23.1 C
Bengaluru
Monday, October 7, 2024

ಅಪಾರ್ಟ್ ಮೆಂಟ್ ಗಳನ್ನು ಸೆಲೆಕ್ಟ್ ಮಾಡುವಾಗ ವಾಸ್ತು ಬಗ್ಗೆ ಹೇಗೆ ನೋಡಬೇಕು

ಬೆಂಗಳೂರು, ಮಾ. 23 : ಈಗ ಅಪಾರ್ಟ್ ಮೆಂಟ್ ಕಲ್ಚರ್ ತುಂಬಾನೇ ಇದೆ. ಜನರು ಕೂಡ ಅಪಾರ್ಟ್ ಮೆಂಟ್ ಗಳನ್ನು ಖರೀದಿಸಲು ಬಯಸುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ಅಪಾರ್ಟ್ ಮೆಂಟ್ ಗಳನ್ನು ಖರೀದಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಯಾಕೆಂದರೆ, ಒಂದು ಸುರಕ್ಷತೆ ಆದ್ಯತೆ ಆದರೆ, ಮತ್ತೊಂದು ಜಾಗದ ಕನ್ವಿನಿಯಂಟ್ ಕೂಡ ಇದೆ. ಇನ್ನು ಮನೆಯಲ್ಲಿ ಇಬ್ಬರೇ ಗಂಡ ಹೆಂಡತಿ ಇದ್ದು, ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೆ, ಮನೆಯನ್ನು ಕಟ್ಟಲು ಕಷ್ಟವಾಗುತ್ತದೆ. ಅದರ ಕಡೆಗೆ ಹೆಚ್ಚು ಗಮನ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದೇ ಅಪಾರ್ಟ್ ಮೆಂಟ್ ಗಳಾದರೆ, ರೆಡಿಯಾಗಿ ಸಿಗುತ್ತದೆ. ಯಾವುದೇ ಕಷ್ಟ-ತಾಪತ್ರೆಯಗಳು ಇರುವುದಿಲ್ಲ.

ಹೀಗಾಗಿ ಹಲವರು ಅಪಾರ್ಟ್ ಮೆಂಟ್ ಗಳನ್ನು ಖರೀದಿಸಲು ಬಯಸುತ್ತಾರೆ. ಆದರೆ, ನಾವು ಅಪಾರ್ಟ್ ಮೆಂಟ್ ಗಳನ್ನು ಸೆಲೆಕ್ಟ್ ಮಾಡುವಾಗ, ಯಾವ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಗಮನಿಸಬೇಕು. ಇನ್ನು ಅಪಾರ್ಟ್ ಮೆಂಟ್ ಗಳಲ್ಲಿ ವಾಸ್ತು ಕಡೆ ಗಮನ ಕೊಡುವುದು ಕಷ್ಟ. ಹಾಗಾಗಿ ಅಪಾರ್ಟ್ ಮೆಂಟ್ ಗಳನ್ನು ಖರೀದಿಸುತ್ತಾರೆ. ಆದರೆ, ಅಪಾರ್ಟ್ ಮೆಂಟ್ ಗಳು ನೋಡೋದಕ್ಕೆ ಸುಂದರವಾಗಿರುತ್ತದೆ. ಆದರೆ, ವಾಸ್ತು ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಹಾಗಾಗಿ ನಾವು ಖರೀದಿಸುವ ಅಪಾರ್ಟ್ ಮೆಂಟ್ ನಲ್ಲಿ ವಾಸ್ತು ಪ್ರಕಾರ ಮನೆಗಳನ್ನು ನಿರ್ಮಾಣ ಮಾಡಲಾಗಿದ್ಯಾ ಎಂದು ತಿಳಿದುಕೊಳ್ಳಬೇಕಾಗುತ್ತದೆ.

ಇನ್ನು ಅಪಾರ್ಟ್ ಮೆಂಟ್ ಗಳಲ್ಲಿ ಗಾಳಿ, ಬೆಳಕು, ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಇದೆಲ್ಲವೂ ಸಮೃದ್ಧಿಯಾಗಿದ್ದರೆ ಖರೀದಿಸಬಹುದು. ಇನ್ನು ಖರೀದಿಸುವ ಮನೆಯ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದನ್ನು ನೋಡಬೇಕಾಗುತ್ತದೆ. ಇನ್ನು ಅಪಾರ್ಟ್ ಮೆಂಟ್ ನ ಸ್ಟೇರ್ ಕೇಸ್ ಎಲ್ಲಿದೆ ಎಂಬುದನ್ನೂ ಗಮನಿಸಬೇಕು. ಬ್ರಹ್ಮಸ್ಥಾನದಲ್ಲಿ ಅಥವಾ ಪೂರ್ವ ಹಾಗೂ ಉತ್ತರದಲ್ಲಿ ಅಪಾರ್ಟ್ ಮೆಂಟ್ ಗಳನ್ನು ನಿರ್ಮಾಣ ಮಾಡಲಾಗಿರುತ್ತದೆ. ಇವೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ. ಹೀಗಾಗಿ ಇದರ ಬಗ್ಗೆ ಗಮನಿಸಬೇಕು.

ಇನ್ನು ಸಂಪು ಯಾವ ದಿಕ್ಕಿನಲ್ಲಿರುತ್ತೆ, ಲಿಫ್ಟ್ ಎಲ್ಲಿ ಇಡಲಾಗಿದೆ. ಇನ್ನು ಒಳ ವಿನ್ಯಾಸದಲ್ಲೂ ವಾಸ್ತುವನ್ನು ನೋಡಬೇಕು. ಮುಖ್ಯದ್ವಾರ ನೈರುತ್ಯದಲ್ಲಿ ಇರಬಾರದು. ಮಲಗುವ ಕೊಠಡಿ, ಅಡುಗೆ ಮನೆ, ಬಾತ್ ರೂಮ್ ಹಾಗೂ ಲಿವಿಂಗ್ ರೂಮ್ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಬ್ರಹ್ಮಸ್ಥಾನದಲ್ಲಿ ಯಾವುದೇ ಗೋಡೆ ಅಥವಾ ಏನೂ ಇಡದಂತೆ ನೋಡಿಕೊಳ್ಳಿ. ಅಪಾರ್ಟ್ ಮೆಂಟ್ ಗಳಲ್ಲಿ ವಾಸ್ತು ಶೇ.70 ರಷ್ಟು ವಾಸ್ತು ಇದ್ದರೆ ಹೆಚ್ಚು. ಹಾಗಾಗಿ ಅಪಾರ್ಟ್ ಮೆಂಟ್ ಗಳನ್ನು ಖರೀದಿಸುವಾಗ ಸ್ವಲ್ಪ ಎಚ್ಚರ ವಹಿಸಿದರಾಯ್ತು.

Related News

spot_img

Revenue Alerts

spot_img

News

spot_img