24.8 C
Bengaluru
Sunday, May 19, 2024

ಇಂದಿರಾನಗರದಲ್ಲಿ ಈಗ ವಸತಿ ಪ್ರದೇಶಗಳು ಮಾಯವಾಗಿದ್ದು: ಭೂಮಿ ಬೆಲೆ ಕೈಗೆಟಕದಷ್ಟು ಎತ್ತರಕ್ಕೆ ಏರಿಕೆ

ಬೆಂಗಳೂರು, ಏ. 04 : ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ದೂರ ದೂರಕ್ಕೆ ಒಂದೊಂದು ಮನೆಗಳು.. ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಓಡಾಡಬೇಕಿತ್ತು. ಸೈಕಲ್, ಜಟಕಾ ಬಂಡಿ ಏರಿ ಪ್ರಯಾಣಿಸುತ್ತಿದ್ದವರೇ ಹೆಚ್ಚು. ಗಂಟೆಗೊಂದು ಬಸ್, ಅಗತ್ಯವಿದ್ದವರ ಮನೆಯಲ್ಲಷ್ಟೇ ಬೈಕ್ ಹಾಗೂ ಕಾರುಗಳು ಇರುತ್ತಿದ್ದವು. ಆದರೆ, ಈಗ ಬೆಂಗಳುರು ಎಷ್ಟು ಬೆಳೆದಿದೆ ಎಂದರೆ, ರಾತ್ರಿ ಹೊತ್ತಲ್ಲೂ ಕೂಡ ರಸ್ತೆಗಳು ಖಾಲಿ ಇರುವುದಿಲ್ಲ. ಅಷ್ಟು ಬ್ಯುಸಿ ನಗರವಾಗಿ ಮಾರ್ಪಾಡುಗೊಂಡಿದೆ. ಅಷ್ಟಕ್ಕೂ ಈಗ ಯಾಕೆ ಬೆಂಗಳೂರಿನ ಬಗ್ಗೆ ಹೇಳುತ್ತಿದ್ದಾರೆ ಅಂದುಕೊಳ್ಳುತಿದ್ದೀರಾ.. ವಿಷಯ ಇದೆ, ಬೆಂಗಳುರಿನ ಇಂದಿರಾ ನಗರವೇ ಇದಕ್ಕೆ ಕಾರಣ.

 

ಹೌದು.. ಒಂದು ಕಾಲದಲ್ಲಿ ಇಂದಿರಾನಗರ ಬಹಳ ಶಾಂತಿಯುತವಾಗಿ ಇದ್ದ ನಗರ. ಈಗ ಇದು ಐಟಿ ಹಬ್‌ ಆಗಿ ಮಾರ್ಪಾಟಾಗಿದೆ.
ಐಟಿ ಹಬ್ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಇಂದಿರಾನಗರ ಒಂದು ಕಾಲದಲ್ಲಿ ಶಾಂತಿಯುತ ಪ್ರದೇಶ ಎಂಬ ಹೆಗ್ಗಳಿಕೆಗೆ ಕಾರಣವಾಗಿತ್ತು. ಆದರೆ ಇಂದು ಅದೇ ನಗರ ಚಟುವಟಿಕೆಯ ಮುಖ್ಯ ಕೇಂದ್ರವಾಗಿದೆ. ದೊಮ್ಮಲೂರು ಸೇತುವೆಯಿಂದ 100 ಫೀಟ್ ರಸ್ತೆಯಾದ್ಯಂತ ಕಣ್ಣಿಗೆ ಕಾಣಿಸುವುದೇ ದೊಡ್ಡ ದೊಡ್ಡ ಶೋ ರೂಮ್‌ ಗಳು. ಒಂದಕ್ಕಿಂತ ಒಂದು ಆಕರ್ಷಕವಾಗಿದ್ದು, ವ್ಯಾಪಾರದಲ್ಲೂ ಅಷ್ಟೇ ಪೈಪೋಟಿ ಇದೆ. ಮುಂದಕ್ಕೆ ಹೋದಂತೆ, ಬಾರ್‌, ಪಬ್‌, ಹೋಟೆಲ್‌ ಗಳು ರಾರಾಜಿಸುತ್ತಿವೆ.

