ಬೆಂಗಳೂರು, ಏ. 06 : ವಿಶ್ವದಲ್ಲೇ ಅತೀ ದೊಡ್ಡ ಲಸಿಕಾ ಉತ್ಪಾದನಾ ಕೇಂದ್ರವಾಗಿರುವ ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕ ಸೈರಸ್ ಪೂನಾವಾಲಾ ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ. ಸೈರಸ್ ಅವರು 2015 ರಲ್ಲಿ 750 ಕೋಟಿ ರೂ.ನೀಡಿ ಮುಂಬೈನ ಭುಲಾಭಾಯ್ ರಸ್ತೆಯಲ್ಲಿರುವ ಆಸ್ತಿಯನ್ನು ಖರೀದಿ ಮಾಡಿದ್ದರು. ಆದರೆ ಕಳೆದ 8 ವರ್ಷದಿಂದ ಇದರ ವ್ಯಾಜ್ಯಾ ಹಾಗೇ ಉಳಿದಿದ್ದು ಕೇಂದ್ರ ಸರ್ಕಾರದ ಕೈಯಲ್ಲಿ ಇದರ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ ಎಂದು ಗರಂ ಆಗಿದ್ದಾರೆ.
ರಾಜಕೀಯ ಮತ್ತು ಸಮಾಜವಾದಿ ಪ್ರೇರಿತ ನಿರ್ಧಾರವಿರುವುದರಿಂದಲೇ ಈ ಆಸ್ತಿಯ ಮಾಲೀಕತ್ವದ ಬಗ್ಗೆ ಇನ್ನೂ ವಿವಾದವಿದೆ ಎಂದು ಹೇಳಿದ್ದಾರೆ. ಇನ್ನು ಮಹಾರಾಷ್ಟ್ರ ಸರ್ಕಾರ ಮತ್ತು ರಕ್ಷಣಾ ಸಚಿವಾಲಯಗಳು ಈ ಆಸ್ತಿಯ ಮೇಲಿನ ಒಡೆತನದ ಬಗ್ಗೆ ವಿವಾದವಿದೆ. ಇವೆರಡೂ ಕೂಡ ಆಸ್ತಿ ತನ್ನ ಒಡೆತನ ಎಂದು ಸೈರಸ್ ಪೂನಾವಾಲಾ ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದು ಮಹಾರಾಜರ ನಿವಾಸವಾಗಿದ್ದು, ಈ ಅರಮನೆ ಲಿಂಕನ್ ಹೌಸ್ ಅನ್ನು ಸೈರಸ್ ಅವರು ಖರೀದಿ ಮಾಡಿದ್ದರು. ಆದರೆ. ಇದು ಇನ್ನೂ ಅವರ ವಶಕ್ಕೆ ನೀಡಿಲ್ಲ.
ವಾಂಕನೇರ್‌ನ ಕೊನೆಯ ಮಹಾರಾಜ ಈ ಅರಮನೆಯನ್ನು ಮುಂಬೈನಲ್ಲಿ 1933 ರಲ್ಲಿ ನಿರ್ಮಾಣ ಮಾಡಿದ್ದರು. ಆದರೆ, 1957 ರಲ್ಲಿ ಈ ಮನೆಯನ್ನು ವಂಕನರ್ ಆಡಳಿತ ಅಮೆರಿಕಾಗೆ ಗುತ್ತಿಗೆ ನೀಡಿದ್ದರು. ಅಮೆರಿಕಾ ಸರ್ಕಾರ ಈ ಕಟ್ಟಡವನ್ನು ವೀಸಾ ನೀಡಲು ಬಳಸುತ್ತಿತ್ತು. 2014ರಲ್ಲಿ ಅದು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಿತ್ತು. ಈ ಅರಮನೆಯನ್ನು ಎರಡು ಎಕರೆ ಜಾಗದಲ್ಲಿ ನಿರ್ಮಿಸಿದ್ದು, ಐವತ್ತು ಸಾವಿರ ವಿಸ್ತೀರ್ಣವನ್ನು ಹೊಂದಿದೆ.