ಬಿಗ್ ಬಾಸ್ ಸೀಸನ್ 10 ಬಿಗ್ ಬಾಸ್ ಪ್ರೇಕ್ಷಕರ ಮನಸಲ್ಲಿ ಕುತೂಹಲ ಮೂಡಿಸಿದ. ಬಿಗ್ ಬಾಸ್ ಮನೆಯ ಜನರಿಗೆ ಒಂದು ಟಾಸ್ಕ್ ನೀಡಿತ್ತು. ಗಂಧರ್ವರು ಮತ್ತು ರಾಕ್ಷಸರು ಎಂದು 2 ಗುಂಪು ಮಾಡಿದ್ದರು . ಮೊದಲ ಬಾರಿಗೆ ವರ್ತುರ್ ಸಂತೋಷ್ ಟೀಮ್ ಗಂಧರ್ವರಾಗಿದ್ದು ಸಂಗೀತ ಟೀಮ್ ರಾಕ್ಷಸ ತಂಡವಾಗಿತ್ತು. ಇದೀಗ ಆರಂಭದಲ್ಲಿ ರಕ್ಕಸರಾಗಿದ್ದ ಸಂಗೀತಾ ತಂಡ, ಈಗ ಗಂಧರ್ವರಾಗಿದ್ದಾರೆ.
ಸೇಡು ತೀರಿಸಿಕೊಳ್ಳುವ ಬರದಲ್ಲಿ ಆಟವಾಡುತ್ತಿರುವ ವಿನಯ್ ತಂಡ..!
ಮೊದಲ ದಿನ ರಕ್ಕಸರಿಂದ ಕಿರುಕುಳ ಅಪಮಾನ ಅನುಭವಿಸಿದ್ದ ವರ್ತೂರು ಸಂತೋಷ್ ತಂಡ, ದುಪ್ಪಟ್ಟು ರೋಷದೊಂದಿಗೆ ರಕ್ಕಸರಾಗಿ ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ. ಗಂಧರ್ವರಾಗಿದ್ದ ಸಂಗೀತ ತಂಡ ಟಾಸ್ಕ್ ಆಡಲಾರದೆ ಕುಸಿದು ಬಿದ್ದ ಹಾಗೆ ಕಾಣಿಸ್ತಾ ಇದೆ. ರಾಕ್ಷಸರು ಸಂಗೀತ ತಂಡಕ್ಕೆ ಕಿರುಕುಳ ಕೊಡುತ್ತಿದ್ದಾರೆ. ಇತ್ತ ರಕ್ಕಸರ ಗುಂಪಿನ ನಮ್ರತಾ, ‘ಅವಳು ಯಾವ ಸೀಮೆ ರಾಣಿ ಗುರೂ.. ಇಂಡಿವಿಷುವಲ್ ಗೇಮ್ ಆಡೋಕೆ ಬಂದಿಲ್ವಾ ನೀವು?’ ಎಂದು ಕಿರುಚಾಡಿದ್ದಾರೆ.
ಕಿರುಕುಳ ತಾಳಲಾರದೆ ತಟಸ್ಥವಾಗಿ ಉಳಿಯಲು ನಿರ್ಧರಿಸಿದ ಕಾರ್ತಿಕ್..!
ಈ ವಾರ ಇಡೀ ಮನೆ ಗೊಂದಲಗೀಡಾಗಿದೆ, ಕಳೆದ ದಿನದ ಆಟವನ್ನ ಗಮನದಲ್ಲಿಟ್ಟುಕೊಂಡು ವಿನಯ್ ಕಾರ್ತಿಕ್ ಮೇಲೆ ಬೇಕಾಗಿ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ. ವಿನಯ್ ಸಹಿಸಲಸಾಧ್ಯ ಟಾಸ್ಕ್ ಗಳನ್ನ ಬೇಕಾಗಿ ಕೊಡುತ್ತಿರುವುದರಿಂದ ಕಾರ್ತಿಕ್ ಬಹಳಷ್ಟು ಸುಸ್ತಾಗಿ ನೆಲದ ಮೇಲೆ ಮಲಗಿ , ತನ್ನ ಕೈಯ್ಯಲ್ಲಿ ಸಾಧ್ಯವಾಗುತ್ತಿಲ್ಲ ದಯವಿಟ್ಟು ತನ್ನನ್ನು ಬಿಟ್ಟುಬಿಡಿ ಎಂದು ಗೋಗರೆದಿದ್ದಾರೆ. ಯಾವುದು ಸರಿ ಯಾವುದು ತಪ್ಪು ಎನ್ನುವುದು ವಿನಯ್ ತನಗೆ ಅರಿವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಈ ವಾರದ ಕತೆ ಕಿಚ್ಚನ ಜೊತೆಯ ಪಂಚಾಯಿತಿ ಕಟ್ಟೆಯಲ್ಲಿ ಈ ಎಲ್ಲಾ ವಿಷಯ ನಿರ್ಧಾರವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.?
ಚೈತನ್ಯ, ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು