23.1 C
Bengaluru
Monday, October 7, 2024

ಬ್ಯಾಂಕ್ ಗಳೇ ಆಸ್ತಿಗಳ ಮೇಲೆ ಲೋನ್ ಕೊಡುವಾಗ ಎಚ್ಚರ!

ಜನರಲ್ಲಿ ನಿಕಟ ಬಾಂದವ್ಯ ಹೊಂದಿ ನಿರಂತರವಾಗಿ ವ್ಯವಹರಿಸುವ ಸಂಸ್ಥೆಯೆಂದರೆ ಅದು ಬ್ಯಾಂಕು,ಆದ ಕಾರಣ ಜನರ ದೈನಂದಿನ ವ್ಯವಹಾರದಲ್ಲಿ ಸಾರ್ವಜನಿಕ ಜೀವನದಲ್ಲಿ, ಗ್ರಾಹಕರೊಡನೆ ನಡೆಸುವ ವಹಿವಾಟಿನಲ್ಲಿ ಮುಖತಃ ಹಾಗೂ ಲಿಖಿತದಲ್ಲಿ ವೈವಿಧ್ಯಮಯವಾಗಿ ವ್ಯವಹರಿಸುತ್ತದೆ.
ಬ್ಯಾಂಕಿನ ವ್ಯವಹಾರಗಳಲ್ಲಿ ಸಾಲ ನೀಡಿಕೆ ಮಹತ್ವದ ಕಾರ್ಯವಾಗಿದೆ. ಬ್ಯಾಂಕು ಸಾಲ ನೀಡುವಾಗ , ಸಾಲಕ್ಕೆ ಇಡುವ ಭದ್ರತೆಯನ್ನು ಕುರಿತು ವಿಚಾರ ಮಾಡುವಂತೆಯೇ ಮರುಪಾವತಿ ಮಾಡುವ ವಿಧಾನವನ್ನೂ ಪರಿಶೀಲಿಸುತ್ತದೆ.

ಬ್ಯಾಂಕುಗಳು ಸಾಲಗಳನ್ನು ಸಾಮಾನ್ಯವಾಗಿ ಹುಂಡಿ, ಷೇರುಪತ್ರ, ಚರ-ಸ್ಥಿರಾಸ್ತಿ,ವಿಮಾ ಪಾಲಿಸಿ ಮೊದಲಾದವುಗಳ ದಾಖಲೆಗಳ ಆಧಾರದ ಮೇಲೆ ನೀಡುತ್ತದೆ.ಬ್ಯಾಂಕುಗಳು ಸಾಲಗಾರನಿಗಲ್ಲದೆ ಬೇರಾರಿಗೂ ಅವನ ವಹಿವಾಟಿಗೆ ಸಂಬಂಧಿಸಿದ ವಿವರಗಳನ್ನೂ ಸಾಲದ ಮಾಹಿತಿಯನ್ನೂ ಠೇವಣಿಯ ವಿವರಗಳನ್ನೂ ಬಹಿರಂಗಗೊಳಿಸುವುದಿಲ್ಲ.

