ಬೆಂಗಳೂರು, ಏ. 05 : ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ 10 ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಬೆಂಗಳೂರಿನಲ್ಲಿ ಇರುವಷ್ಟು ಇಂಜಿನಿಯರ್ ಗಳು ಎಲ್ಲೂ ಇಲ್ಲ ಎನ್ನಬಹುದು. ಭಾರತದ ಮೂಲೆ ಮೂಲೆಗಳಿಂದಲೂ ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರೇ ಹೆಚ್ಚು. ಆದರೆ, ಕೋವಿಡ್ ಸಂದರ್ಭದಲ್ಲಿ ಎಲ್ಲರೂ ವರ್ಕ್ ಫ್ರಮ್ ಹೋಮ್ ಸಿಕ್ಕ ಕಾರಣ, ಎಲ್ಲರೂ ಕೊರೊನಾಗೆ ಹೆದರಿ ತಮ್ಮ ತಮ್ಮ ಊರು ಸೇರಿಕೊಂಡರು. ಊರಿನಲ್ಲಿ ಕೆಲಸ ಮಾಡುತ್ತಾ, ಕೊರೊನಾದಿಂದ ಪಾರಾಗುವ ಜೊತೆಗೆ ಬಾಡಿಗೆ ಹಣವನ್ನೂ ಉಳಿಸುವ ಪ್ರಯತ್ನ ಮಾಡಿದ್ದರು. ಆದರೆ, ಈಗ ಕಳೆದ ವರ್ಷಾರಂಭದಿಂದ ಎಲ್ಲರೂ ಕೆಚೇರಿಗೆ ಹೋಗಬೇಕಾಗಿದ್ದು, ಪ್ರತಿಯೊಬ್ಬರೂ ಬೆಂಗಳೂರಿಗೆ ಬರಲು ಶುರು ಮಾಡಿದ್ದಾರೆ.
ಬೆಂಗಳುರಿನಲ್ಲಿ ಬರೋಬ್ಬರಿ ಒಂದೂವರೆ ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಅಮೆಜಾನ್,ಕಾಮ್ ಇಂಕ್, ಆಕ್ಸೆಂಚ್ಯುರ್ ನಂತಹ ದೊಡ್ಡ ದೊಡ್ಡ ಕಂಪನಿಗಳು ಬೆಂಗಳೂರಿನಲ್ಲಿ ಇವೆ. ಕೋವಿಡ್ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಹೊರಟ ಮೇಲೆ, ಅಪಾರ್ಟ್ ಮೆಂಟ್ ಗಳ ಬಅಡಿಗೆ ಗಳು ಕೂಡ ಕುಸಿದವು. ಮಾಲೀಕರು ಕಡಿಮೆ ಬೆಲೆಗೆ ಬಾಡಿಗೆಯನ್ನು ನೀಡಲು ಮುಂದಾದರು. ಆದರೆ, ಈಗ ಎಲ್ಲರೂ ಬೆಂಗಳೂರಿಗೆ ಹಂತ ಹಂತವಾಗಿ ಆಗಮಿಸುತ್ತಿದ್ದಾರೆ.
ಬೆಂಗಳೂರಿನ ಬಾಡಿಗೆ ಮಾರುಕಟ್ಟೆ ಈಗ ಬೆಂಕಿಯಂತೆ ಆಗಿದೆ. ಬಿಸಿಲಿನ ತಾಪಕ್ಕಿಂತಲೂ ಬಾಡಿಗೆಯ ಬಿಸಿ ಎಲ್ಲರಿಗೂ ತಟ್ಟುತ್ತಿದೆ. ಬಾಡಿಗೆಗಳು ಮೊದಲಿಗಿಂತಲೂ ಎರಡರಷ್ಟು ಹೆಚ್ಚಾಗಿದೆ. ಅದರಲ್ಲೂ ರಿಂಗ್ ರೋಡ್ ಹೊರವಲಯ ಹಾಗೂ ವೈಟ್ ಫೀಲ್ಡ್ ನಲ್ಲಿ ಸುಮಾರು 17ಕಿಲೋಮೀಟರ್ ನಲ್ಲಿ ಬರೋಬ್ಬರಿ 350 ಕಂಪನಿಗಳು ಇವೆ. ಇವುಗಳಲ್ಲಿ ಕಡಿಮೆ ಎಂದು ಸುಮಾರು ಒಂದು ಕೋಟಿ ಮಂದಿ ಕೆಲಸ ನಿರ್ವಹಿಸುತ್ತಿದ್ದಾರರೆ. ಇವರೆಲ್ಲರೂ ಬಾಡಿಗೆ ಮನೆಗಳು ಬೇಕು. ಈಗ ಎಲ್ಲರೂ ಬಾಡಿಗೆ ಮನೆಗಳನ್ನು ಹುಡುಕು ಹುಡುಕಿ ಸಾಕಾಗಿದ್ದಾರೆ.
ಕೆಲ ಮಾಲೀಕರು, ಲಿಂಕ್ಡನ್ ಪ್ರೊಫೈಲ್ ಕೇಳಿ, ಸಂದರ್ಶನ ಮಾಡಿ ಮನೆಯನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಇನ್ನೂ ಕೆಲವರು ಡಬಲ್ ರೇಟ್ ಕೇಳುತ್ತಿದ್ದಾರೆ. ಈ ಬಗ್ಗೆ ಕೆಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಚಿಕ್ಕ ಚಿಕ್ಕ ಡಬಲ್ ಬೆಡ್ ರೂಮ್ ಬಾಡಿಗೆ ಮನೆಗಳಿಗೂ 50,000 ಬಾಡಿಗೆಯನ್ನು ಕೇಳುತ್ತಿದ್ದಾರಂತೆ. ಕೋವಿಡ್ ಸಂದರ್ಭದಲ್ಲಿ ಅನುಭವಿಸದ ನಷ್ಟವನ್ನು ಈಗ ಸರಿಸಮ ಮಾಡಿಕೊಳ್ಳಲು ಬಾಡಿಗೆಯ ಹಣವನ್ನು ಹೆಚ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ ಈಗ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೆಲೆ ಗಗನಕ್ಕೇರಿದೆ.