇವೆ. ಆದರೆ, ಸರ್ಕಾರಿ ಜಮೀನನ್ನು ಅಕ್ರಮವಾಗಿ ನೋಂದಣಿ ಮಾಡಿದ್ದಾರೆ ಎಂಬ ಅರೋಪಕ್ಕೆ ಸಂಬಂಧಿಸಿದಂತೆ ಯಾವುದಾದರೂ ಉಪ ನೋಂದಣಾಧಿಕಾರಿಯನ್ನು ಶಿಕ್ಷೆಗೆ ಗುರಿಪಡಿಸಿರುವುದು ನೋಡಿದ್ದೆವೆಯೇ ? ಇಲ್ಲ.
ಹೌದು. ಯಾಕೆಂದರೆ ಕಾನೂನು ಹೇಳುವುದೇ ಬೇರೆ. ಸರ್ಕಾರಕ್ಕೆ ಕಂದಾಯ ಸಂಗ್ರಹ ಮಾಡಲು ನೇಮಕವಾಗಿರುವ ಉಪ ನೋಂದಣಾಧಿಕಾರಿಗಳಿಗೆ ಕಾನೂನು ರಕ್ಷಣೆ ಕೊಟ್ಟಿದೆ. ಮಿಗಿಲಾಗಿ ಜಮೀನುಗಳ ನೋಂದಣಿ ಸಂಬಂಧ ಉಪ ನೋಂದಣಾಧಿಕಾರಿಗಳ ಕರ್ತವ್ಯದ ಬಗ್ಗೆ ಹೈಕೋರ್ಟ್ ಕೂಡ ಮಹತ್ವದ ತೀರ್ಪು ನೀಡಿದೆ. ಹೀಗಾಗಿ ಉಪ ನೋಂದಣಾಧಿಕಾರಿಗಳ ವಿರುದ್ಧ ಜಮೀನು ಅಕ್ರಮ ನೋಂದಣಿ ಸಂಬಂಧ ಕ್ರಿಮಿನಲ್ ದಾವೆಗಳು ಹೂಡಿದರೂ ಅವು ನ್ಯಾಯಾಲಯದ ಹಂತದಲ್ಲಿ ಬಹುತೇಕ ವಜಾ ಅಗುತ್ತವೆ. ಯಾಕೆಂದರೆ ಉಪ ನೋಂದಣಾಧಿಕಾರಿಗಳಿಗೆ ಭಾರತೀಯ ನೋಂದಣಿ ಕಾಯ್ದೆ 1908 ಮತ್ತು ಕರ್ನಾಟಕ ನೋಂದಣಿ ನಿಯಮಗಳು 1965 ರಕ್ಷಣೆ ನೀಡುತ್ತವೆ.
ಸರ್ಕಾರಿ ಜಮೀನು ನೋಂದಣಿ ಸಂಬಂಧ ಮೇಲ್ನೋಟಕ್ಕೆ ಅಕ್ರಮ ನೋಂದಣಿ ಎನಿಸಿದರೂ ಉಪ ನೋಂದಣಾಧಿಕಾರಿಗಳು ಭಾರತೀಯ ನೋಂದಣಿ ಕಾಯಿದೆ-1908 ಮತ್ತು ಕರ್ನಾಟಕ ನೋಂದಣಿ ನಿಯಮಗಳು-1965 ಇದರಲ್ಲಿನ ಅಂಶಗಳನ್ನು ಪಾಲಿಸಿರುತ್ತಾರೆ. ಇದರನ್ವಯ ನಿಯಮ 73ಯಲ್ಲಿ ಈ ರೀತಿ ಹೇಳಲಾಗಿದೆ.
