24.8 C
Bengaluru
Sunday, May 19, 2024

ಚುನಾವಣೆ ಪ್ರಚಾರಕ್ಕಾಗಿ ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣ ದಾಖಲು

ಬೆಂಗಳೂರು, ಮೇ. 12 : ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. ನಾಳೆ ಕೌಂಟಿಂಗ್‌ ಇದ್ದು, ಚುನಾವಣೆಯಲ್ಲಿ ಯಾವ ಪಕ್ಷ ಗೆದ್ದಿದೆ ಎಂಬುದು ತಿಳಿಯಲಿದೆ. ಆದರೆ, ಚುನಾವಣೆಯನ್ನು ಎದುರಿಸಲು ಪಕ್ಷಗಳು ಹಲವು ರೀತಿಯ ಸರ್ಕಸ್‌ ಅನ್ನು ಮಾಡಿತ್ತು. ಈ ವೇಳೆ ಹಲವರು ಪ್ರಚಾರ, ರೋಡ್‌ ಶೋಗಳಲ್ಲಿ ಕಾರ್ಯಕರ್ತರು, ಅಭ್ಯರ್ಥಿಗಳು ಟ್ರಾಫಿಕ್‌ ನಿಯಮವನ್ನು ಉಲ್ಲಂಘಿಸಿದ್ದಾರೆ. ಇದೀಗ ಇವರಿಗೆಲ್ಲಾ ಟ್ರಾಫಿಕ್‌ ಪೊಲೀಸರು ದೊಡ್ಡ ಶಾಕ್‌ ಅನ್ನು ನೀಡಿದ್ದಾರೆ.

ಎಲೆಕ್ಷನ್‌ ಪ್ರಚಅರಕ್ಕಾಗಿ ಸುತ್ತಾಡುವಾಗ ಹಲವರು ಟ್ರಾಫಿಕ್‌ ರೂಲ್ಸ್‌ ಗಳನ್ನು ನುಲ್ಲಂಘಿಸಿದ್ದಾರೆ. ಇದರಿಂದಾಗಿ ಬೆಂಗಳೂರು ನಗರದಲ್ಲಿ 25 ದಿನದಲ್ಲಿ 4.12 ಲಕ್ಷ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿ ಇಷ್ಟೋಂದು ಪ್ರಕರಣಗಳು ದಾಖಲಾಗಿವೆ. ಅತಿ ವೇಗದ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸಿಂಗ್, ಹೆಲ್ಮೆಟ್ ರಹಿತ ಚಾಲನೆ, ಚಾಲನೆ ವೇಳೆ ಮೊಬೈಲ್ ಬಳಕೆ, ತ್ರಿಬಲ್ ರೇಡಿಂಗ್ ಸೇರಿದಂತೆ ಕೇಸ್ಗಳು ದಾಖಲಾಗಿವೆ.

ನಗರಾದ್ಯಂತ ಅಳವಡಿಸಿರುವ 250 ಐಟಿಎಂಎಸ್ ಕ್ಯಾಮರಾಗಳಿಂದ ಟ್ರಾಫಿಕ್‌ ಪೊಲೀಸರು ಫೈನ್ ಹಾಕಿದ್ದಾರೆ. ಇದರಿಂದ ಬರೋಬ್ಬರಿ 22.89 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಒಂದೇ ತಿಂಗಳಿನಲ್ಲಿ ಚುನಾವಣೆ ಪ್ರಚಾರಕ್ಕಾಗಿ ಟ್ರಾಫಿಕ್ ರೂಲ್ಸ್ ಅನ್ನು ಬ್ರೇಕ್ ಮಾಡಿರುವುದು ನೋಡಿ ಹಲವರು ಶಾಕ್ ಆಗಿದ್ದಾರೆ. ಒಂದೇ ತಿಂಗಳಲ್ಲಿ 4.12 ಲಕ್ಷ ಪ್ರಕರಣ ದಾಖಲು ಮಾಡಿದ್ದು, 22.89 ಕೋಟಿ ರೂ. ದಂಡವನ್ನು ಕಟ್ಟಬೇಕಿದೆ.

Related News

spot_img

Revenue Alerts

spot_img

News

spot_img