90 ರ ದಶಕದಲ್ಲಿದ್ದ ಇಂದಿರಾನಗರ 2000 ಇಸವಿಯೊಳಗೆ ಸಂಪೂರ್ಣವಾಗಿ ಮಾರ್ಪಾಡಾಗಿತ್ತು. ಈಗಂತೂ ಆಗಿನ ಇಂದಿರಾ ನಗರವಾಗಿ ಉಳಿದೇ ಇಲ್ಲ. 70 ರ ದಶಕದಲ್ಲಿ ಬಿಡಿಎ ಲೇಔಟ್‌ ಮಾಡಲು ಪ್ರಾರಂಭಿಸಿತು. ವಿಶಾಲವಾಗಿದ್ದ ಈ ಪ್ರದೇಶ ಈಗ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಇಂದು ಇಂದಿರಾ ನಗರದಲ್ಲಿ ನಡೆದಾಡಲು ಕೂಡ ಜಾಗವಿಲ್ಲ. ಅಷ್ಟರ ಮಟ್ಟಕ್ಕೆ ಇಂದಿರಾ ನಗರ ಬ್ಯುಸಿ ಏರಿಯಾ ಆಗಿದೆ. ಕಳೆದ 30 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿರುವವರು ನಗರ ಬದಲಾದ ಬಗ್ಗೆ ವಿಷಾಧವನ್ನು ವ್ಯಕ್ತಪಡಿಸಿದ್ದಾರೆ.

ಇಂದಿರಾನಗರ ಹಾಗೂ ಡಿಫೆನ್ಸ್ ಕಾಲೋನಿ ನಿವಾಸಿಗಳು ಇಲ್ಲಿ ವೀಕೆಂಡ್‌ ನಲ್ಲಿ ಕಾರುಗಳನ್ನು ಪಾರ್ಕ್‌ ಮಾಡಲು ಕೂಡ ಸ್ಥಳವಿಲ್ಲದೇ ಒದ್ದಾಡುತ್ತಿದ್ದಾರೆ. 90 ರ ದಶಕದ ಮಧ್ಯಭಾಗದಲ್ಲಿ ಭೂಮಿಯ ಬೆಲೆ ಇದ್ದಕ್ಕಿದ್ದಂತೆ 50-70 ಪ್ರತಿಶತದಷ್ಟು ಏರಿಕೆಯನ್ನು ಕಂಡಿದೆ. ಆಗಷ್ಟೇ ಇಲ್ಲಿ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾದವಂತೆ. ಆಗ ಎಲ್ಲರೂ ರಿಯಲ್ ಎಸ್ಟೇಟ್ ಸಾಮರ್ಥ್ಯದ ಬಗ್ಗೆ ಅರಿವು ಮೂಡಿ ಎಲ್ಲರೂ ಭೂಮಿಯನ್ನು ಖರೀದಿಸಲು ಮುಂದಾದರಂತೆ. 2010 ರ ದಶಕದ ಸಂದರ್ಭದಲ್ಲಿ, ವಾಣಿಜ್ಯ ಬಾಡಿಗೆ ಬೆಲೆ ಚದರ ಅಡಿಗೆ 2,000 ರೂಪಾಯಿಗಳಷ್ಟಿತ್ತು. ಆದರೆ, ಈಗ ಬರೋಬ್ಬರಿ ರೂ 40,000 ದಷ್ಟು ಏರಿಕೆಯಾಗಿದೆ. ಇಲ್ಲಿನ ಭೂಮಿಯ ಬೆಲೆ ಅಂತೂ ಗಗನಕ್ಕೇರಿದೆ. ಚದರ ಅಡಿಗೆ ಸುಮಾರು 35,000 ರೂಪಾಯಿ ಆಗಿದೆ.

Related News

spot_img

Revenue Alerts

spot_img

News

spot_img