ಅದರ ತಾತ್ಪರ್ಯ ಇಷ್ಟೆ. ನೊಂದಣಿ ಕಾಯಿದೆ ಮತ್ತು ನಿಯಮದ ಪ್ರಕಾರ ಉಪ ನೋಂದಣಾಧಿಕಾರಿಗಳು ಮುಖ್ಯವಾಗಿ ಸರ್ಕಾರದ ರೆವೆನ್ಯೂ ಸಂಗ್ರಾಹಣೆಗಾಗಿ ನೇಮಿಸಲಾಗಿದ್ದು ಅವರು ಒಡೆತನ, ನೈಜತೆ, ಹಕ್ಕು ಬಾದ್ಯತೆ ಮತ್ತು ಹಿತಾಶಕ್ತಿಯ ಬಗ್ಗೆ ಪರಿಶೀಲಿಸಲು ಅಧಿಕಾರವಿರುವುದಿಲ್ಲ. ಈ ಕುರಿತು ಕಲಂ 73 ರಲ್ಲಿ ಉಪ ನೋಂದಾಣಾಧಿಕಾರಿಗಳ ಕರ್ತವ್ಯಗಳ ಬಗ್ಗೆ ಹೇಳಲಾಗಿದೆ.
(I) ಬರೆದುಕೊಟ್ಟ ಬಗ್ಗೆ ಕ್ರಮಬದ್ದವಾಗಿ ಒಪ್ಪಿಗೆಯಾಗಿದ್ದರೆ ನೋಂದಣಿಗೆ ತಂದ ದಸ್ತಾವೇಜಿನ ಕ್ರಮಬದ್ದತೆಯ ಬಗ್ಗೆ ವಿಚಾರಣೆ ನಡೆಸುವುದು ಅಥವಾ ದಸ್ತಾವೇಜಿನ ನೋಂದಣಿ ಬಗ್ಗೆ ಬಾಯಿ ಮಾತಿನ ಅಥವಾ ಲಿಖಿತ ತಕರಾರಿನ ಬಗ್ಗೆ ವಿಚಾರಣೆ ನಡೆಸುವುದು ನೋಂದಣಿ ಅಧಿಕಾರಿಯ ಕರ್ತವ್ಯದ ಭಾಗವಾಗಿರುವುದಿಲ್ಲ, ಆದರೆ ಬರೆದುಕೊಟ್ಟವರು ಓದಲು ಬಾರದವರಾಗಿದ್ದರೆ ಅದನ್ನು ಓದಿ ಹೇಳತಕ್ಕದ್ದು ಮತ್ತು ಅವಶ್ಯವಿದ್ದಲ್ಲಿ ವಿವರಣೆ ಮಾಡಿ ಹೇಳತಕ್ಕದ್ದು. ದಾಸ್ತವೇ ಜು ಅವರಿಗೆ ಅರ್ಥವಾಗದ ಭಾಷೆಯಲ್ಲಿದ್ದರೆ ಅದನ್ನು ಅರ್ಥೈಸಿ ಹೇಳತಕ್ಕದ್ದು.
