30.2 C
Bengaluru
Sunday, February 25, 2024

Bengaluru Tech Summit 2023: ಇಂದಿನಿಂದ 3 ದಿನ ಬೆಂಗಳೂರು ಟೆಕ್ ಶೃಂಗಸಭೆ

#Bengaluru #Tech Summit 2023 # 3 days from # today

ಬೆಂಗಳೂರು: ಇಂದಿನಿಂದ 3 ದಿನಗಳ ಕಾಲ ಅರಮನೆ ಆವರಣದಲ್ಲಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2023(Bangalore Technology Summit) ಆರಂಭವಾಗಲಿದೆ. ಇದು 26ನೇ ಶೃಂಗಸಭೆಯಾಗಿದ್ದು, 30ಕ್ಕೂ ಹೆಚ್ಚು ರಾಷ್ಟ್ರಗಳ ತಂತ್ರಜ್ಞರು, ಸಂಶೋಧಕರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಸಿದ್ದರಾಮಯ್ಯ, ಡಿಕೆಶಿ ಶೃಂಗಸಭೆಯನ್ನುಉದ್ಘಾಟಿಸಲಿದ್ದಾರೆ .ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಎಂ ಬಿ ಪಾಟೀಲ್, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ, ಎಲೆಕ್ಟ್ರಾನಿಕ್ಸ್, ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಗಳಾದ ಡಾ.ಏಕ್ ರೂಪ್ ಕೌರ್, ಎಸ್.ಟಿ.ಪಿ.ಐ ನಿರ್ದೇಶಕರಾದ ಶೈಲೇಂದ್ರ ತ್ಯಾಗಿ ಮತ್ತು ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾದ ದರ್ಶನ್ ಹೆಚ್.ವಿ ಉಪಸ್ಥಿತರಿರಲಿದ್ದಾರೆ. 30 ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಟೆಕ್ ಫೆಸ್ಟ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಕರ್ನಾಟಕ ಐಟಿ ಇಲಾಖೆ ತಿಳಿಸಿದೆ.

ಸಾಫ್ಟ್‌ವೇರ್‌ ತಂತ್ರಜ್ಞಾನಗಳ ರಫ್ತಿನ ವಿಚಾರದಲ್ಲಿ ರಾಜ್ಯ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದ್ದು, ದೇಶದ ಒಟ್ಟಾರೆ ಸಾಫ್ಟ್‌ವೇರ್‌ ರಫ್ತು ಪ್ರಮಾಣದಲ್ಲಿ ಶೇ.40 ಕರ್ನಾಟಕದ್ದಾಗಿದೆ,ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ, ಫ್ರಾನ್ಸ್‌, ಜಪಾನ್‌, ನೆದರ್‌ಲ್ಯಾಂಡ್‌, ಇಸ್ರೇಲ್‌, ಇಂಗ್ಲೆಂಡ್‌, ಸ್ವಿಡ್ಜರ್‌ಲ್ಯಾಂಡ್‌ ಸೇರಿ ಸುಮಾರು ಐವತ್ತಕ್ಕೂ ಅಧಿಕ ದೇಶಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 200ಕ್ಕೂ ಹೆಚ್ಚು ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ಪರಿಣಿತರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಗ್ಲೋಬಲ್‌ ಇನ್ನೋವೇಷ‌ನ್‌ ಅಲೈನ್ಸ್‌ (ಜಿಐಎ) ಪಾಲುದಾರ ದೇಶಗಳಿಂದ ಸುಮಾರು 16 ಸಂವಾದಗಳು ನಡೆಯಲಿವೆ.ಮೂರು ದಿನಗಳ ಸಮಾವೇಶ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಂವಾದಗಳು, ಡೀಪ್ ಟೆಕ್, ಸ್ಟಾರ್ಟ್-ಅಪ್‌ಗಳು ಮತ್ತು ಬಯೋಟೆಕ್, ಅಂತರಾಷ್ಟ್ರೀಯ ಪ್ರದರ್ಶನ, ಜಾಗತಿಕ ಆವಿಷ್ಕಾರ ಮೈತ್ರಿ, ಭಾರತ-ಅಮೆರಿಕ ಟೆಕ್ ಕಾನ್ಕ್ಲೇವ್, ಆರ್ ಅಂಡ್ ಡಿ-ಲ್ಯಾಬ್2-ಮಾರುಕಟ್ಟೆ, ಬಿ2ಬಿ ಸಭೆಗಳನ್ನು ಒಳಗೊಂಡಿರುತ್ತದೆ.ಬೆಂಗಳೂರು ಟೆಕ್ ಶೃಂಗಸಭೆ-2023ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ : www.bengalurutechsummit.com

Related News

spot_img

Revenue Alerts

spot_img

News

spot_img