#Bengaluru #bandh #Tuesday #september26 #Kurburshantkumar
ಬೆಂಗಳೂರು:ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ, ಮಂಗಳವಾರ ಸೆಪ್ಟೆಂಬರ್.26ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆವರೆಗೆ ಸಿಲಿಕಾನ್ ಸಿಟಿ ಬಂದ್‌ಗೆ 150ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿದೆ. ಅಂತ ರೈತ ಮುಖಂಡ ಕುರುಬೂರು ಶಾಂತಕುಮಾರ್ ಘೋಷಣೆ ಮಾಡಿದ್ದಾರೆ.ಇಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವಂತ ರೈತರ ಕಾವೇರಿ ನೀರು ಬಿಡುಗಡೆ ವಿರೋಧಿಸಿದ ಪ್ರತಿಭಟನೆಯಲ್ಲಿ ಮಾತನಾಡಿದಂತ ಅವರು, ರಾಜ್ಯ ಸರ್ಕಾರ ಪದೇ ಪದೇ ಕಾವೇರಿ ನೀರು ಬಿಡೋದಿಲ್ಲ ಅಂತ ಹೇಳಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಇದನ್ನು ನಿಲ್ಲಿಸಬೇಕು ಅಂತ ಒತ್ತಾಯಿಸಿದರು.ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸೋದನ್ನು ಖಂಡಿಸಿ ಸೆಪ್ಟೆಂಬರ್ 26ರ ಮಂಗಳವಾರದಂದು ಬೆಂಗಳೂರು ಬಂದ್ ನಡೆಸಲಾಗುತ್ತದೆ. ಅಂದು ಶಾಲಾ-ಕಾಲೇಜುಗಳು ಮಕ್ಕಳಿಗೆ ತೊಂದರೆಯಾಗದಂತೆ ರಜೆ ನೀಡಬೇಕು.ಇದು ಕಾವೇರಿ ಹೋರಾಟದ ಪ್ರತಿಭಟನೆಯಂತ ತಿಳಿಯಬಾರದು. ಬೆಂಗಳೂರು ಜನತೆ ನೀರಿನ ಹೋರಾಟ ಅಂತ ತಿಳಿಯಬೇಕು ಎಂದು ಹೇಳಿದರು.ಮಂಗಳವಾರ ಬಂದ್ ದಿನ ಬೆಂಗಳೂರಿನಲ್ಲಿ ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್‌ವರೆಗೂ ಮೆರವಣಿಗೆ ನಡೆಯಲಿದೆ. ಈ ಬಂದ್‌ಗೆ ಐಟಿ ಕಂಪನಿಗಳು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು ಭಾಗಿಯಾಗಿ ಬೆಂಬಲ ನೀಡಬೇಕು. ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.