24.4 C
Bengaluru
Sunday, September 8, 2024

ಬೆಸ್ಕಾಂ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ SMS ಕಳುಹಿಸುತ್ತಿರುವ ಬಿಬಿಎಂಪಿ.

ಬೆಂಗಳೂರು: ಬೆಸ್ಕಾಂ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ SMS ಕಳುಹಿಸುತ್ತಿರುವ ಬಿಬಿಎಂಪಿಯಲ್ಲಿಸದ್ಯಕ್ಕೆ ಅನುದಾನದ ಕೊರತೆ ಎದ್ದುಕಾಣಿಸುತ್ತಿದೆ. ಏಂಕೆಂದರೆ ಬಿಬಿಎಂಪಿ ಇದೀಗ ತೆರಿಗೆ ಸಂಗ್ರಹದ ಮೇಲೆ ತನ್ನ ಗಮನವನ್ನು ಹೆಚ್ಚು ಕೇಂದ್ರೀಕರಿಸಿದೆ. ವಿಷಯವಿಷ್ಟೇ ತೆರಿಗೆ ಸಂಗ್ರಹದ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ದಾಖಲೆಗಳನ್ನು ಡಿಜಿಟಲೈಸ್ ಮಾಡುತ್ತಿದೆ. ಈ ಕುರಿತು ಆಸ್ತಿ ಮಾಲೀಕರಿಗೆ ತಮ್ಮ BWSSB ಮತ್ತು ಬೆಸ್ಕಾಂ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ SMS ಕಳುಹಿಸುತ್ತಿದೆ.

ಕಂದಾಯ ಅಧಿಕಾರಿಗಳು ಖಾತಾ ಸಂಖ್ಯೆ, ಆಸ್ತಿ ತೆರಿಗೆ ರಶೀದಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಮತ್ತು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ(BWSSB)ಯ ದಾಖಲೆ ಸಂಖ್ಯೆ ಸೇರಿದಂತೆ ಮುಂತಾದ ವಿವರಗಳನ್ನು ಸಂಗ್ರಹಿಸುತ್ತಾರೆ ಮತ್ತು ಆಸ್ತಿಯ ಫೋಟೋಗಳನ್ನು ಕ್ಲಿಕ್ ಮಾಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನು ಪ್ರಾಪರ್ಟಿಗಳನ್ನು ಮ್ಯಾಪ್ ಮಾಡಲಾಗುತ್ತದೆ ಮತ್ತು ಡಿಜಿಟೈಸ್ ಮಾಡಲಾಗುತ್ತದೆ. RR ಸಂಖ್ಯೆಗಳು ಮತ್ತು ಆಸ್ತಿ ದಾಖಲೆಗಳ ಏಕೀಕರಣವು ಆಸ್ತಿಯನ್ನು ಮಾರಾಟ ಮಾಡುವಾಗ ಇತರ ಮಹಾನಗರ ಪಾಲಿಕೆಯ ಇತರೆ ಕಚೇರಿಗಳ ಗೊಂದಲವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಬಿಬಿಎಂಪಿ ತೆರಿಗೆ ವ್ಯಾಪ್ತಿಯಲ್ಲಿ ಸುಮಾರು 30-40 ಲಕ್ಷ ಆದಾಯವನ್ನು ಹೆಚ್ಚಿಸಿಕೊಳ್ಳಲಾಗುತ್ತಿದೆ. ಪ್ರಾಯೋಗಿಕವಾಗಿ ಎರಡು ತಿಂಗಳ ಹಿಂದೆ ಸಿ.ವಿ.ರಾಮನ್ ನಗರ, ಕೊಡಿಗೇಹಳ್ಳಿ, ಹೊರಮಾವು, ಅರಕೆರೆ ವಾರ್ಡ್ ಗಳಲ್ಲಿ ಪ್ರಾಯೋಗಿಕವಾಗಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ, ಮುಂದುವರೆದು ಇದು ಎಷ್ಟರ ಮಟ್ಟಿಗೆ ಬಿಬಿಎಂಪಿಗೆ ಆದಾಯ ಸಂಗ್ರಹಿಸಲು ಅನುಕೂಲಕರವಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Related News

spot_img

Revenue Alerts

spot_img

News

spot_img