34.8 C
Bengaluru
Monday, April 15, 2024

ಬಾಂಗ್ಲ – ಪಾಕಿಸ್ತಾನ ಗಡಿ: ೨ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದ ಅಮಿತ್ ಶಾ

ಜಾರ್ಖಂಡ್ : ಬಾಂಗ್ಲಾ ಮತ್ತು ಪಾಕಿಸ್ತಾನ ಗಡಿಯಲ್ಲಿ ತಂತಿಬೇಲಿ ಹಾಕುವ ಕಾಮಗಾರಿ ಇನ್ನು ೨ ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಬಾಂಗ್ಲಾ – ಪಾಕಿಸ್ತಾನ ನಡುವೆ ಇನ್ನು ೬೦ ಕ.ಮೀ ತಂತಿಬೇಲಿ ಕಾಮಗಾರಿ ಬಾಕಿ ಉಳಿದಿದ್ದು ಇನ್ನೊಂದೆರಡು ವರ್ಷದಲ್ಲಿ ಮುಗಿಗುತ್ತದೆ ಎಂದು ಗೃಹ ಸಚಿವ ತಿಳಿಸಿದ್ದಾರೆ. ಕೇಂದ್ರಕ್ಕೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ೯ ವರ್ಷದಲ್ಲಿ ೫೬೦ ಕಿ.ಮೀ ಅಂತರದಲ್ಲಿ ಗಡಿಯನ್ನು ಬೇಲಿಯಿಂದ ಮುಚ್ಚಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಮೊದಲಿಗೆ ಗಡಿ ಸುರಕ್ಷಿತವಾಗಿರ ಬೇಕು, ಗಡಿ ಸುರಕ್ಷಿತವಾಗಿದ್ದರೆ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯವಾಗುವುದು. ಮೋದಿ ಸರ್ಕಾರ ದೇಶ ಅಭಿವೃದ್ಧಿಗೆ ಮಹತ್ತರ ಪಾತ್ರ ವಹಿಸಿದೆ. ನರೇಂದ್ರ ಮೋದಿ ಸರ್ಕಾರವು ದೇಶದ ಆರ್ಥಿಕತೆಯನ್ನು ೧೧ ರಿಂದ ೫ ಸ್ಥಾನಕ್ಕೆ ತಂದಿದ್ದಾರೆ. ಚಂದ್ರಯಾನ ಮಿಷನ್ , ಜಿ ೨೦ ಶೃಂಗಸಭೆಯೊಂದಿಗೆ ದೇಶವನ್ನು ಮೋದಿ ಸರ್ಕಾರ ತುಂಬ ಎತ್ತರಕ್ಕೆ ತೆಗೆದುಕೊಂಡು ಹೋಗಿದೆ.

Related News

spot_img

Revenue Alerts

spot_img

News

spot_img