ಈ ರೀತಿ ಬ್ಯಾಂಕುಗಳು ಹಾಗು ಗ್ರಾಹಕರ ನಡುವೆ ವ್ಯವಹಾರಿಕ ಒಂದಾಣಿಕ ಯಮಪಾಲನೆ ಇರುತ್ತದೆ, ಆದರೆ ಇತ್ತೀಚಿಗೆ ಬ್ಯಾಂಕುಗಳು ಸಹ ವಿವರಗಳನ್ನು ತೆಗೆದುಕೊಂಡು ಲೋನ್ ಕೊಡುವುದರಲ್ಲಿ ಎಡವಿದ ಸಾಕಷ್ಟು ನಿದರ್ಶನಗಳಿವೆ, ಅದರಲ್ಲೂ ಖಾಸಗಿ ಬ್ಯಾಂಕುಗಳು ಲೋನ್ ಕೊಡುವಾಗ ಮಾಡಿದ ಎಡವಟ್ಟು ಯಾವ ರೀತಿ ಅಪಾಯವನ್ನುಂಟು ಮಾಡಿದೆ ಎಂಬುದನ್ನು ಒಂದು ನೈಜ ಘಟನೆಯ ವಿವರದೊಂದಿಗೆ ತಿಳಿಯೋಣ.
ಇದು ನಡೆದಿರುವುದು ಬೇರೆಲ್ಲೂ ಅಲ್ಲ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಎಂಬುದು ವಿಶೇಷ!
‘A’ ಎಂಬ ವ್ಯಕ್ತಿಯು ತನ್ನ ಆಸ್ತಿಯನ್ನು ಆಧಾರವಾಗಿರಿಸಿ ಕೆನರಾ ಬ್ಯಾಂಕಿನಲ್ಲಿ ಸಾಲವನ್ನು ತೆಗೆದುಕೊಳ್ಳುತ್ತಾನೆ, ಅದಕ್ಕೆ ಅವನು ಬೇಕಾದ ಒರಿಜಿನಲ್ ಡಾಕ್ಯುಮೆಂಟ್ ಬಳಸಿಕೊಂಡು ಸಾಲ ಪಡೆಯುತ್ತಾನೆ.ಕೆಲವು ತಿಂಗಳ ವರೆಗೂ EMI ಅನ್ನು ಸಹ ಪಾವತಿಮಾಡಿರುತ್ತಾರೆ. ಮೂಲದಾಖಲೆಗಳೆಲ್ಲ ಬ್ಯಾಂಕ್ ನಲ್ಲೆ ಒತ್ತೆ ಇಟ್ಟಿರುತ್ತಾರೆ.

ಆದರೆ ಕೆಲದಿನಗಳ ನಂತರ ಇವನು ಅದೇ ಒರಿಜಿನಲ್ ದಾಖಲೆಗಳ ನಕಲು ಪ್ರತಿಯನ್ನು ಬಳಸಿಕೊಂಡು ಮಣಪುರಂ ಎಂಬ ಖಾಸಗಿ ಬ್ಯಾಂಕಿನಲ್ಲೂ ಸಾಲವನ್ನು ಪಡೆಯಲು ನಿರ್ಧರಿಸುತ್ತಾನೆ. ಇವನು ಬೇರೆ ಬ್ಯಾಂಕಿನಲ್ಲಿ ಇದೇ ಆಸ್ತಿ ಅಡವಾಗಿರಿಸಿ ಸಾಲ ತೆಗೆದುಕೊಳ್ಳುತ್ತಾನೆ. ನಂತರ ಎರಡು ಬ್ಯಾಂಕು ಗಳಿಗು ಸಾಲಮರುಪಾವತಿ ಮಾಡದೆ , ಬಾಕಿದಾರನಾಗುತ್ತಾನೆ.

ನಂತರ ಮಣಪುರಂ ಬ್ಯಾಂಕಿನವರು ಡೆಪ್ಯುಟಿ ರಿಜಿಸ್ಟ್ರಾರ್ ಸಹಕಾರ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ಸ್ವತ್ತನ್ನು ಮಾರಾಟಮಾಡದಿರಲು ತಡೆಯಾಗ್ನೆ ಪಡೆದುಕೊಳ್ಳುತ್ತಾರೆ ,ಇದನ್ನು ಉಪನೋಂದಣಾಧಿಕಾರಿಗಳ ಗಮನಕ್ಕೂ ತಂದು ಅಲ್ಲಿನ ತಕರಾರು ರಿಜಿಸ್ಟರ್ ಗೆ ದಾಖಲಿಸುತ್ತಾರೆ.

ಈ ಮದ್ಯೆ ಕೆನರಾ ಬ್ಯಾಂಕ್ ನವರು ಸಾಲ ಮರುಪಾವತಿ ಮಾಡದೆ ಬಾಕಿದಾರರಾಗಿರುವುದರಿಂದ,ತಾವು ಕೊಟ್ಟಿರುವ ಸಾಲ ಮತ್ತು ಬಡ್ಡಿ ವಸೂಲಿ ಮಾಡಿಕೊಳ್ಳಲು ಆಧಾರ ಮಾಡಿರುವ ಸ್ವತ್ತನ್ನು ಸಾರ್ವಜನಿಕ ನೋಟೀಸ್ ಹಾಕಿ ಹರಾಜು ಪ್ರಕ್ರಿಯೆ ಮುಗಿಸಿ ಕ್ರಯದ ಪ್ರಮಾಣಪತ್ರ ಮಾಡಿಕೊಡುತ್ತಾರೆ .
ಇದನ್ನು ನೋಂದಣಿ ಮಾಡಿಸಲು ಉಪನೋಂದಣಾಧಿಕಾರಿಗಳ ಕಛೇರಿಗೆ ಹೋದಾಗ ಒಂದೇ ಆಸ್ತಿಗೆ ಎರಡು ಕಡೆ ಲೋನ್ ಪಡೆದಿರುವುದು ಬೆಳಕಿಗೆ ಬಂದಿರುತ್ತದೆ.

ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಕಾನೂನಿನ್ವಯ ಸಾಲ ನೀಡುವವರು ಸ್ವತ್ತಿನ ಮೂಲ ದಾಖಲೆಗಳನ್ನು ಪಡೆಯಬೇಕು. ಕೆನರಾ ಬ್ಯಾಂಕ್ ನವರು ಈ ಪ್ರಕರಣದಲ್ಲಿ ಮೂಲ ದಾಖಲೆಗಳನ್ನು ಪಡೆದು ಕ್ರಮಬದ್ಧವಾಗಿ ಸಾಲ ನೀಡಿರುವುದು ಕಂಡುಬಂದಿದೆ ಹಾಗೂ ಯಾವುದೇ ಸ್ವತ್ತಿನ ದಾಖಲೆಗಳು ಪ್ರಥಮವಾಗಿ ನೊಂದಾದ ದಸ್ತಾವೇಜಿಗೆ ಕಾನೂನಿನ ಮಾನ್ಯತೆಯಿರುತ್ತದೆ. ಆದರೆ ಮಣಪುರಂ ಬ್ಯಾಂಕ್ ನವರು ಸಾಲ ನೀಡುವಾಗ ಪ್ರಮಾಣಿಕೃತ ಪ್ರತಿ ಪಡೆದು E.C. ದಾಖಲೆಯನ್ನು ಸರಿಯಾಗಿ ಪರಿಶೀಲಿಸದೆ ಇರುವುದು ಕಂಡುಬಂದಿದೆ ಹಾಗೂ ಇದು ಡೆಪ್ಯುಟಿ ರಿಜಿಸ್ಟ್ರಾರ್ ನ್ಯಾಯಾಲಯ, ಸಹಕಾರ ಇಲಾಖೆ ಇಲ್ಲಿ ಪ್ರಕರಣ ದಾಖಲಿಸುವಾಗ ಕೆನರಾ ಬ್ಯಾಂಕ್ ಪ್ರಕರಣ ಗಮನಕ್ಕೆ ತರದೆ ಇರುವುದು ಕಂಡುಬಂದಿದೆ.

ಕ್ರಯದ ಪ್ರಮಾಣಪತ್ರವನ್ನು ಸಬ್-ರಿಜಿಸ್ಟ್ರಾರ್ ರವರು ಯಾವುದೇ ನ್ಯಾಯಾಲಯದಲ್ಲಿ ನಿರ್ದೇಶನ ಇಲ್ಲದಿರುವುದರಿಂದ ನೋಂದಣಿಮಾಡಬೇಕಿರುತ್ತದೆ. ಮಣಪುರಂ ಫೈನಾನ್ಸ್ ರವರು ಕಾನೂನಾತ್ಮಕ ಅಂಶಗಳನ್ನು ಸರಿಯಾಗಿ ಪಾಲನೆ ಮಾಡದೆ ಇರುವುದು ಕಂಡುಬಂದಿದ್ದು ,ಆದ್ದರಿಂದ ಬ್ಯಾಂಕುಗಳು ಯಾವಾಗಲು ಸಾಲನೀಡುವಾಗ ಮೂಲದಾಖಲೆ ಸರಿಯಾಗಿ ಪರಿಶೀಲಿಸಿ , ಮೂಲದಾಖಲಾತಿ ಹಾಗೂ ಋಣಭಾರ ಪತ್ರ ಸರಿಯಾಗಿ ಪರಿಶೀಲಿಸಿ ಸಾಲನೀಡುವಾಗ ಪಾಲಿಸಬೇಕಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುತ್ತದೆ.ಬ್ಯಾಂಕುಗಳು ಈ ವಿಚಾರಗಳಲ್ಲಿ ಎಚ್ಚರವಹಿಸಬೇಕಿರುವುದು ಸೂಕ್ತ.

Related News

spot_img

Revenue Alerts

spot_img

News

spot_img