ಬಿಗ್ ಬಾಸ್ ಮನೆಯಲ್ಲಿ ವಿನಯ್ ನಮ್ರತಾ ಸ್ನೇಹಿತ ಒಂದು ಗುಂಪಾಗಿದ್ದರು ಆದರೆ ಇದುವರೆಗೂ ಅವರ್ಯಾರು ಸಹ ನೇರವಾಗಿ ನಾಮಿನೇಟ್ ಆಗಿರಲಿಲ್ಲ, ಮತ್ತು 50 ದಿನಗಳಿಂದಲೂ ಸಹ ಎದುರು ತಂಡದ ಸದಸ್ಯರ ಮೇಲೆ ಆರೋಪ ಹೊರಿಸುವುದರಿಂದ ಬಚಾವಾಗ್ತಾ ಇದ್ರು.
ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತ್ ಫುಲ್ ಟ್ರೋಲ್..!
ಆದರೆ ಈ ಬಾರಿ ವಿನಯ್ ತಂಡವನ್ನು ನಾಮಿನೇಟ್ ಮಾಡುವಂತ ಅವಕಾಶವಿತ್ತು ಆದರೆ ಈ ಬಾರಿಯನ್ನು ಬಿಗ್ ಬಾಸ್ ಸ್ನೇಹಿತ್ ಗೆ ನೇರ ನಾಮಿನೇಟ್ ಮಾಡುವ ಅವಕಾಶ ಕೊಟ್ಟಿರುವುದರಿಂದ ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಗಿದೆ ಇನ್ನು ಸೋಶಿಯಲ್ ಮೀಡಿಯಾದಲ್ಲಂತು ಸಂಗ ಬುಲ್ಲಾಗೆ ಮಾಣಿಕ್ಯ ಸಿಕ್ಕೈತೆ ಎಂದು ಕಾಮೆಂಟ್ ಮಾಡುವ ಮೂಲಕ ಸಿಟ್ಟು ಹೊರಹಾಕಿದ್ದಾರೆ .
ಈ ಬಾರಿಯೂ ಸಹ ವಿನಯ್ ತಂಡ ಬಚಾವ್ …!
ಸದ್ಯ ಈ ಬಾರಿಯಾದರೂ ವಿನಯ್ ತಂಡ ನಾಮಿನೇಷನ್ ನಿಂದ ಬಚಾವಾಗಲು ಸಾಧ್ಯವಿಲ್ಲ ಎಂದು ವೀಕ್ಷಕರ ಕಾದು ಕುಳಿತಿದ್ದರು. ಆದರೆ ಈ ಬಾರಿ ಸ್ನೇಹಿತ್ ಕೈಗೆ ನೇರ ನಾಮಿನೇಟ್ ಮಾಡುವ ಅವಕಾಶ ಕೊಟ್ಟಿರುವುದರಿಂದ ವಿನಯ್ ಟೀಮ್ ಅನ್ನು ಬಚಾವ್ ಮಾಡಿದ್ದಾನೆ ಇದು ಬಿಗ್ ಬಾಸ್ ಪ್ರೇಕ್ಷಕರಿಗೆ ನುಂಗಲಾರದ ತುತ್ತಾಗಿದೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಆಗುವಂತಹ ಸಾಧ್ಯತೆಗಳು ಹೆಚ್ಚು ಎಂದು ಬಿಗ್ ಬಾಸ್ ಪ್ರೇಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ. ಹೀಗಾಗಿ ಮುಂದೆ ಏನು ನಡೆಯುತ್ತದೆ ಎಂಬುದನ್ನ ಕಾದು ನೋಡಬೇಕಿದೆ.