(ii) ನೋಂದಣಿಯು ಕೆಳಕಂಡ ಆಧಾರದ ಮೇಲೆ ಯಾವನೇ ವ್ಯಕ್ತಿಯಿಂದ ಆಕ್ಷೇಪಣೆ ಮಾಡಲ್ಪಟ್ಟಿದ್ದರೆ, ಉದಾ:-
(ಎ) ನೋಂದಣಿ ಅಧಿಕಾರಿಯ ಎದುರಿಗೆ ಬರೆದುಕೊಟ್ಟವ ಅಥವಾ ಹಕ್ಕು ಸಾಧಿಸುವವನಾಗಿ ಕಾಣಬಂದಿದ್ದವನು ಅಲ್ಪವಾಯಿ, ಹುಟ್ಟುದಡ್ಡ(idiot) ಅಥವಾ ಹುಚ್ಚನಾಗಿದ್ದರೆ,
(ಬಿ)ಲಿಖಿತವು ನಖಲು(Fake) ಮಾಡಿದ್ದರೆ,
(ಸಿ) That the person appearing as a representative, Assignee or agent as no right to appear in that capacity
(ಡಿ) ಪ್ರತಿನಿಧಿ, ಹಸ್ತಾಂತರ ಪಡೆದವ ಅಥವಾ ಏಜೆಂಟನೆಂದು ಕಾಣಬಂದ ವ್ಯಕ್ತಿಗೆ ಹಾಗೆ ಕಾಣಬರುವ ಅಧಿಕಾರವಿಲ್ಲ. ಮೃತ ಪಟ್ಟಿದ್ದನೆಂದು ಹೇಳಿ ಪಕ್ಷಗಾರನು ನೊಂದಣಿಗೆ ಅರ್ಜಿ ಸಲ್ಲಿಸಿದ್ದು ಬರೆದುಕೊಟ್ಟ ವ್ಯಕ್ತಿಗೆ ನಿಜವಾಗಿ ಮೃತಪಟ್ಟಿಲ್ಲದಿದ್ದರೆ,
ನೊಂದಣಿ ಕಾಯಿದೆ ಮತ್ತು ನಿಯಮದ ಪ್ರಕಾರ ಉಪ ನೋಂದಣಾಧಿಕಾರಿಗಳು ಮುಖ್ಯವಾಗಿ ಸರ್ಕಾರದ ರೆವೆನ್ಯೂ ಸಂಗ್ರಾಹಣೆಗಾಗಿ ನೇಮಿಸಲಾಗಿದ್ದು ಅವರು ಒಡೆತನ, ನೈಜತೆ, ಹಕ್ಕು ಬಾದ್ಯತೆ ಮತ್ತು ಹಿತಾಶಕ್ತಿಯ ಬಗ್ಗೆ ಪರಿಶೀಲಿಸಲು ಅಧಿಕಾರವಿರುವುದಿಲ್ಲ ಹಾಗೂ ಉಪ ನೋಂದಣಾಧಿಕಾರಿಗಳು ದಾಖಲಾತಿಗಳನ್ನು ನೋಂದಾಯಿಸುವುದರಿಂದ ಒಂದು ನಂಬಿಕಸ್ತ ಸರ್ಕಾರಿ ಸಾಕ್ಷಿಯನ್ನು ಇಟ್ಟಿರುವಂತಾಗಿದೆ.
ಭೂಕಂದಾಯ ಅಧಿನಿಯಮ-1964 ರಲ್ಲಿನ ಕಲಂ 192(A) & (B) ಸರ್ಕಾರಿ ಜಮೀನುಗಳ ಪರಭಾರೆ ಬಗ್ಗೆ ಹೇಳಲಾಗಿದೆ. ನೋಂದಣಿ ಕಾಯಿದೆ ಮತ್ತು ನಿಯಮಗಳು ಮೇಲಿನ ರೀತಿ ಇರುವುದರಿಂದ 192(A) & (B) ಈ ಕಲಂಗಳು ಉಪ ನೋಂದಣಾಧಿಕಾರಿಗಳಿಗೆ ಅನ್ವಯಿಸುವುದಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು (High Court of Karnataka) ಇಲ್ಲಿನ Criminal Petition no-4662/2008, ಎಸ್.ರಾಮಣ್ಣ V/s ನೆಲಮಂಗಲ ಪೊಲೀಸ್ ಪ್ರಕರಣದ ತಿರ್ಪಿನಲ್ಲಿ ತಿಳಿಸಿಲಾಗಿದೆ. ಅದ್ದರಿಂದ ಉಪ ನೊಂದಣಾಧಿಕಾರಿಗಳು ವಿಧಾನಸೌದವನ್ನು ಸಹ ನೊಂದಣಿ ಮಾಡಬಹುದು ಎಂಬ ನಾನ್ನುಡಿ ಜಾಲ್ತಿಯಲ್ಲಿದೆ.