ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರು ಚುನಾವಣಾ ಸೋಲಿನ ಬೆನ್ನಲ್ಲೇ ಕುಸಿದು ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
3 ದಿನಗಳಿಂದ ನಿರಂತರವಾಗಿ ಬೇಟಿ ನೀಡ್ತಾಯಿದ್ರ…!
ಕೆಸಿಆರ್ ಗೆ 69 ವರ್ಷ ವಯಸ್ಸಾಗಿದ್ದು ಗುರುವಾರ ರಾತ್ರಿ ಎರ್ರವಲ್ಲಿ ಫಾರ್ಮ್ ಹೌಸ್‌ನಲ್ಲಿ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ವಿಧಾನಸಭೆ ಚುನಾವಣೆಯಲ್ಲಿನ ಆಘಾತಕಾರಿ ಸೋಲಿನ ಬಳಿಕ ಮಾಜಿ ಸಿಎಂ ಕೆಸಿಆರ್, ತಮ್ಮ ಮನೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಜನರನ್ನು ಭೇಟಿ ಮಾಡುತ್ತಿದ್ದರು.ಬಿಆರ್‌ಎಸ್‌ನ ಕಾರ್ಯಕರ್ತರು ಮತ್ತು ಪಕ್ಷದ ಶಾಸಕರ ಜತೆ ಅವರು ಹಲವು ಸಭೆಗಳನ್ನು ನಡೆಸಿದ್ದರು. ಎರ್ರವಳ್ಳಿಯಲ್ಲಿನ ತಮ್ಮ ಫಾರ್ಮ್ ಹೌಸ್‌ನಲ್ಲಿ ಅವರು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.