28.2 C
Bengaluru
Friday, September 20, 2024

ಬಜೆಟ್ ಗಾತ್ರ ₹3.80 ಲಕ್ಷ ಕೋಟಿಗೆ ಹೆಚ್ಚಳ;ಸಿಎಂ ಸಿದ್ದರಾಮಯ್ಯ 

#Budget size #increased # ₹3.80 lakh crore# CM Siddaramaiah

ತುಮಕೂರು : ಸಿಎಂ ಸಿದ್ದರಾಮಯ್ಯ 2024-25 ನೇ ಸಾಲಿನಲ್ಲಿ 3.80 ಲಕ್ಷ ಕೋಟಿ ರೂ. ಬಜೆಟ್‌(Budget) ಮಂಡಿಸಲು ಯೋಜನೆ(Scheeme) ರೂಪಿಸಲಾಗುತ್ತಿದೆ ಎಂದು .ತುಮಕೂರಿನಲ್ಲಿ ಮಾತನಾಡಿದ ಸಿಎಂ , ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ(Garranty) ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ.ಈ ಬಾರಿ 3.80 ಲಕ್ಷ ಕೋಟಿ ರೂ. ಬಜೆಟ್‌ ಮಂಡಿಸುತ್ತೇನೆ ಎಂದರು.ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈವರೆಗೂ ಬಜೆಟ್ ಗಾತ್ರ ₹3.27 ಲಕ್ಷಕ್ಕೂ ಹೆಚ್ಚು ದಾಟಿರಲಿಲ್ಲ. ಆದರೆ, ಈ ಸಲ ₹50 ಸಾವಿರ ಕೋಟಿಯಷ್ಟು ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಖಜಾನೆ ಖಾಲಿಯಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ ಎಂದ ಅವರು, ಹಣ ಇಲ್ಲದಿದ್ದರೆ ಬಜೆಟ್ ಗಾತ್ರ ಏರಿಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ,ಸರ್ಕಾರ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವವರಿಗೆ ತುಮಕೂರಲ್ಲಿ ಆಯೋಜಿಸಿರುವ ಇಂಥ ಕಾರ್ಯಕ್ರಮಗಳೇ ಸಾಕ್ಷಿಯಾಗಲಿವೆ ಎಂದು ತಿಳಿಸಿದರು.ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ರಾಜ್ಯದ ಪಾಲಿನ ಒಂದೇ ಒಂದು ರೂಪಾಯಿ ಬರ ಪರಿಹಾರವನ್ನೂ ನೀಡಿಲ್ಲ. ಆದರೆ ರಾಜ್ಯ ಸರ್ಕಾರ 29,28,910 ರೈತರ ಖಾತೆಗೆ ಬರ ಪರಿಹಾರದ ಮೊದಲ ಕಂತನ್ನು ಜಮೆ ಮಾಡಿದೆ ಎಂದು ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img