ಚಿಕ್ಕೋಡಿ ಮೇ20 ;ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಸರ್ವೇ ಕಾರ್ಯ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.ಎಸ್ಎಂ ಕಲ್ಯಾಣ ಶೆಟ್ಟಿ ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕೋಡಿ ಭೂದಾಖಲೆ ಇಲಾಖೆ ಅಧಿಕಾರಿ. ಸಿದ್ದಪ್ಪ ಹಾಲಪ್ಪ ಪೂಜಾರಿ ಎಂಬುವರಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕಲ್ಯಾಣ ಶೆಟ್ಟಿ ಅವರನ್ನು ಬಂಧಿಸಿದ್ದಾರೆ.
ಜಾಗದ ಸರ್ವೇ ಕಾರ್ಯ ಮಾಡಿಕೊಡುವಂತೆ ರೈತ ಸಿದ್ದಪ್ಪ ಎಂಬುವರು ಅರ್ಜಿ ಸಲ್ಲಿಸಿದ್ದರು. ಆದರೆ ಸರ್ವೆ ಕಾರ್ಯಕ್ಕೆ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಲ್ಯಾಣ ಶೆಟ್ಟಿ ಅವರು ಆರು ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ನಂತರದಲ್ಲಿ ಎಂ ಕಲ್ಯಾಣ ಶೆಟ್ಟಿ ಚಿಕ್ಕೋಡಿ ಭೂ ದಾಖಲೆ ಇಲಾಖೆ ಅಧಿಕಾರಿ ವಿರುದ್ಧ ಸಿದ್ದಪ್ಪ ಹಾಲಪ್ಪ ಪೂಜಾರಿ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.ಸಿದ್ದಪ್ಪ ಹಾಲಪ್ಪ ಪೂಜಾರಿ ಅವರಿಂದ ಲಂಚದ ಹಣವಾಗಿ ಆರು ಸಾವಿರ ರೂಪಾಯಿ ಪಡೆಯುವಾಗ ಲೋಕಾಯುಕ್ತ ಪೊಲೀಸರು ಎಂ ಕಲ್ಯಾಣ ಶೆಟ್ಟಿ ಚಿಕ್ಕೋಡಿ ಭೂ ದಾಖಲೆ ಇಲಾಖೆ ಅಧಿಕಾರಿ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ,ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ್ ಅವರ ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ಇದಾಗಿದೆ.