23.1 C
Bengaluru
Monday, October 7, 2024

ಬೆಂಗಳೂರು ಮಹಾನಗರ ಪಾಲಿಕೆ ;ಬಜೆಟ್‌ಗೆ ಸಲಹೆ ಕೇಳಿದ ಬಿಬಿಎಂಪಿ

#Bangalore#municipal #Corporation #BBMP #asked # advice # budget

ಬೆಂಗಳೂರು: 2024-25ನೇ ಸಾಲಿನ ಬಿಬಿಎಂಪಿ ಬಜೆಟ್‌ಗೆ ಸಾರ್ವಜನಿಕರು ಸಲಹೆ ನೀಡುವಂತೆ ಆಹ್ವಾನ ನೀಡಲಾಗಿದೆ. ಬಿಬಿಎಂಪಿ(BBMP) ಯ 2024-25ನೇ ಸಾಲಿನ ಕರಡು ಆಯವ್ಯಯ(Budget)ದ ತಯಾರಿಕೆಯ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಹೊಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸಂಘ-ಸಂಸ್ಥೆಗಳು(Associations) ಹಾಗೂ ಸಾರ್ವ ಜನಿಕರು ತಮ್ಮ ಸಲಹೆ/ಸೂಚನೆಗಳನ್ನು ಆಹ್ವಾನಿಸಲಾಗಿದೆ. ಜನರು ಅವುಗಳನ್ನು ಪಾಲಿಕೆಗೆ ಸಲ್ಲಿಸಲು ಅನುಕೂಲ ವಾಗುವಂತೆ ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯ ದ್ವಾರದ ಬಳಿ ಸಲಹಾ ಪೆಟ್ಟಿಗೆ(ಬಾಕ್ಸ್) ಇರಿಸಿದ್ದು, ಅವುಗಳಿಗೆ ಹಾಕುವಂತೆ ಕೋರಿದೆ. ಅಲ್ಲದೆ, ಸಲಹೆ ಸೂಚನೆ – com a bbmpbudget@gmail. suggestions2bbmpbudget@ gmail.com ಮೂಲಕವೂ ಸಲ್ಲಿಸಬಹುದಾಗಿದೆ. ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ತಮ್ಮ ಸಲಹೆಗಳನ್ನು ಫೆ. 10ರೊಳಗೆ ಸಲ್ಲಿಸಬೇಕು ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಶಿವಾನಂದ್‌ ಕಲ್ಕೆರೆ ಕೋರಿದ್ದಾರೆ.ಬೆಂಗಳೂರು ಮಹಾನಗರದ ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ನಾಗರಿಕ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ.2023-2024ನೇ ಸಾಲಿನಲ್ಲಿ ಬಿಬಿಎಂಪಿ ರೂ.11,158 ಸಾವಿರ ಕೋಟಿ ಗಾತ್ರದ ಬಜೆಟ್ ಅನ್ನು ಮಂಡಿಸಿತ್ತು. 2022–23ನೇ ಸಾಲಿನ ಬಜೆಟ್‌(Budget) ಅನ್ನು ಕಳೆದ ವರ್ಷ ಮಾರ್ಚ್‌ 31ರಂದು ರಾತ್ರಿ 11.30ಕ್ಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ರಹಸ್ಯವಾಗಿ ಬಜೆಟ್‌ ಮಂಡಿಸಲಾಗಿತ್ತು.

Related News

spot_img

Revenue Alerts

spot_img

News

spot_img