24.4 C
Bengaluru
Sunday, September 8, 2024

ಬೆಂಗಳೂರು:ತೇಜಸ್ ಯುದ್ಧ ವಿಮಾನದಲ್ಲಿ ಪ್ರಧಾನಿ ಮೋದಿ ಪ್ರಯಾಣ

#Bengaluru# Prime Minister #Narendra Modi #travels # Tejas fighter jet

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತೇಜಸ್‌ ವಿಮಾನದೊಳಗೆ(Tejas fighter jet)ಸಂಚಾರ ನಡೆಸಿದರು.ತೇಜಸ್ ಯುದ್ಧ ವಿಮಾನದಲ್ಲಿ ಪ್ರಧಾನಿ ಮೋದಿಯವರು ಸುಮಾರು 45 ನಿಮಿಷಗಳ ಕಾಲ ಹಾರಾಟ ನಡೆಸಿದರು.ಪ್ರಧಾನಿಯವರು ಟ್ವೀಟ್ ಮಾಡಿ, ಇಂದು ತೇಜಸ್‌ನಲ್ಲಿ ಹಾರುತ್ತಿರುವಾಗ, ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ನಾವು ಸ್ವಾವಲಂಬನೆಯ ಕ್ಷೇತ್ರದಲ್ಲಿ ವಿಶ್ವದ ಯಾರಿಗಿಂತ ಕಡಿಮೆಯಿಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ ಎಂದಿದ್ದಾರೆ. ಅನುಭವವನ್ನು ಪುಷ್ಟೀಕರಿಸಿದ ಮೋದಿ ಅವರು ಮತ್ತೊಂದು ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ: “ತೇಜಸ್‌ನಲ್ಲಿನ ವಿಹಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವವು ನಂಬಲಾಗದಷ್ಟು ಸಮೃದ್ಧವಾಗಿದೆ,ಭಾರತೀಯ ವಾಯುಪಡೆ, ಡಿಆರ್ ಡಿಒ(DRDO) ಮತ್ತು ಹೆಚ್ ಎಎಲ್(HAL) ಮತ್ತು ಎಲ್ಲಾ ಭಾರತೀಯರಿಗೆ ಮನದಾಳದ ಅಭಿನಂದನೆ ತಿಳಿಸಿದರು,

ನಮ್ಮ ದೇಶದ ಸ್ಥಳೀಯ ಸಾಮರ್ಥ್ಯಗಳಲ್ಲಿ ನನ್ನ ವಿಶ್ವಾಸವನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಮತ್ತು ನಮ್ಮ ರಾಷ್ಟ್ರೀಯತೆಯ ಬಗ್ಗೆ ನನಗೆ ಹೊಸ ಹೆಮ್ಮೆ ಮತ್ತು ಆಶಾವಾದವನ್ನು ನೀಡಿದೆ ಎಂದಿದ್ದಾರೆ.ರಕ್ಷಣಾ ಇಲಾಖೆಯಲ್ಲಿ ಭಾರತ ಪಾರುಪತ್ಯ ಸಾಧಿಸ್ತಿದೆ. ಈ ಸಾಧನೆಯನ್ನ ಇಮ್ಮಡಿಗೊಳಿಸಲು ಇಂದು ಪ್ರಧಾನಮಂತ್ರಿಗಳು ಬೆಂಗಳೂರಿಗೆ ಬಂದಿದ್ದಾರೆ.೨೦೨೫ರ ವೇಳೆಗೆ ರಷ್ಯಾದ ಮಿಗ್‌ -೨೧ ಯುದ್ಧ ವಿಮಾನದ ಬದಲಿಗೆ ಪೂರ್ಣ ಪ್ರಮಾಣದಲ್ಲಿ ತೇಜಸ್‌ ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆ ಮತ್ತು ನೌಕಾಸೇನೆಯಲ್ಲಿ ಬಳಸಲಾಗುತ್ತದೆ.

Related News

spot_img

Revenue Alerts

spot_img

News

spot_img