20.8 C
Bengaluru
Thursday, December 5, 2024

Bitcoin Scam;ಬಿಟ್ ಕಾಯಿನ್ ಅಕ್ರಮ ಪ್ರಕರಣ ಎಸ್ ಐಟಿಯಿಂದ ಇಬ್ಬರ ಬಂಧನ

#Bitcoin Scam #Bitcoin #Illegal Case #Two arrested # SIT

ಬೆಂಗಳೂರು;ಬಿಟ್ ಕಾಯಿನ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಅರೆಸ್ಟ್ ಮಾಡಲಾಗಿದ್ದು, ಎಸ್‌ಐಟಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಮತ್ತು ಸೈಬರ್ ಸೆಂಟರ್‌ನ ಸಂತೋಷ್‌ನನ್ನು ಎಸ್‌ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಸಾಕ್ಷ್ಯ ನಾಶ ಮಾಡಿದ ಹಿನ್ನೆಲೆ ಈ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಶ್ರೀಕಿಯನ್ನು ಕಸ್ಟಡಿಗೆ ತೆಗೆದುಕೊಂಡಾಗ ಬಿಟ್ ಕಾಯಿನ್ ಅಕ್ರಮ ಆಗಿರೋದು ಸಾಬೀತಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಐವರನ್ನು ವಶಕ್ಕೆ ಪಡೆದಿದ್ದರು. ಬಂಧಿತರಲ್ಲಿ ಪ್ರಶಾಂತ್‌ ಬಾಬು ಸೈಬ‌ರ್ ಇನ್ಸೆಕ್ಟ‌ರ್ ಆಗಿದ್ದು, ಸಂತೋಷ್ ಸೈಬರ್ ಸೆಂಟರ್ ವ್ಯಕ್ತಿ ಆಗಿದ್ದ.ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮುಖ್ಯ ಆರೋಪಿ ಶ್ರೀಕಿಯನ್ನು 90 ದಿನ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರು. ಸಿಸಿಬಿ ಬಂಧನದಲ್ಲಿದ್ದಾಗ ಬಿಟ್ ಕಾಯಿನ್ ಅಕ್ರಮ ಆಗಿರೋದು ಸಾಬೀತಾಗಿದೆ.90 ದಿನ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗ ಹೊಸ ಲ್ಯಾಪ್‌ಟ್ಯಾಪ್ ಖರೀದಿ ಮಾಡಿದ್ದ. ಈ ಲ್ಯಾಪ್‌ಟಾಪ್ ಬಳಸಿ ಸಾಕ್ಷ್ಯ ನಾಶ ಮಾಡಿದ್ದಾನೆ. ಕೋಟ್ಯಂತರ ರೂ. ಮೌಲ್ಯದ ಬಿಟ್ ಕಾಯಿನ್‌ಗಳ ವರ್ಗಾವಣೆ ಆಗಿದೆ. ಈ ಮಾಹಿತಿ ಆಧರಿಸಿ ಇಬ್ಬರನ್ನು ಸುದೀರ್ಘ ವಿಚಾರಣೆ ಮಾಡಿದ್ದಾರೆ.ಇಂದು ಮೂವರು ಡಿವೈಎಸ್ಪಿಗಳನ್ನು ಎಸ್‌ಐಟಿ ವಿಚಾರಣೆಗೆ ಕರೆದಿದೆ. ಸಿಸಿಬಿಯಲ್ಲಿ ಅಧಿಕಾರಿಗಳು ಶ್ರೀಕಿಯನ್ನು ತನಿಖೆ ನಡೆಸಿದ್ದು, ಇಂದು ವಿಚಾರಣೆಗೆ ಹಾಜರಾಗಲಿದ್ದಾನೆ. ಪ್ರಕರಣದ ಕುರಿತು ಅರೆಸ್ಟ್ ಪರ್ವ ಇಂದೂ ಸಹ ಮುಂದುವರಿಯಲಿದ್ದು, ಅಕ್ರಮ ಸಾಬೀತಾದ ಹಿನ್ನೆಲೆ ತನಿಖೆಯನ್ನು ಚುರುಕುಗೊಳಿಸಲಾಗಿದೆ

Related News

spot_img

Revenue Alerts

spot_img

News

spot_img