ಬೆಂಗಳೂರು, ಮೇ. 10 : ವಾಸ್ತುವಿನ ಪ್ರಭಾವ ನಿವೇಶನ ಖರೀದಿಸುವ ಕಡೆ ಮಾತ್ರವೇ ಇರುವುದಿಲ್ಲ. ಬಡಾವಣೆ ಹೇಗಿದೆ ಎಂಬುದನ್ನು ಕೂಡ ನೋಡಬೇಕಾಗುತ್ತದೆ. ಹಾಗಾಗಿ ನಿವೇಶನ ಖರೀದಿಸುವಾಗ ಸುತ್ತ ಮುತ್ತಲ ಪರಿಸರವೂ ಮುಖ್ಯವಾಗುತ್ತದೆ. ಲೇಔಟ್ ನಲ್ಲಿ ರಸ್ತೆ ಯಾವ ದಿಕ್ಕಿನಿಂದ ಶುರುವಾಗುತ್ತದೆ. ನೀರು ಯಾವ ದಿಕ್ಕಿನಿಮದ ಯಾವ ದಿಕ್ಕಿಗೆ ಹರಿಯುತ್ತದೆ. ಸುತ್ತಲ ಗಿಡ ಮರಗಳು, ದೇವಸ್ಥಾನಗಳು ಎಲ್ಲಿವೆ. ಆ ದೇವಸ್ಥಾನ ಯಾವುದು ಎಂಬುದು ಸೇರಿದಮತೆ ಹಲವು ವಿಚಾರಗಳನ್ನು ಗಮನಿಸಬೇಕಾಗುತ್ತದೆ.
ಆಲದ ಮರ, ಅರಳಿ ಮರ, ಹುಣಸೆ ಮರ, ಬೇವಿನ ಮರ, ಹತ್ತಿ ಮರಗಳು ಮನೆಯ ಸುತ್ತ ಇರುವುದು ಸೂಕ್ತವಲ್ಲ. ಆಲದ ಮರದ ಕೆಳಗೆ ಮತ್ಯಾವ ಗಿಡ ಮರಗಳು ಬೆಳೆಯುವುದಿಲ್ಲ. ಆಲದ ಮರ ಒಳ್ಳೆಯದೇ ಆದರೂ, ಎಲ್ಲಾ ಎನರ್ಜಿಯನ್ನು ಅದೊಂದೇ ತೆಗೆದುಕೊಳ್ಳುತ್ತದೆ. ಇನ್ನು ಅರಳಿ ಮರ ಎಂದರೆ, ಅದರಲ್ಲಿ ದೇವರ ವಾಸವಿರುತ್ತದೆ ಎಂದು ಹೇಳುತ್ತೇವೆ. ಹಾಗಾಗಿ ಇಂತಹ ಮರಗಳೆಲ್ಲವೂ ಆದಷ್ಟು ಮನೆಯ ಆವರಣದಿಂದ ದೂರ ಇರಬೇಕು.
ಇನ್ನು ಆ ಲೇಔಟ್ ಹತ್ತಿರದಲ್ಲಿ ಎಲ್ಲಾದರೂ ಸ್ಮಶಾನ ಇದೆಯಾ ಎಂಬುದನ್ನು ನೋಡಬೇಕಾಗುತ್ತದೆ. ಹಾಗೆಯೇ ಸೌಮ್ಯ ದೇವತೆಗಳು ಏನು ಕೆಲಸ ಮಾಡುತ್ತವೆ. ಉಗ್ರ ದೇವತೆಗಳು ಏನು ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. ಸೌಮ್ಯ ದೇವತೆಗಳು ಮನುಷ್ಯನ ಏಳಿಗೆಗಾಗಿ, ಬೆಳವಣಿಗೆಗಾಗಿ, ಅಭಿವೃದ್ಧಿಗಾಗಿ ವ್ಯಕ್ತಿಯನ್ನ ಬೆಳೆಸುತ್ತದೆ. ಇನ್ನು ಉಗ್ರ ದೇವತೆಗಳು ಮುನುಷ್ಯನಿಗೆ ಯಾವುದೇ ತೊಂದರೆಯಾಗದಂತೆ ತಡೆಗಟ್ಟುತ್ತವೆ. ನಿವೇಶನಗಳನ್ನು ಖರೀದಿಸುವಾಗ ಹಲವಾರು ಅಂಶಗಳ ಬಗ್ಗೆ ತಿಳಿದಿರಬೇಕು. ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.